ದಂಪತಿಯ ಮೇಲೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಪ್ರಕರಣ; ಆರೋಪಿಯ ಬಂಧನ
ಮಂಗಳೂರು; ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೀರ್ಥಹಳ್ಳಿ ನಿವಾಸಿಯಾದ ಗುಂಡಪ್ಪ ಗೌಡ ಅವರ ಮಗ ಪ್ರವೀಣ್ ಕೆ.ಜಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಅಂದಾಜು ರೂ.೭೫೦೦೦ ಮೌಲ್ಯದ ೩ ಪವನ್ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ; ಮೊಡಂಕಾಪು ಎಂಬಲ್ಲಿನ ನಿವಾಸಿ ಜನಾರ್ಧನ ಹೊಳ್ಳ ಮತ್ತು ಅವರ ಹೆಂಡತಿ ಇಬ್ಬರೇ ಮನೆಯಲ್ಲಿರುವಾಗ ಮನೆಗೆ ಹೊಕ್ಕಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಾರಕಾಯುಧಗಳಿಂದ ಸದ್ರಿ ಜನಾರ್ಧನ್‌ರವರಿಗೆ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ಬಿ ಆರ್ ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ ಮತ್ತು ಎಎಸ್‌ಪಿ ರವರಾದ ಋಷಿಕೇಶ್ ಸೋನವಾಣೆ ಅವರ ಸೂಕ್ತ ಮಾರ್ಗದರ್ಶನದಂತೆ ಬಂಟ್ವಾಳ ವೃತ್ತನಿರೀಕ್ಷಕರಾದ ಟಿ.ಡಿ ನಾಗರಾಜ್, ಅಪರಾಧ ಪತ್ತೆ ದಳದಲ್ಲಿದ್ದ ಚಂದ್ರಶೇಖರ್ ಪಿಎಸ್‌ಐ ಬಂಟ್ವಾಳ ನಗರ ಪೊಲೀಸ್ ಠಾಣೆ, ಹರೀಶ್ ಎಂ.ಆರ್ ಅಪರಾಧ ವಿಭಾಗ ಪಿಎಸ್‌ಐ ಬಂಟ್ವಾಳ ನಗರ ಪೊಲೀಸ್ ಠಾಣೆ, ಎಎಸ್‌ಐ ಸಂಜೀವ ಕೆ, ಸಿಬ್ಬಂಧಿಗಳಾದ ಸುರೇಶ್ ಪಡರ, ಸುಜು, ಅಬ್ದುಲ್ ಕರೀಂ, ಗಿರೀಶ್, ಯೋಗಿಶ್, ಕುಮಾರ್ ಹೆಚ್.ಕೆ, ವಿವೇಕ ಕೆ, ಮಲ್ಲಿಕ್ ವಿ, ಉಮೇಶ್ ಹೆಚ್, ಹನಮಂತ ತಳವಾರ್, ಪ್ರಶಾಂತ್, ಲಕ್ಷ್ಮಣ್, ಕೇದಾರ್ ಅವರು ಭಾಗವಹಿಸಿದ್ದರು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ ೩೬೫/೨೦೧೮ ಕಲಂ: ೪೪೮.೩೯೭. ಐಪಿಸಿ. ಪ್ರಕರಣ ದಾಖಲಾಗಿದೆ.
Leave A Reply