ತಿಂಗಳೊಳಗೆ ಸಂತೋಷ್ ತಮ್ಮಯ್ಯ ಜೀವ ತೆಗೆಯುವುದಾಗಿ ಎಚ್ಚರಿಕೆ!!
ಪ್ರಾರಂಭದಲ್ಲಿಯೇ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಇನ್ನು ಬರುವ ದಿನಗಳಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಅಕ್ಷರಶ: ರಾಜ್ಯ ಸರಕಾರಕ್ಕೆ ಹೊಣೆಯಾಗುತ್ತದೆ ಎಂದು ಹೇಳಬಯಸುತ್ತೇನೆ. ಏಕೆಂದರೆ ಸಮಾಜಘಾತುಕರು ಸಾಮಾಜಿಕ ತಾಣಗಳಲ್ಲಿ ಬಹಿರಂಗವಾಗಿ ಕೊಟ್ಟಿರುವ ಎಚ್ಚರಿಕೆಯೇ ಅಂತಹುದು. ಮಂಗಳೂರಿನ ಶಾಂತಿ ಕೆಡಿಸಲು ಪದೇ ಪದೇ ಯತ್ನಿಸುತ್ತಿರುವ ಮುಸ್ಲಿಂ ಪೇಜ್ ನವರು ಪಾಪದ ಕೊಡ ತುಂಬಿದೆ ಅನುಭವಿಸು ಎಂದು ಸಂತೋಷ್ ತಮ್ಮಯ್ಯನವರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಆದರೆ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಘಿಗಳ ಸಂಹಾರ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ” ಈ ನಾಯಿ ಸೂಳೆಮಗ ಸಂತೋಷನನ್ನು ಒಂದು ತಿಂಗಳೊಳಗೆ ನಾವು ಮುಗಿಸುತ್ತೇವೆ, ನಿಮ್ಮ ಕೈಯಲ್ಲಿ ಶಾಟ ಏನ್ ಕಿತ್ಕೋತ್ತಿರೋ ಕಿತ್ತುಕೊಳ್ಳಿ” ಎಂದು ತುಳುಭಾಷೆಯಲ್ಲಿ ಕಮೆಂಟ್ ಹಾಕಿದ್ದಾರೆ. ಇಷ್ಟೇ ಇಲ್ಲ ಪಾಶಾ ಹಾಗೂ ಅಬ್ದುಲ್ ಲತೀಫ್ ಎನ್ನುವವರು ಕೂಡ ಕೀಳುಮಟ್ಟದಲ್ಲಿ ಸಂತೋಷ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ. ಎಫ್ ಐಆರ್ ದಾಖಲಾಗಿದೆ. ಇದನ್ನು ನಿಜಕ್ಕೂ ನಮ್ಮ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಒಂದು ಸವಾಲಾಗಿ ಸ್ವೀಕರಿಸಿ ಆರೋಪಿಗಳನ್ನು ಹಿಡಿಯಬೇಕು.
ನಮ್ಮಲ್ಲಿ ಹೀಗೇಕೆ?
ಒಂದು ವೇಳೆ ಸಂತೋಷ್ ತಮ್ಮಯ್ಯ ಸ್ಥಾನದಲ್ಲಿ ಭಗವಾನ್, ಗಿರೀಶ್ ಕಾರ್ನಾಡ್ ಅಥವಾ ಯಾವುದೇ ಬುದ್ಧಿಜೀವಿ ಸಾಹಿತಿಗೆ ಕೊಲೆಬೆದರಿಕೆ ಬಂದಿದ್ದರೆ ಸ್ವತ: ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎನ್ನುವ ನಿಟ್ಟಿನಲ್ಲಿ ರಕ್ಷಣೆ ಕೊಡಲು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು. ಸಿದ್ಧರಾಮಯ್ಯನವರ ಪಟಾಲಾಂ ಭಗವಾನ್ ಮನೆಗೆ ಧಾವಿಸುತ್ತಿತ್ತು. ಬೆದರಿಕೆ ಒಡ್ಡಿದವರು ಸಂಘ ಪರಿವಾರದವರು ಎಂದು ಗೃಹ ಮಂತ್ರಿ ಪರಮೇಶ್ವರ್ ಸುದ್ದಿ ಕಿವಿಗೆ ಬಿದ್ದ ತಕ್ಷಣ ಹೇಳಿಕೆ ಕೊಡುತ್ತಿದ್ದರು. ರೋಶನ್ ಬೇಗ್, ಇಬ್ರಾಹಿಂ, ಜಮೀರ್ ಅಹ್ಮದ್ ಅವರಂತವರು ಬಾಯಿಗೆ ಬಂದಂತೆ ಬೈದು ಯಾವುದಾದರೂ ಒಂದಿಬ್ಬರು ಸಂಘದ ಕಾರ್ಯಕರ್ತರನ್ನು ಹಿಡಿದು ಬಾಸುಂಡೆ ಬರುವಂತೆ ಬಾರಿಸಲು ಪೊಲೀಸರಿಗೆ ಮೌಖಿಕವಾಗಿ ಸೂಚಿಸುತ್ತಿದ್ದರು. ಎಡಪಂಥಿಯರ ಬುದ್ದಿಜೀವಿಗಳು ಪುರಭವನದ ಹೊರಗೆ ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ” ನಾನು ಕೂಡ ನಾಯಿ ಸೂಳೆಮಗ, ನನ್ನನ್ನು ಕೂಡ ಕೊಲ್ಲಿ” ಎಂದು ಝೇಂಕರಿಸುತ್ತಿದ್ದರು. ಸತ್ಯದ ತಲೆಯ ಮೇಲೆ ಹೊಡೆದು ಸುಳ್ಳು ಹೇಳುವ ಎಡಪಂಥಿಯ ಪತ್ರಕರ್ತರಿಗೆ ರಕ್ಷಣೆ ಇಲ್ಲ ಎನ್ನುವ ಭಾವನೆ ಎಲ್ಲಾ ಕಡೆ ಹರಡುವಂತೆ ಮಾಡಲಾಗುತ್ತಿತ್ತು. ಪ್ರಕಾಶ್ ರೈ ತನ್ನ ಕೆಲಸ ಬಿಟ್ಟು ಬೆಳಿಗ್ಗೆಯೇ ಫುಲ್ ಬಾಟಲ್ ಹಾಕಿ ತನ್ನ ಮೂರನೇ ಪತ್ನಿಗೆ ಬಾಯ್ ಹೇಳಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ. ದೊರೆಸ್ವಾಮಿ, ಜಿಗ್ನೇಶ್, ಹಾರ್ದಿಕ್ ಪಟೇಲ್ ನಂತವರು ಎಂಜಿ ರಸ್ತೆಯಲ್ಲಿ ಧರಣೆ ಕುಳಿತುಬಿಡುತ್ತಿದ್ದರು. ರಾಷ್ಟ್ರೀಯ ವಾಹಿನಿಗಳ ಗಂಜಿ ಗಿರಾಕಿಗಳು ತಮ್ಮ ವ್ಯಾನ್ ಗಳ ಮೇಲೆ ಕೊಡೆ ಬಿಡಿಸಿ ಕೈಯಲ್ಲಿ ಮೈಕ್ ಹಿಡಿದು ಪತ್ರಕರ್ತರೊಬ್ಬರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲ, ಇದಕ್ಕೆ ನರೇಂದ್ರ ಮೋದಿ ಕಾರಣ ಎಂದು ಬೆಳಗ್ಗಿನಿಂದಲೇ ಅರಚಿಬಿಡುತ್ತಿದ್ದರು. ಈಶಾನ್ಯ ರಾಷ್ಟ್ರಗಳಲ್ಲಿ ದೊಡ್ಡ ದೊಡ್ಡ ಫ್ಲೇಕ್ಸ್ ಬಿದ್ದು ಕರ್ನಾಟಕದಲ್ಲಿ ಶಾಂತಿ ಹಾಳಾಗುತ್ತಿದೆ ಎಂದು ಹರಡಿಸಲಾಗುತ್ತಿತ್ತು. ಏಕೆಂದರೆ ಎಡಪಂಥಿಯರು ಬರೆದದ್ದೇ ಸತ್ಯ, ಅದೇ ವಾಸ್ತವ ಎನ್ನುವುದು ಇಲ್ಲಿಯ ತನಕ ಪತ್ರಿಕೋದ್ಯಮ ನಡೆದುಕೊಂಡು ಬರುತ್ತಿದ್ದ ಸಂಗತಿ.
ನಮ್ಮ ರಾಷ್ಟ್ರದಲ್ಲೂ ಭಗವಂತ ಶ್ರೀರಾಮಚಂದ್ರನಿಗೆ ಬೈದರೆ ಅಂತವರಿಗೆ ರಕ್ಷಣೆ ಸಿಗುತ್ತದೆ. ದೈವದ ಕಲ್ಲುಗಳ ಬಗ್ಗೆ ಅವಹೇಳನಕಾರಿ ಬರೆದರೆ ಪೊಲೀಸ್ ಪೊಟೆಕ್ಷನ್ ಸಿಗುತ್ತದೆ. ಅದೇ ಪ್ರವಾದಿ ಬಗ್ಗೆ ಸತ್ಯ ಹೇಳಿದರೆ ಪೊಲೀಸರು ಮಧ್ಯರಾತ್ರಿ ಮನೆಯ ಬಾಗಿಲು ಬಡಿದು ಎಳೆದುಕೊಂಡು ಹೋಗುತ್ತಾರೆ. ಆಗಲೇ ಸಂಶಯ ಬರುವುದು. ನಾವು ಭಾರತದಲ್ಲಿ ಇದ್ದೇವಾ. ಇಲ್ಲಾ ಅರಬ್ ರಾಷ್ಟ್ರದಲ್ಲಿ ಇದ್ದೇವಾ. ನೀವು ದುಬೈಯಲ್ಲಿ ನಿಂತು “ಇದು ರಾಮರಾಜ್ಯವಾಗಬೇಕು” ಎಂದು ಪಾಸಿಟಿವ್ ಹೇಳಿಕೆ ಕೊಡಿ ನೋಡೋಣ. ನೀವು ಉಸಿರಾಡುವುದಕ್ಕೂ ಕಷ್ಟಪಡುವಂತೆ ಮಾಡಿಬಿಡುತ್ತಾರೆ. ರಾಮರಾಜ್ಯ ಎಂದರೆ ಪರಮ ಸುಭಿಕ್ಷೆಯ ಕಾಲ, ಶಾಂತಿ ಸಹಿಷ್ಣುತೆಯ ಯುಗ, ಸಕಲ ಸಂಪನ್ನ ಇಷ್ಟಾರ್ಥ ಸಿದ್ಧಿಯ ಸಮಯ ಎನ್ನುವ ಅರ್ಥದಲ್ಲಿ ಹೇಳಿದ್ದೇ ವಿನ: ರಾಮನ ರಾಜ್ಯವಾಗಬೇಕು, ಹಿಂದೂರಾಷ್ಟ್ರವಾಗಬೇಕು ಎಂದು ಹೇಳಿದ್ದಲ್ಲ ಎಂದು ನೀವು ಅವರಿಗೆ ಅರ್ಥ ಮಾಡುವಷ್ಟರಲ್ಲಿ ನಿಮಗೆ ಹಿಂದಿನ ಜನ್ಮಕ್ಕೆ ಹೋಗಿ ಬಂದಷ್ಟು ಸುಸ್ತಾಗುತ್ತದೆ. ಯಾಕೆಂದರೆ ಕರ್ಮಟ ರಾಷ್ಟ್ರಗಳು ಅಪ್ಪಟ ವ್ಯವಹಾರಿಕ ಮನೋಭಾವ ಹೊಂದಿರಬಹುದು. ಆದರೆ ತಮ್ಮ ಧರ್ಮ, ದೇವರ ವಿಷಯ ಬಂದಾಗ ಅವರು ಬಂಡೆಕಲ್ಲಿನಂತೆ ನಿಂತುಬಿಡುತ್ತಾರೆ.
ಇಲ್ಲಿ ಬರೆಯುವುದು ಅಷ್ಟು ಸುಲಭವಲ್ಲ…
ಕಳೆದ ಕೆಲವಾರು ವರ್ಷಗಳಿಂದ ಚರಿತ್ರೆಯ ನೈಜ ವಾಸ್ತವಾಂಶಗಳನ್ನು ಬರೆಯುವ ಸಾಹಿತಿಗಳು ಹುಟ್ಟಿದ್ದಾರೆ. ಹಾಗೆ ಬರೆಯುವವರನ್ನು ಬಲಪಂಥಿಯ ಲೇಖಕರು ಎಂದು ಕರೆಯಲಾಗುತ್ತಿದೆ. ಅವರನ್ನು ಬಂಧಿಸುವುದಕ್ಕೆ ರಾಜ್ಯ ಸರಕಾರ ತುದಿಗಾಲಲ್ಲಿ ನಿಂತಿರುತ್ತದೆ. ಆದರೆ ಸುಳ್ಳು ಬರೆಯದೇ ಇರುವುದರಿಂದ ಆರೆಸ್ಟ್ ಮಾಡುವುದು ಅಷ್ಟು ಸುಲಭವಲ್ಲ ಎಂದು ಸರಕಾರಕ್ಕೆ ಗೊತ್ತಿದೆ. ಯಾಕೆಂದರೆ ಪ್ರತಿಯೊಂದನ್ನು ದಾಖಲೆಯೊಂದಿಗೆ ಬರೆಯುವುದರಿಂದ ಅವರನ್ನು ಒಳಗೆ ಹಾಕುವುದು ಕಷ್ಟ. ಅದೇ ಎಡಪಂಥಿಯ ಲೇಖಕರು ದೇವರನ್ನು, ಸ್ವಾಮೀಜಿಗಳನ್ನು, ದೇಶವನ್ನು ಬೈದು ಬರೆಯುವುದಕ್ಕೆ ಯಾರೂ ಕೂಡ ದಾಖಲೆ ಕೇಳುವುದಿಲ್ಲ. ಯಾಕೆಂದರೆ ಅವರ ವಿರುದ್ಧ ಯಾರೂ ಏನೂ ಅನ್ನುವುದಿಲ್ಲ. ಅದೇ ಬಲಪಂಥಿಯ ಲೇಖಕರು ಸಣ್ಣಗೆ ಕೆಮ್ಮಿದರೂ ಕಷ್ಟ. ಏಕೆಂದರೆ ಇದು ಕರ್ನಾಟಕ ಮತ್ತು ಇಲ್ಲಿ ಸತ್ಯ ಹೇಳುವುದೂ ಮತ್ತು ಬರೆಯುವುದೂ ಎಂದರೆ ಜೈಲಿಗೆ ಹೋಗಲು ತಯಾರಾಗಿಯೇ ಇರಬೇಕು ಎಂದರ್ಥ!
Leave A Reply