• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಊಟಕ್ಕಿಲ್ಲದ ಉಪ್ಪಿನಕಾಯಿಯಾದ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಇಲ್ಲ ಎನ್ನುವ ಆದೇಶ!!

Hanumantha Kamath Posted On October 16, 2019
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಆಸ್ತಿ ನೊಂದಾವಣಿಗೆ ಸದ್ಯಕ್ಕೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಇಲ್ಲ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದು ನಿಮಗೆ ಗೊತ್ತಿರಬಹುದು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರ ಪ್ರಯತ್ನದಿಂದ ಜನರಿಗೆ ಬಹುಕಾಲದಿಂದ ತಲೆನೋವಾದ ಪ್ರಾಪರ್ಟಿ ಕಾರ್ಡ್ ಆಸ್ತಿ ನೊಂದಾವಣೆಯ ಸಮಯ ಮುಂದಿನ ಆದೇಶದ ತನಕ ಕಡ್ಡಾಯ ಇಲ್ಲ ಎಂದು ಪ್ರಚಾರವಾಗಿತ್ತು. ಓಕೆ, ಪರವಾಗಿಲ್ಲ, ಶಾಸಕರುಗಳು ಅವರ ಕೆಲಸ ಮಾಡಿರಬಹುದು. ಆದರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿರುವುದು ಮಾತ್ರ ಸತ್ಯ. ಅದು ಹೇಗೆ ಎನ್ನುವುದನ್ನು ಇವತ್ತು ವಿವರಿಸುತ್ತೇನೆ.

ಈಗ ಪ್ರಾಪರ್ಟಿ ಕಾರ್ಡ್ ಸದ್ಯ ಅಗತ್ಯ ಇಲ್ಲ ಎಂದು ಹೇಳುತ್ತಿರುವುದು ಆಸ್ತಿ ನೊಂದಾವಣೆಯ ಸಮಯದಲ್ಲಿ ಮಾತ್ರ.  ಆದರೆ ಭೂಪರಿವರ್ತನೆ ಮಾಡಲು ಮತ್ತು ಸಿಂಗಲ್ ಸೈಟ್ ಮಾಡಿಸಲು ಪ್ರಾಪರ್ಟಿ ಕಾರ್ಡ್ ಬೇಕೆ ಬೇಕು. ಅದನ್ನು ಸರಕಾರ ಕ್ಯಾನ್ಸಲ್ ಮಾಡಿಲ್ಲ. ಉದಾಹರಣೆಗೆ ನಿಮ್ಮ ಬಳಿ ಕೃಷಿ ಭೂಮಿ ಇದೆ ಎಂದು ಇಟ್ಟುಕೊಳ್ಳೋಣ. ನೀವು ಅದನ್ನು ಮಾರುವ ಸಂದರ್ಭದಲ್ಲಿ ಅತ್ಯವಶ್ಯಕವಾಗಿ ಭೂಪರಿವರ್ತನೆ ಮಾಡಲೇಬೇಕು. ಇಲ್ಲದೇ ಹೋದರೆ ಕೃಷಿ ಭೂಮಿಯನ್ನು ಭೂಪರಿವರ್ತನೆ ಮಾಡದೇ ಮಾರಬೇಕಾದರೆ ಅದನ್ನು ಖರೀದಿಸುವವರು ಕೂಡ ಕೃಷಿಕರೇ ಆಗಿರಬೇಕು. ಆದರೆ ಮಂಗಳೂರಿನಲ್ಲಿ ಹೆಚ್ಚಾಗಿ ಇರುವುದು ಕೃಷಿ ಭೂಮಿ ಮತ್ತು ಅದನ್ನು ಖರೀದಿಸುವವರು ಒಂದೋ ಮನೆ ಕಟ್ಟಲು ಅಥವಾ ವಾಣಿಜ್ಯ ಉದ್ದೇಶಕ್ಕೆ ಖರೀದಿಸುತ್ತಾರೆ. ಆಗ ಭೂಪರಿವರ್ತನೆ ಮಾಡುವಾಗ ಪ್ರಾಪರ್ಟಿ ಕಾರ್ಡ್ ಬೇಕಾಗುತ್ತದೆ. ಅದಕ್ಕೆ ವಿನಾಯಿತಿ ಸಿಕ್ಕಿಲ್ಲ. ಇನ್ನು ಅದರ ಮುಂದಿನ ಹೆಜ್ಜೆ ಸಿಂಗಲ್ ಸೈಟ್ ಮಾಡುವುದು. ಭೂಪರಿವರ್ತನೆ ತಾಲೂಕು ಕಚೇರಿಯಲ್ಲಿ ಮಾಡಬಹುದಾಗಿದ್ದರೆ ಸಿಂಗಲ್ ಸೈಟ್ ಮಾಡುವುದು ಮೂಡಾದಲ್ಲಿ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೀವು ಸಿಂಗಲ್ ಸೈಟ್ ಮಾಡಿಸುವಾಗ ಅಲ್ಲಿ ಪ್ರಾಪರ್ಟಿ ಕಾರ್ಡ್ ಬೇಕಾಗುತ್ತದೆ. ಕೊನೆಯದಾಗಿ ಮೂರನೇ ಹಂತ ನೊಂದಾವಣೆ. ಅದಕ್ಕೆ ಮಾತ್ರ ಪ್ರಾಪರ್ಟಿ ಕಾರ್ಡ್ ಸದ್ಯ ಬೇಡಾ. ಮತ್ತೆ ನೋಡೋಣ ಎನ್ನುವ ಆದೇಶ ಬಂದಿರುವುದು. ಹಾಗಾದರೆ ಏನು ಪ್ರಯೋಜನ? ಏನೂ ಪ್ರಯೋಜನವಿಲ್ಲವೇ? ಯಾರು ತಮ್ಮ ಭೂಮಿಯನ್ನು ಈಗಾಗಲೇ ಭೂಪರಿವರ್ತನೆ ಮಾಡಿ ನಂತರ ಅದು ಸಿಂಗಲ್ ಸೈಟ್ ಎಪ್ರೂವಲ್ ಆಗಿದ್ದಲ್ಲಿ ಆಗ ಅವರಿಗೆ ಭೂನೊಂದಾವಣಿ ಮಾಡುವಾಗ ಪ್ರಾಪರ್ಟಿ ಕಾರ್ಡ್ ಇಲ್ಲದಿದ್ದರೂ ಪರವಾಗಿಲ್ಲ ಎನ್ನುವ ವಾತಾವರಣ ಈಗ ಸದ್ಯ ಇರುವುದು. ಉಳಿದ ಎಲ್ಲರಿಗೂ ಕೈಗೆ ಬಂದ ತುತ್ತು ಬಾಯಿಯಿಂದ ಕೆಳಗೆ ಹೋಗಿ ಗಂಟಲಲ್ಲಿ ಸಿಕ್ಕಿಕೊಂಡಿರುವ ಪರಿಸ್ಥಿತಿ ಬಂದಿರುವುದು. ಹಾಗಾದರೆ ನಮ್ಮ ಶಾಸಕರು ಏನು ಮಾಡಬೇಕು?
ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಕಾಲು ಹಿಡಿದು ಮರು ಆದೇಶ ಹೊರಡಿಸಬೇಕು. ಮತ್ತೆ ಸಿಎಂ ಮತ್ತು ಕಂದಾಯ ಸಚಿವರಿಗೆ ಮನವರಿಕೆ ಮಾಡಿ ಹೊಸ ಆದೇಶ ತರಬೇಕು. ನೀವಿಗ ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಮಾಡಿರುವ ವಿನಾಯಿತಿ ಏನೂ ಉಪಯೋಗವಾಗುತ್ತಿಲ್ಲ. ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರ ಯೂಸ್ ಆಗಿದೆ. ಆದ್ದರಿಂದ ಭೂಪರಿವರ್ತನೆ, ಸಿಂಗಲ್ ಸೈಟ್ ಮಾಡುವಾಗಲೂ ಪ್ರಾಪರ್ಟಿ ಕಾರ್ಡ್ ಸದ್ಯ ಅಗತ್ಯ ಇಲ್ಲ ಎಂದು ಮನಸ್ಸಿಗೆ ಮುಟ್ಟುವ ಹಾಗೆ ಹೇಳಿ ಹೊಸ ಸೂಚನೆ ಹೊರಡಿಸಬೇಕು. ಅದಕ್ಕಾಗಿ ನಮ್ಮ ಇಬ್ಬರು ಶಾಸಕರು ಮತ್ತೆ ಸಿಎಂ ಎದುರು ಕೈಕಟ್ಟಿ ನಿಲ್ಲಬೇಕು. ಇಲ್ಲದಿದ್ದರೆ ಜನ ಹೊಗಳುವುದು ಬಿಡಿ, ಹಿಂದೆಯಿಂದ ಬೈಯುತ್ತಾ ತಿರುಗುತ್ತಾರೆ!

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Hanumantha Kamath May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search