ವಾಘ್ಮೋರೆ ನಮ್ಮ ಕಾರ್ಯಕರ್ತ ಅಲ್ಲ, ಆರ್‌ಎಸ್‌ಎಸ್ ಕಾರ್ಯಕರ್ತ: ಮುತಾಲಿಕ್
ಮಂಗಳೂರು: ಗೌರಿಗೆ ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಪರಶುರಾಮ್ ವಾಘ್ಮೋರೆ ಶ್ರೀರಾಮ ಸೇನೆ ಕಾರ್ಯಕರ್ತ ಅಲ್ಲ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಗೌರಿ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆ ಹೆಗಲ ಮೇಲೆ ಕೈಹಾಕಿ ತೆಗೆಸಿಕೊಂಡಿರುವ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರಶುರಾಮ್ ವಾಘ್ಮೋರೆ ಶ್ರೀರಾಮ ಸೇನೆ ಕಾರ್ಯಕರ್ತ ಎನ್ನಲಾಗುತ್ತಿದೆ. ಹಾಗಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಕಷ್ಟು ಜನರು ನನ್ನೊಂದಿಗೆ ಫೊಟೊ ತೆಗೆಸಿಕೊಂಡಿದ್ದಾರೆ. ಹಾಗೆಂದು ಎಲ್ಲರೂ ನಮ್ಮ ಸಂಘಟನೆ ಸದಸ್ಯರಲ್ಲ. ಪರಶುರಾಮ್ ವಾಘ್ಮೋರೆ ಕೂಡಾ ಹೀಗೆಯೇ ನನ್ನೊಂದಿಗೆ ಫೊಟೊ ತೆಗೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ಇದ್ದದ್ದು ಆರ್‌ಎಸ್‌ಎಸ್ ಕಾರ್ಯಕರ್ತರು. ಪರಶುರಾಮ್ ವಾಘ್ಮೋರೆ ಸಹ ಅದೇ ಪ್ರಕರಣದಲ್ಲಿ ಇದ್ದ ಹಾಗಾಗಿ ಆತ ಆರ್‌ಎಸ್‌ಎಸ್ ಕಾರ್ಯಕರ್ತ ಇರಬಹುದು ಎಂದು ಅವರು ಹೇಳಿದರು.
ಒಂದು ಚಿತ್ರ ಇಟ್ಟುಕೊಂಡು ಶ್ರೀರಾಮಸೇನೆಗೆ ಕೆಟ್ಟ ಹೆಸರು ಬಳಿಯುವ ಯತ್ನ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ನಿಷೇಧ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ವಿಚಾರವಾದಿಗಳು, ಯೋಧರ, ವಿಜ್ಞಾನಿಗಳ ಹತ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Leave A Reply