ಮೀನುಗಾರ ಮಹಿಳೆಯರಿಗೆ ಹಣ ಕೊಟ್ಟು ಸಮಾವೇಶಕ್ಕೆ ಕರೆತಂದಿದ್ದರು ಎನ್ನುವ ವದಂತಿ!!
ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪರ ಮತ್ತು ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ಎರಡೂ ಕಡೆ ಶಕ್ತಿ ಪ್ರದರ್ಶನದ ರೀತಿಯಲ್ಲಿ ಜನರನ್ನು ಸಮಾವೇಶಕ್ಕೆ ಕರೆತರಲಾಗುತ್ತಿದೆ. ಅದೇ ರೀತಿ ಸೋಮವಾರ ಕೂಡ ಕುಳೂರಿನಲ್ಲಿ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲು ಆಗಮಿಸಿದ ನಾಗರಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸೆಂಟ್ರಲ್ ಮೀನು ಮಾರುಕಟ್ಟೆ ಅಕ್ಷರಶ: ಕರ್ಫೂ ವಾತಾವರಣವನ್ನು ನೆನಪಿಸುತ್ತಿತ್ತು. ಮೀನುಗಾರ ಮಹಿಳೆಯರು ಬೆಳಗ್ಗಿನಿಂದಲೇ ತಮ್ಮ ಬುಟ್ಟಿಗಳನ್ನು ಮಡಚಿ ಹಾಕಿ ವ್ಯಾಪಾರಕ್ಕೆ ರಜೆ ಘೋಷಿಸಿದ್ದರು. ಆದರೆ ಕೆಲವರು ಏನು ಸುದ್ದಿ ಹಬ್ಬಿಸಿದ್ದಾರೆ ಎಂದರೆ ಮೀನುಗಾರ ಮಹಿಳೆಯರಿಗೆ ವ್ಯಾಪಾರ ಬಂದ್ ಮಾಡಿದರೆ ಆಗುವ ನಷ್ಟವನ್ನು ತಾನು ಕೊಡುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭರವಸೆ ಕೊಟ್ಟಿದ್ದರು, ನಷ್ಟವನ್ನು ತುಂಬಿಸಿಕೊಟ್ಟಿದ್ದರು, ಆದ್ದರಿಂದ ಹಣ ತೆಗೆದುಕೊಂಡು ಮೀನುಗಾರ ಮಹಿಳೆಯರು ಹಾಗೆ ಮಾಡಿದ್ದಾರೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.
ಆದರೆ ಇದು ಎಷ್ಟರಮಟ್ಟಿಗೆ ಸುಳ್ಳು ಎನ್ನುವುದು ನಿಮಗೆ ಗೊತ್ತಿರಬಹುದು. ಯಾಕೆಂದರೆ ಮೀನುಗಾರ ಮಹಿಳೆಯರು ಎಂದರೆ ಅವರು ಮೊಗವೀರ ಸಮುದಾಯದವರು. ಮೊಗವೀರರು ಅಪ್ಪಟ ಹಿಂದೂತ್ವವಾದಿಗಳು. ಅವರಲ್ಲಿ ಕೆಲವರು ಸ್ವಂತ ಬೋಟ್ ಹೊಂದಿರುವವರನ್ನು ಬಿಟ್ಟರೆ ಹೆಚ್ಚಿನವರು ಮಧ್ಯಮ ವರ್ಗದವರು. ಇತ್ತೀಚೆಗೆ ಅಡ್ಯಾರ್ ನಲ್ಲಿ ಸಿಎಎ ವಿರುದ್ಧ ಮುಸಲ್ಮಾನ ಸಮುದಾಯದವರು ಪ್ರತಿಭಟನೆ ಮಾಡಿದರಲ್ಲ, ಅದರಲ್ಲಿ ಅನೇಕರು ಮೀನು ವ್ಯಾಪಾರಿಗಳು ಅಂದರೆ ಮೊಗವೀರರು ಬೋಟಿನಲ್ಲಿ ಹೋಗಿ ಮೀನು ಹಿಡಿದು ತಂದು ಈ ಮುಸಲ್ಮಾನ ವ್ಯಾಪಾರಿಗಳಿಗೆ ಮಾರಿದ ಬಳಿಕ ಈ ಮುಸಲ್ಮಾನ ವ್ಯಾಪಾರಿಗಳಿಂದ ಮೊಗವೀರ ಮಹಿಳೆಯರು ಮೀನು ಖರೀದಿಸಿ ಅದನ್ನು ಮಾರ್ಕೆಟಿಗೆ ತಂದು ಮಾರಾಟ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಇಲ್ಲಿ ಮುಸಲ್ಮಾನ ಮೀನು ವ್ಯಾಪಾರಿಗಳು ಮತ್ತು ಮೊಗವೀರ ಸಮುದಾಯದವರು ವ್ಯಾಪಾರ ವಹಿವಾಟಿನ ಕಾರಣದಿಂದ ಒಟ್ಟಾಗಿ ಇದ್ದಾರೆ. ಇತ್ತೀಚೆಗೆ ಏನಾಗಿತ್ತು ಎಂದರೆ ಸಿಎಎ ವಿರುದ್ಧ ಪ್ರತಿಭಟನೆಯ ನಿಮಿತ್ತ ಮುಸ್ಲಿಮರು ವ್ಯಾಪಾರ ಬಂದ್ ಮಾಡಿ ತೆರಳಿದ್ದರು. ಇದು ಮೊಗವೀರ ಮೀನು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ದೇಶದ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಮುಸ್ಲಿಮರು ವ್ಯಾಪಾರ ಬಂದ್ ಮಾಡಿ ಹೋಗಲು ತಯಾರಿದ್ದಾರೆ ಎಂದಾದರೆ ನಾವು ದೇಶದ ಪರ ಇರುವ ಕಾನೂನಿಗೆ ಯಾಕೆ ಬೆಂಬಲ ಕೊಡಬಾರದು ಎಂದು ಅಂದುಕೊಂಡು ಇಡೀ ಮೀನು ಮಾರುಕಟ್ಟೆಯ ಮೊಗವೀರ ಮಹಿಳೆಯರು ವ್ಯಾಪಾರ ಬಂದ್ ಮಾಡಿ ಕುಳೂರು ಕಡೆ ಹೋಗಿದ್ದಾರೆ. ಅಂತವರಿಗೆ ಹಣ ಕೊಟ್ಟು ಪ್ರತಿಭಟನೆಗೆ ಕರೆದಿದ್ದಾರೆ ಎಂದು ಹೇಳುವುದೇ ಮೊಗವೀರರಿಗೆ ಮಾಡುವ ಅವಮಾನ. ಅವರು ಎಂದೂ ಹಣಕ್ಕಾಗಿ ತಮ್ಮ ನಿಷ್ಟೆಯನ್ನು ಮಾರಿದವರಲ್ಲ. ಅವರು ಎಷ್ಟು ಕಷ್ಟಜೀವಿಗಳೋ ಅಷ್ಟೇ ಸ್ವಾಭಿಮಾನಿಗಳು. ಅವರ ರಾಷ್ಟ್ರಪ್ರೇಮವನ್ನು ಅಳೆಯಲು ಸಾಧ್ಯವಿಲ್ಲ. ಇನ್ನು ಹಣ ಕೊಟ್ಟು ಬಂದ್ ಮಾಡಿಸಿದರೂ ಅವರೆಲ್ಲ ಕುಳೂರಿಗೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಿರುವಾಗ ಜನರನ್ನು ಸೇರಿಸಲು ಹೀಗೆ ಹಣ ಹಂಚಲಾಗಿದೆ ಎನ್ನುವುದೇ ಹಾಸ್ಯಾಸ್ಪದ. ಇನ್ನು ಮೀನು ಮಾರುಕಟ್ಟೆ ಮಾತ್ರವಲ್ಲ, ರಥಬೀದಿ ಹೂವಿನ ಮಾರುಕಟ್ಟೆ ಕೂಡ ಬಂದಾಗಿತ್ತು. ಮಂಗಳೂರಿನ ರಥಬೀದಿ ಕೂಡ ಬಹುತೇಕ ಬಂದಾಗಿತ್ತು. ಅಷ್ಟೇ ಅಲ್ಲ, ಕುಳೂರಿನ ಸಮಾವೇಶಕ್ಕೆ ಒಂದೂವರೆ ಲಕ್ಷದಷ್ಟು ಜನ ಬಂದಿದ್ದಾರೆ ಎಂದರೆ ಎಷ್ಟು ಅಂಗಡಿಗಳು, ಆಫೀಸ್ ಗಳು ಬಂದಾಗಿದ್ದವು ಎನ್ನುವುದನ್ನು ನೀವೆ ಯೋಚಿಸಿ. ಅವರನ್ನೆಲ್ಲಾ ಹಣ ಕೊಟ್ಟು ತರಲು ಸಾಧ್ಯವೇ? ಹಣ ಕೊಡಲು ಹೊರಟರೆ ಕುಬೇರನೇ ಬ್ರಾಂಚ್ ಒಪನ್ ಮಾಡಿ ಕುತ್ಕೋಬೇಕಾಗಬಹುದು.
ಹಾಗಾದರೆ ಕುಳೂರು ಸಮಾವೇಶ ಅಷ್ಟು ಯಶಸ್ವಿಯಾಗಲು ಕಾರಣವೇನು? ಸಂಶಯವೇ ಇಲ್ಲ, ಹಿಂದೂತ್ವ. ರಾಜನಾಥ ಸಿಂಗ್ ಅವರೇ ಹೇಳಿರುವಂತೆ ನಾವು ಯಾರನ್ನು ಕೆಣಕಲ್ಲ, ಕೆಣಕಿದವರನ್ಬು ಸುಮ್ಮನೆ ಬಿಡುವುದಿಲ್ಲ. ಅವರು ಅದನ್ಬು ಪಾಕಿಸ್ತಾನವನ್ನು ದೃಷ್ಟಿಯಲ್ಲಿ ಇಟ್ಟು ಹೇಳಿರಬಹುದು. ಆದರೆ ಅದು ಕರಾವಳಿಗೂ ಅನ್ವಯವಾಗುತ್ತದೆ ಎಂದು ಅನಿಸುತ್ತಿದೆ. ಸಿಎಎ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಿದ್ದರೂ ಪ್ರತಿಭಟನೆ ಮಾಡುತ್ತಿರುವ ಈ ಹಂತದಲ್ಲಿ ಅದಕ್ಕೆ ಉತ್ತರ ಕೊಟ್ಟು ದೇಶದ ಸರಕಾರದ ನೈತಿಕ ಬೆಂಬಲ ಹೆಚ್ಚಿಸುವ ಕೆಲಸಕ್ಜೆ ನಾವು ಕೈ ಜೋಡಿಸದಿದ್ದರೆ ಹೇಗೆ ಎಂದು ಅಂದುಕೊಳ್ಳುತ್ತಲೇ ಜನ ಸೇರಿದ್ದಾರೆ.
Leave A Reply