ಇಡೀ ಚೀನಾವನ್ನೇ ಗುರಿಯಾಗಿಸಿ ದಾಳಿ ಧ್ವಂಸ ಮಾಡುವ ಶಕ್ತಿ ಇರುವ ಕ್ಷಿಪಣಿಯೊಂದು ತಯಾರಾಗಿದೆ ಗೊತ್ತಾ?
ಭಾರತ ನೂರಕ್ಕೂ ಅಧಿಕ ಉಪಗ್ರಹಗಳನ್ನು ಒಮ್ಮೆಲ್ಲೇ ನಭಕ್ಕೆ ಹಾರಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡುವ ಜತೆಗೆ, ಅಪಾರ ಶಸ್ತ್ರಾಸ್ತ್ರ ಸಂಗ್ರಹಣೆ, ಮೇಕ್ ಇನ್ ಇಂಡಿಯಾ ಮೂಲಕ ಶಸ್ತ್ರಾಸ್ತ್ರ ಉತ್ಪಾದನೆ, ಖಂಡಾಂತರ ಕ್ಷಿಪಣಿ ತಯಾರು ಸೇರಿ ರಕ್ಷಣೆ ವಿಷಯದಲ್ಲೂ ಹಲವು ಕ್ರಮ ಕೈಗೊಂಡಿದೆ.
ಇದರ ಭಾಗವಾಗಿ, ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಶೀಘ್ರದಲ್ಲೇ ಇಡೀ ಚೀನಾವನ್ನೇ ಗುರಿಯಾಗಿಸಿ ದಾಳಿ ಮಾಡುವ ಶಕ್ತಿ ಹೊಂದಿರುವ ಕ್ಷಿಪಣಿಯೊಂದನ್ನು ಅಳವಡಿಸಿಕೊಳ್ಳಲಿದೆ. ಆ ಮೂಲಕ ಗಡಿಯಲ್ಲಿ ಪದೇಪದೆ ಉಪಟಳ ಮಾಡುವ ಚೀನಾ ಹಾಗೂ ಪಾಕಿಸ್ತಾನಕ್ಕೆ ಟಾಂಗ್ ನೀಡಲು ಸಜ್ಜಾಗಿದೆ. ಅಲ್ಲದೆ, ರಕ್ಷಣೆ ವಿಷಯದಲ್ಲಿ ಭಾರತ ಹೇಗೆ ಭದ್ರ ಎಂಬುದನ್ನು ಜಗತ್ತಿಗೆ ಸಾರಲು ಮುಂದಾಗಿದೆ.
ಹೌದು, ದೇಶದಲ್ಲಿ ಇದೇ ಮೊದಲ ಬಾರಿಗೆ ಖಂಡಾಂತರವಾಗಿ ದಾಳಿ ಮಾಡುವ ಕ್ಷಿಪಣಿ (ಐಸಿಬಿಎಂ)ಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಗ್ನಿ-5 ಈ ಖಂಡಾಂತರ ಕ್ಷಿಪಣಿಯ ಹೆಸರಾಗಿದ್ದು, ಇದು ಇಡೀ ಚೀನಾವನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಅಣ್ವಸ್ತ್ರವನ್ನು ಹೊತ್ತುಕೊಂಡು ಸುಮಾರು ಐದು ಸಾವಿರ ಕಿಲೋ ಮೀಟರ್ ವ್ಯಾಪ್ತಿಯವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಇದು, ಇಡೀ ಚೀನಾವನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಿದೆ. ಚೀನಾದ ಬೃಹತ್ ನಗರಗಳಾದ ಬೀಜಿಂಗ್, ಶಾಂಘೈ, ಹಾಂಗ್-ಕಾಂಗ್ ಸೇರಿ ಇಡೀ ಚೀನಾವನ್ನೇ ಗುರಿಯಾಗಿಸಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ.
Leave A Reply