• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ ಸುದ್ದಿ 

ಬಿಸಿಲು, ಮಳೆ, ಗಾಳಿಗೆ ರಕ್ಷಣೆ ಕೊಡಲು ಸಿದ್ಧವಾಗಿದೆ ಮಂಗಳೂರಿನ ಸುಸಜ್ಜಿತ ಬಸ್ ಸ್ಟಾಪುಗಳು!!

Hanumantha Kamath Posted On October 12, 2018
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯವರು ಅಲ್ಲಲ್ಲಿ ಫ್ಲಾಟ್ ಫಾರಂ ತರಹದೊಂದು ಕಟ್ಟುತ್ತಿದ್ದಾರೆ. ಅದಕ್ಕೆ ಒಂದಿಷ್ಟು ಹೂವಿನ ಅಲಂಕಾರ, ಮಿನಿಚೇರ್ ಲೈಟಿನ ಸಿಂಗಾರ ಮಾಡಿ ದೂರದಿಂದ ನೋಡಿದರೆ ಯಾವುದೋ ಮದುವೆಗೆ ವೇದಿಕೆ ಹಾಕಿದಂತೆ ಅನಿಸುತ್ತದೆ. ಇದನ್ನು ಪಾಲಿಕೆಯವರು ಬಸ್ ಸ್ಟಾಪ್ ಎನ್ನುತ್ತಿದ್ದಾರೆ. ಮಳೆಗಾಲದಲ್ಲಿ ಜೋರು ಮಳೆ ಬರುವಾಗ ಬಸ್ ಸ್ಟಾಪ್ ಡಿಸೈನ್ ಮಾಡಿದವರಿಗೆ ಮತ್ತು ಡಿಸೈನ್ ಒಪ್ಪಿದವರಿಗೆ ತಂದು ಇಲ್ಲಿ ನಿಲ್ಲಿಸಬೇಕು. ಅವರು ನೆನೆದು ಒದ್ದೆಯಾಗದಿದ್ದರೆ ಆಗ ಈ ಬಸ್ ಸ್ಟಾಪ್ ಸರಿ ಇದೆ ಎಂದು ಒಪ್ಪಿಕೊಳ್ಳಬಹುದು. ಅದರೊಂದಿಗೆ ಬೇಸಿಗೆಯಲ್ಲಿಯೂ ಅವರನ್ನು ತಂದು ನಿಲ್ಲಿಸಬೇಕು. ಆಗಲೂ ಇವರ ಮುಖದ ಮೇಲೆ ಬಿಸಿಲು ಬೀಳದಿದ್ದರೆ ಆಗ ಸರಿ ಇದೆ ಎನ್ನುವ ಪ್ರಮಾಣಪತ್ರ ಕೊಡಬಹುದು. ಆದರೆ ಸದ್ಯಕ್ಕಂತೂ ಇದು ಮದುವೆಯ ರಿಸಪ್ಶನ್ ಗೆ ವೇದಿಕೆ ಹಾಕುತ್ತಾರಲ್ಲ, ಹಾಗೆ ಇದೆ. ಇಂತಹ ಬಸ್ ಸ್ಟಾಪ್ ಗಳಲ್ಲಿ ಮಳೆಗಾಲದಲ್ಲಿ ನಿಂತವರನ್ನು ದೇವರೇ ಕಾಪಾಡಬೇಕು. ಅಷ್ಟಕ್ಕೂ ಸ್ಕಾಲಿಟನ್ ನಂತೆ ಕಾಣುತ್ತಿರುವ ಈ ಬಸ್ ನಿಲ್ದಾಣಗಳು ಕಡಿಮೆ ಖರ್ಚಿನಲ್ಲಿ ಆಗಿರಬಹುದು ಎಂದು ನೀವು ಅಂದುಕೊಂಡಿರಬಹುದು. ಪಾಲಿಕೆ ಸ್ಮಾರ್ಟ್ ಸಿಟಿಯ ಹಣದಲ್ಲಿ ಒಂದೊಂದು ಬಸ್ ಸ್ಟಾಪುಗಳಿಗೆ ಖರ್ಚು ಮಾಡುತ್ತಿರುವ ಹಣದ ಲೆಕ್ಕವನ್ನು ಇವತ್ತು ಕೊಡುತ್ತಿದ್ದೇನೆ.
ಬಸ್ ಸ್ಟಾಪಿನೊಂದಿಗೆ ಟಾಯ್ಲೆಟ್ ಎಂಬ ಕಾಂಬೋ ಆಫರ್…
ಸ್ಮಾರ್ಟ್ ಸಿಟಿ ಹಣದಲ್ಲಿ ಮೂರು ರೀತಿಯ ಬಸ್ ಸ್ಟಾಪುಗಳನ್ನು ಮಾಡಲು ಇಲ್ಲಿ ತಯಾರಿ ನಡೆದಿದೆ. ಮೊದಲನೇ ಕ್ಯಾಟಗರಿಯಲ್ಲಿ ಬರುವ ಬಸ್ ಸ್ಟಾಪುಗಳು ಹೈಫೈ ಮಾದರಿಯಲ್ಲಿ ಇರುತ್ತವೆ. ಅಂದರೆ ಹೆಚ್ಚು ಖರ್ಚು ಮಾಡಿ ಕಡಿಮೆ ಉಪಯೋಗಕ್ಕೆ ಬರುವ ಹಾಗೆ ಇವರು ನಿರ್ಮಿಸುತ್ತಾರೆ. ಇಂತಹ ಮೊದಲ ದರ್ಜೆಯ ಬಸ್ ಸ್ಟಾಪಿಗೆ ಇವರು ತೆಗೆದಿಟ್ಟಿರುವ ಹಣ ಇಪ್ಪತ್ತು ಲಕ್ಷ ಎಪ್ಪತೈದು ಸಾವಿರ. ಮಳೆ ಬಂದರೆ ಒದ್ದೆಯಾಗುವ, ಬಿಸಿಲು ಬಂದರೆ ಕಪ್ಪಾಗುವ ಬಸ್ ಸ್ಟಾಪುಗಳಲ್ಲಿ ಇವರು ತೋರಿಕೆಗೆ ಇರಲಿ ಎಂದು ಒಂದು ಈ-ಟಾಯ್ಲೆಟ್ ಇಡುತ್ತಾರೆ. ನೀವು ಒಂದು ರೂಪಾಯಿ ಹಾಕಿ ಅದನ್ನು ಬಳಸಬಹುದು. ಮಂಗಳೂರಿನಲ್ಲಿ ಈಗಿರುವ ಸಾರ್ವಜನಿಕ ಶೌಚಾಲಯಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಗುತ್ತಿಗೆದಾರರು ಸಿಗುತ್ತಿಲ್ಲ. ಇನ್ನು ಹೀಗೆ ಇವರು ಇನ್ನೊಂದಿಷ್ಟು ಕಟ್ಟಿದರೆ ಅದನ್ನು ಸ್ವಚ್ಚ ಮಾಡುವುದು ಯಾರು ಎನ್ನುವುದನ್ನು ನೋಡಬೇಕು. ಈ ಟಾಯ್ಲೆಟ್ ಬದಲು ಅಗತ್ಯ ಇರುವೆಡೆ ಚೆಂದನೆಯ ಕಾಂಕ್ರೀಟ್ ಟಾಯ್ಲೆಟ್ ಕಟ್ಟಿದರೆ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ಇನ್ನು ಎರಡನೇಯ ಕ್ಯಾಟಗರಿ ಬಸ್ ಸ್ಟಾಪ್ ಎಂದರೆ ಹದಿನೈದು ಲಕ್ಷದು. ಮೂರನೇ ಕ್ಯಾಟಗರಿಯ ಬಸ್ ಸ್ಟಾಪ್ ಎಂದರೆ ಹನ್ನೆರಡು ಲಕ್ಷದು. ದ್ರೋಣ್ ಕ್ಯಾಮೆರಾದಲ್ಲಿ ಮೇಲಿನಿಂದ ಫೋಟೋ ತೆಗೆದರೆ, ವಿಡಿಯೋ ಮಾಡಿದರೆ ಆಗ ಇಂತಹ ಬಸ್ ಸ್ಟಾಪ್ ಸ್ಮಾರ್ಟ್ ಆಗಿ ಕಾಣಬಹುದು. ಆದರೆ ಜನಸಾಮಾನ್ಯರು ಇದರ ಕೆಳಗೆ ನಿಂತರೆ ಅವರು ಸ್ಮಾರ್ಟ್ ಇದ್ದವರು ಮಾಲ್ಟ್ ಆಗಿ ಹೋಗುತ್ತಾರೆ.
ನಾವು ಇನ್ನು ಇಂತಹುದು ಇನ್ನೆಷ್ಟು ನೋಡಲು ಬಾಕಿ ಇದೆಯೋ, ದೇವರಿಗೆ ಗೊತ್ತು…
ಮಂಗಳೂರು ನಗರವನ್ನು ಸ್ಮಾರ್ಟ್ ಮಾಡಲು ಈಗಾಗಲೇ ಕೇಂದ್ರ ಸರಕಾರದಿಂದ 112ವರೆ ಕೋಟಿ ಮತ್ತು ರಾಜ್ಯ ಸರಕಾರದಿಂದ 112ವರೆ ಕೋಟಿ ರೂಪಾಯಿ ಹಣ ಬಂದು ಪಾಲಿಕೆಯಲ್ಲಿ ಇದೆ. ಈ ಹಣದಿಂದ ಏನೆಲ್ಲ ಮಾಡಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಇವರು ಮೊದಲು ಮಾಡುತ್ತಿರುವುದು ಏನು ಗೊತ್ತಾ? ಯಾರೂ ಕೇಳದೇ ಇರುವ, ಯಾರಿಗೂ ಮೊದಲ ಹಂತದಲ್ಲಿ ಅವಶ್ಯಕತೆಯೇ ಇಲ್ಲದ ಕ್ಲಾಕ್ ಟವರ್. ಇದು ಒಂದು ರೀತಿಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ. ಮಂಗಳೂರು ನಗರದಲ್ಲಿ ಸರಿಯಾದ ಬಸ್ ನಿಲ್ದಾಣ ಇಲ್ಲ, ಉತ್ತಮವಾದ ಸೆಂಟ್ರಲ್ ಮಾರುಕಟ್ಟೆ ಇಲ್ಲ ಎಂದು ನಾವು ಪರಿತಪಿಸುತ್ತಿದ್ದರೆ ಇವರು 90 ಲಕ್ಷ ಖರ್ಚು ಮಾಡಿ ಕ್ಲಾಕ್ ಟವರ್ ಮಾಡತ್ತಿದ್ದಾರೆ. ಇವರಿಗೆ ಮೊದಲು ಕಿರೀಟ ನಂತರ ಉಳಿದದ್ದು ಎನ್ನುವಂತೆ ಕಾಣುತ್ತದೆ. ಅದರೊಂದಿಗೆ ಚೆನ್ನಾಗಿರುವ ರಸ್ತೆಯನ್ನು ಅಗೆದು ಇವರು ಸ್ಮಾರ್ಟ್ ಮಾಡುತ್ತಿದ್ದಾರೆ. ಅದನ್ನು ನೀವು ಕಣ್ಣಾರೆ ನೋಡಿ ಖುಷಿಪಡಬೇಕಾದರೆ ಕ್ಲಾಕ್ ಟವರ್ ಕಡೆಯಿಂದ ಆರ್ ಟಿಒ ಕಡೆ ಹೋಗಬೇಕು. ಒಂದು ಉತ್ತಮ ರಸ್ತೆಯನ್ನು ಅಗೆದು ಹೇಗೆ ಸ್ಮಾರ್ಟ್ ರಸ್ತೆಯನ್ನಾಗಿ ಮಾಡಬಹುದು ಎಂದು ಇವರಿಂದ ಕಲಿಯಬಹುದು. ಇವರ ಇಂತಹ ಕಾರ್ಯಗಳಿಗೆ ಸುಮಾರು ಎಂಟು ಕೋಟಿಗಳಷ್ಟು ಈಗಾಗಲೇ ವೆಚ್ಚವಾಗುತ್ತಿದೆ. ಅದರ ನಡುವೆ ಹರಿಯುತ್ತಿರುವ ನದಿಯಲ್ಲಿ ಸ್ನಾನ ಮಾಡಿ ಶುದ್ಧರಾಗಲು ಉಸ್ತುವಾರಿ ಸಚಿವ ಯುಟಿ ಖಾದರ್ ಸಿದ್ಧರಾಗುತ್ತಿದ್ದಾರೆ. ಹಿಂದೆ ಇವರದ್ದೇ ಪಕ್ಷದಿಂದ ಶಾಸಕರಾಗಿದ್ದ ವ್ಯಕ್ತಿ ತಮ್ಮ ಪುಸ್ತಕ “ಸಾಧನೆಯ ಹಾದಿಯಲ್ಲಿ”ನ ಪುಟಗಳನ್ನು ತುಂಬಿಸಲು ಚುನಾವಣೆ ಹತ್ತಿರ ಇರುವಾಗ ಮೇಲಿನಿಂದ ಮೇಲೆ ಸಿಕ್ಕಿದ ಕಡೆ ಶಿಲಾನ್ಯಾಸ ಮಾಡುತ್ತಿದ್ದರು. ಒಂದು ಪಿಕ್ಕಾಸು ಮತ್ತು ಹಾರೆ ಯಾವಾಗಲೂ ಕಾರಿನಲ್ಲಿಯೇ ಇಟ್ಟು ಸುತ್ತಾಡುತ್ತಿದ್ದರೇನೂ ಎಂದು ಅನಿಸುತ್ತಿತ್ತು. ಹಾಗಾಗಿ ಎಲ್ಲಿಯಾದರೂ ಜಾಗ ಕಂಡರೆ ತಕ್ಷಣ ಇಳಿದು ಹಾರೆ ಕೈಯಲ್ಲಿ ಹಿಡಿದು ಫೋಟೋ ತೆಗೆಸಿ ಸಾಧನೆಯ ಹಾದಿಯ ಪುಸ್ತಕಕ್ಕೆ ಕಳುಹಿಸಿಕೊಡುತ್ತಿದ್ದರು. ಹಾಗೆ ಇವರು ಮಾಡಲು ಹೋಗಿ ಆಗಿದ್ದೆ ಉರ್ವಾದಲ್ಲಿ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ ಮಿಟನ್ ಮತ್ತು ಕಬಡ್ಡಿ ಕ್ರೀಡಾಂಗಣದ ಶಿಲಾನ್ಯಾಸ. ನಮ್ಮ ರಾಜ್ಯ ಸರಕಾರದ ಅನುದಾನದ ಮೂಲಕ ಈ ಯೋಜನೆಯನ್ನು ಮಾಡುತ್ತೇವೆ ಎಂದು ಆವತ್ತು ಹಿಂದಿನ ಶಾಸಕರು ಹೇಳಿದ್ದರು. ಫೋಟೋ ಪ್ರಚಾರಗಿಟ್ಟಿಸಿತು ಬಿಟ್ಟರೆ ರಾಜ್ಯ ಸರಕಾರದಿಂದ ಒಂದೇ ಒಂದೂ ರೂಪಾಯಿ ಅದಕ್ಕಾಗಿ ಬರಲಿಲ್ಲ. ಈಗ ಮಾಜಿ ಆಗಿರುವ ಆವತ್ತಿನ ಶಾಸಕರ ಮರ್ಯಾದೆ ಉಳಿಸುವುದಕ್ಕಾಗಿ ಯುಟಿ ಖಾದರ್ ಅವರು 20 ಕೋಟಿ ರೂಪಾಯಿಯನ್ನು ಬ್ಯಾಡ್ ಮಿಟನ್, ಕಬಡ್ಡಿ ಕೋರ್ಟಿಗೆ ಇಡಲಾಗುವುದು ಎಂದು ಹೇಳುತ್ತಿದ್ದಾರೆ. ಅದರೊಂದಿಗೆ ಕದ್ರಿ ಪಾರ್ಕಿಗೆ ಹೋಗುವ ರಸ್ತೆಗೆ 25 ಕೋಟಿ, ಕಸಾಯಿ ಖಾನೆಗೆ ಹದಿನೈದು ಕೋಟಿ ಎನ್ನುತ್ತಿದ್ದಾರೆ. ಖಾದರ್ ಸಾಹೇಬ್ರೆ, ನಮಗೆ ಮೊದಲಿಗೆ ಬೇಕಾಗಿರುವುದು ಮೂಲಭೂತ ಸೌಕರ್ಯಗಳಾದ ಮಾರುಕಟ್ಟೆ, ಬಸ್ ನಿಲ್ದಾಣ. ನೀವು ಸೆಂಟ್ರಲ್ ಮಾರುಕಟ್ಟೆಗೆ ಒಮ್ಮೆ ಹೋಗಿ ನೋಡಿ ಬನ್ನಿ. 225 ಕೋಟಿ ರೂಪಾಯಿಯಲ್ಲಿ ನೀವು ಖರ್ಚು ಮಾಡಿರುವ ಎಂಟು ಕೋಟಿಯಿಂದ ಯಾವ ಉಪಯೋಗವೂ ಇಲ್ಲ. ಯಾಕೋ ಉಳ್ಳಾಲದ ಒಂಭತ್ತು ಕೆರೆಯಲ್ಲಿ ಬೆಂಕಿಪಟ್ಟಣದಂತಹ ಮನೆಗಳನ್ನು ಕಟ್ಟಿ ಅಲ್ಲಿ ಜನ ಕೂಡ ವಾಸಿಸಲಾಗದೆ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿ ಪೋಲು ಮಾಡಿರುವ ಅನುಭವ ನಿಮಗೆ ಇರಬಹುದು. ಹಾಗಂತ ಸ್ಮಾರ್ಟ್ ಸಿಟಿಯಲ್ಲಿ ಹಣ ಪೋಲಾಗಲು ನಾವು ಬಿಡಲ್ಲಾ!!
0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search