ನಳಿನ್, ಶೋಭಾ, ಹೆಗ್ಡೆ ಗೆಲ್ಲಬೇಕಾದರೆ ಮೋದಿ ಅನಿವಾರ್ಯ!!
ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರಗಳಿಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಹೆಸರು ಫೈನಲ್ ಆಗಿರುವುದು ನಿಮಗೆಲ್ಲಾ ಗೊತ್ತೆ ಇದೆ. ಕಳೆದ ಎರಡು ತಿಂಗಳುಗಳಿಂದ ಬಿಜೆಪಿಯ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸಾಮಾನ್ಯವಾಗಿ ಹಾಲಿ ಸಂಸದರು ಇರುವಾಗ ಟಿಕೆಟ್ ಯಾರಿಗೆ ಎನ್ನುವ ಗೊಂದಲ ಇರುವುದಿಲ್ಲ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈ ಬಾರಿ ಯಾರಿಗೆ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೂಡ ಯಾರು ಎನ್ನುವ ಪ್ರಶ್ನೆ ಸುಳಿದಾಡುತ್ತಿತ್ತು. ಆದರೆ ಮೂರು ಕಡೆ ಕೂಡ ಬಿಜೆಪಿ ವರಿಷ್ಟರು ಯಾವ ಬದಲಾವಣೆಯನ್ನು ಮಾಡಲು ಹೋಗಿಲ್ಲ. ಇದರಿಂದ ಟಿಕೆಟ್ ಆಕಾಂಕ್ಷಿಗಳಿಗೆ ಸಾಕಷ್ಟು ನಿರಾಸೆಯಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಅವರಿಗೆ ಈ ಬಾರಿ ಮೂರನೇ ಸ್ಪರ್ಧೆ. ಮೇಯಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ ಕೀರ್ತಿ ನಳಿನ್ ಗೆ ಇದೆ. ಅದರ ಹಿಂದೆ ಎಂಟರಲ್ಲಿ ಏಳು ಕಾಂಗ್ರೆಸ್ ಶಾಸಕರಿ ದ್ದರು. ಅದರೊಂದಿಗೆ ಕೇರಳದ ಬಿಜೆಪಿ ರಾಜ್ಯ ಸಹ ಉಸ್ತುವಾರಿಯಾಗಿ ನಳಿನ್ ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಅವಿರತವಾಗಿ ದುಡಿದಿದ್ದಾರೆ. ಶಬರಿಮಲೆಯ ವಿಷಯದಲ್ಲಿ ಕೇರಳ ರಾಜ್ಯ ಸರಕಾರದ ನಿಲುವು ಖಂಡಿಸಿ ಅಲ್ಲಿನ ಜನಾಭಿಪ್ರಾಯವನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದು ಇದೇ ನಳಿನ್. ಕಳೆದ ಐದು ವರ್ಷಗಳಲ್ಲಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಹದಿನಾರು ಸಾವಿರ ಕೋಟಿ ಅನುದಾನ ತಂದದ್ದು ನಳಿನ್ ಸಾಧನೆಯಲ್ಲಿ ಮುಖ್ಯ. ಇನ್ನು ಅನೇಕ ಅಭಿವೃದ್ಧಿಗೆ ನಳಿನ್ ಶಂಕು ಸ್ಥಾಪನೆ ಮಾಡಿದ್ದಾರೆ. ಅವುಗಳ ಕೆಲಸ ಕಾರ್ಯಗಳು ನಡೆಯುತ್ತಿವೆ.
ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸದೇ ಕೇವಲ ಕೆಲಸ ಮಾತ್ರ ಮಾಡುತ್ತಾ ಹೋಗಿರುವುದರಿಂದ ಅವರು ಕೆಲಸ ಮಾಡಿದ್ದು ಜನರಿಗೆ ಗೊತ್ತಾಗಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಲಸ ಹೇಳಿಕೊಂಡರೆ ಆಗುವುದಿಲ್ಲ. ಇದನ್ನು ಯಶಸ್ವಿಯಾಗಿ ಬಳಸಿಕೊಂಡ ಟಿಕೆಟ್ ಆಕಾಂಕ್ಷಿಗಳು ಮತ್ತು ಪಕ್ಷದ ಹೊರಗಿನ ನಳಿನ್ ವಿರೋದಿಗಳು ನಳಿನ್ ಕೆಲಸವೇ ಮಾಡಿಲ್ಲ ಎನ್ನುವ ವಾತಾವರಣ ಮೂಡುವಂತೆ ಮಾಡಿದರು. ನಳಿನ್ ತಮ್ಮ ಆರೋಗ್ಯವನ್ನು ಕೂಡ ಮರೆತು ಬೆಳಿಗ್ಗೆ 5 ರಿಂದ ರಾತ್ರಿ 12 ರ ತನಕ ಓಡಾಡುತ್ತಾ ಇರುವುದರಿಂದ ಅವರು ಜನರಿಗೆ ಸಿಗುವುದಿಲ್ಲ ಎನ್ನುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.
ಇನ್ನು ನಳಿನ್ ಮೇಲೆ ಹತ್ತು ವರ್ಷ ಸಂಸದರಾಗಿದ್ದರೂ ಯಾವ ಭ್ರಷ್ಟಾಚಾರದ ಆರೋಪ ಇಲ್ಲ. ಇದೆಲ್ಲ ಗೊತ್ತಿದ್ದೇ ಜನ ನಳಿನ್ ಪರ ಚುನಾವಣಾ ಸಭೆಗಳಲ್ಲಿ ಹೆಚ್ಚೆಚ್ಚು ಸೇರುತ್ತಿದ್ದಾರೆ. ಗುರುವಾರ ಸಂಘನಿಕೇತನದಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ಕಾರ್ಯಕರ್ತರ ಸಭೆಗೆ ಸೇರಿದ ಜನಸ್ತೋಮವೇ ಸಾಕ್ಷಿ. ಇದರೊಂದಿಗೆ ನಿಸ್ಸಂದೇಹವಾಗಿ ನಳಿನ್ ಅವರನ್ನು ದಡಕ್ಕೆ ಸೇರಿಸಬೇಕಾಗಿರುವುದು ಮೋದಿ ಹೆಸರು.
ಇನ್ನು ಶೋಭಾ ಕರಂದ್ಲಾಜೆಯವರ ವಿರುದ್ಧವೂ ಒಂದಿಷ್ಟು ಅಪಸ್ವರ ಕೇಳಿಬಂದಿದೆ. ಅಲ್ಲಿ ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ಸಿಗುವ ಸಾಧ್ಯತೆ ಅವರ ಬೆಂಬಲಿಗರಿಗೆ ಇತ್ತು. ಜೆಪಿ ಹೆಗ್ಡೆಯವರಿಗೆ ಎಲ್ಲಾ ಪಕ್ಷದಲ್ಲಿಯೂ ಕೆಲಸ ಮಾಡಿ ಗೊತ್ತಿರುವ ಕಾರಣ ಮತ್ತು ಅದರಿಂದ ಪಕ್ಷೇತರ ಗೆಲುವು ಕೂಡ ದಕ್ಕಿಸಿಕೊಳ್ಳುವ ಸಾಮರ್ಥ್ಯ ಇದ್ದ ಕಾರಣದಿಂದ ಅವರಿಗೆ ಟಿಕೆಟ್ ಕೊಟ್ಟು ಶೋಭಾ ಅವರನ್ನು ರಾಜ್ಯ ರಾಜಕಾರಣಕ್ಕೆ ತರಲಾಗುವುದು ಎನ್ನುವ ವದಂತಿ ಇತ್ತು. ಅದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದ ಹೆಸರು ನಳಿನ್ ಮಾತ್ರ. ಕರಾವಳಿಯಲ್ಲಿ ನಳಿನ್, ಶೋಭಾ, ಅನಂತ್ ಕುಮಾರ್ ಹೆಗ್ಡೆ ಯಾರು ಗೆಲ್ಲಬೇಕಿದ್ದರೂ ಮೋದಿಯ ಹೆಸರೇ ಊರುಗೋಲು!!!
Leave A Reply