ಸಿಎಂ ಕುಮಾರಸ್ವಾಮಿ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದ್ದಾರೇ ಈಗಲೂ ಮೋದಿ ರಾಜೀನಾಮೆ ನೀಡಬೇಕೆ?
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಕೆಲವು ಬುದ್ಧಿ ಜೀವಿಗಳಿಗೆ ನೆಮ್ಮದಿಯೇ ಇಲ್ಲದಂತಾಗಿದ್ದು, ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಹುನ್ನಾರವನ್ನು ನಡೆಸುತ್ತಿವೆ. ಒಂದು ಸಣ್ಣ ಅವಕಾಶ ಸಿಕ್ಕರೂ ಮೋದಿ ವಿರುದ್ಧ ಮುಗಿ ಬೀಳುತ್ತಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ , ಡಿಸೇಲ್ ಬೆಲೆ ಹೆಚ್ಚಳವಾದಾಗ ದೇಶದಲ್ಲಿ ಸಹಜವಾಗಿ ಬೆಲೆ ಹೆಚ್ಚಳವಾಗಿತ್ತು. ಆಗ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಬೊಬ್ಬೆ ಹೊಡೆಯಲಾಗಿತ್ತು. ಆದರೆ ಇದೀಗ ಗುರುವಾರ ಬಜೆಟ್ ಮಂಡಿಸಿರುವ ಕರ್ನಾಟಕದ ಕುಮಾರ ಸ್ವಾಮಿ ಅವರು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಹೊರೆ ಹಾಕಿದ್ದಾರೆ. ಆದರೇ ಇದೀಗ ಯಾರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿಲ್ಲ ಎಂಬುದು ಮಾತ್ರ ಘನಘೋರ.
ಪ್ರಸ್ತುತ ರಾಜ್ಯದಲ್ಲಿ ಪೆಟ್ರೋಲ್ ತೆರಿಗೆ ಶೇ.30 ರಿಂದ 32ಕ್ಕೆ ಏರಿಸಲಾಗಿದೆ. ಡಿಸೇಲ್ ಅನ್ನು 19ರಿಂದ 21ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 1.14 ರೂಪಾಯಿ ಹೆಚ್ಚಳವಾಗಲಿದ್ದು, ಡಿಸೇಲ್ 1.12 ರೂಪಾಯಿ ಹೆಚ್ಚಳವಾಗಲಿದೆ. ಆದರೆ ಈ ಕುರಿತು ಯಾವುದೇ ಬುದ್ದೀ ಜೀವಿಗಳು ಮಾತನಾಡುತ್ತಿಲ್ಲ. ವಿಶೇಷವಾಗಿ ತೈಲ ಬೆಲೆಗಳ ಏರು ಪೇರು ನೇರವಾಗಿ ಮಧ್ಯಮವರ್ಗದವರ ಮೇಲೆ ಪರಿಣಾಮ ಬೀರುತ್ತದೆ. ಆದರೇ ಮಧ್ಯಮ ವರ್ಗದವರು, ಬಡವರ ಬಗ್ಗೆ ವಿಶೇಷ ಕಾಳಜಿ ತೋರುವ ಬುದ್ದಿ ಜೀವಿಗಳು ಇದೀಗ ಬಾಯಿ ಮುಚ್ಚಿಕೊಂಡು ಕುಳಿತಂತೆ ಕಾಣುತ್ತಿದೆ. ಇನ್ನು ಚುನಾವಣೆ ವೇಳೆ, ನಂತರ ಪೆಟ್ರೋಲ್ , ಡಿಸೇಲ್ ಬೆಲೆ ಹೆಚ್ಚಳದ ಕುರಿತು ಮಾತನಾಡಿದ್ದ ಪ್ರಸ್ತುತ ಅಧಿಕಾರದಲ್ಲೇ ಇರುವ ರಾಜ್ಯದ ಸಚಿವರು ಸೇರಿ ಹಲವರು ಈ ಕುರಿತು ಚಕಾರ ಎತ್ತುತ್ತಿಲ್ಲ ಎಂಬುದು ಮಾತ್ರ ದುರಂತ.
ಕುಮಾರ ಸ್ವಾಮಿ ಅವರು ಕಾಟಾಚಾರಕ್ಕೆ ರೈತರ ಸುಸ್ತಿ ಸಾಲ ಮನ್ನಾ ಮಾಡಿ, ಅದರಲ್ಲೂ ರೈತರಿಗೆ ಮೋಸ ಮಾಡಲು ಮುಂದಾಗಿರುವುದು ಪ್ರಸ್ತುತ ಬಜೆಟ್ ನಲ್ಲಿ ಘೋಷಿಸಿರುವ ನೂತನ ಸಾಲ ಮನ್ನಾ ಯೋಜನೆ ಸಾರುತ್ತಿದೆ. ಇದೀಗ ಸಾಲ ಮನ್ನಾ ಹೆಸರಲ್ಲಿ ಮದ್ಯಮ ವರ್ಗದವರ ಮೇಲೆ ಹೇರಿಕೆ ಮಾಡಿ ತಮ್ಮ ಬಂಡವಾಳ ಸಂಗ್ರಹಿಸುವ ಹುನ್ನಾರ ನಡೆಸುತ್ತಿರುವುದು ಸ್ಪಷ್ಟವಾಗುತ್ತಿದೆ. ಅತ್ತ ರೈತರಿಗೂ ಪೂರ್ಣ ಪ್ರಮಾಣದಲ್ಲಿ ಸಾಲ ಮನ್ನಾ ಮಾಡದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರೇ, ಇತ್ತ ಅದರ ಹೆಸರಲ್ಲಿ ಮಧ್ಯಮ ವರ್ಗದವರ ಮೇಲೆ ಅತಿಯಾದ ತೆರಿಗೆ ಹೇರಿಕೆ, ಅಭಿವೃದ್ಧಿ ಯೋಜನೆಗಳ ಕಡಿತ ಮಾಡಿರುವುದು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುವತ್ತ ಸಾಗಲಿದೆ ಎಂಬುದು ಸ್ಪಷ್ಟವಾಗಿ ಘೋಚರವಾಗುತ್ತಿದೆ.
Leave A Reply