• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಣ್ಣಗುಡ್ಡೆ ವಾರ್ಡಿನಲ್ಲಿ ಆಂಟೋನಿಯವರು ಬರಲ್ವಾ?

Hanumantha Kamath Posted On March 11, 2020
0


0
Shares
  • Share On Facebook
  • Tweet It

ನೀವು ಇವತ್ತು ನೋಡುತ್ತಾ ಇರುವ ಸುಂದರ ಫೋಟೋಗಳು ಮಂಗಳೂರು ಮಹಾನಗರ ಪಾಲಿಕೆಯ ಅಪ್ಪಟ ನಗರದೊಳಗೆ ಬರುವ ಪ್ರಮುಖ ವಾರ್ಡ್ ಆಗಿರುವ ಮಣ್ಣಗುಡ್ಡೆಯದ್ದು. ಇದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನಿವಾಸ ಇರುವ ವಾರ್ಡ್ ಕೂಡ ಹೌದು.
ಮಣ್ಣಗುಡ್ಡೆ ವಾರ್ಡಿನ ಕಾರ್ಪೋರೇಟರ್ ಮನೆ ಹತ್ತಿರದ ಚರಂಡಿ ಮತ್ತು ರೋಡಿನ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೆನೆ. ಪಾಲಿಕೆಯ ಕಮೀಷನರ್ ಅವರಿಗೆ ಕೊಡಲಾಗುವ ಬಂಗ್ಲೆ ಇರುವ ವಾರ್ಡು ಕೂಡ ಹೌದು. ಈ ವಾರ್ಡಿನ ಚರಂಡಿಯ ಫೋಟೋಗಳನ್ನು ನೋಡುವಾಗ ನಿಮಗೆ ಮಂಗಳೂರಿನಲ್ಲಿ ಪ್ರತಿ ವರ್ಷ ನೀವು ಕಟ್ಟುತ್ತಿರುವ ಕಸಕರದ ನೆನಪಾಗುತ್ತಾ ಇರಬಹುದು.
ಪಾಲಿಕೆಯ ವ್ಯಾಪ್ತಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶದಿಂದ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ನಮ್ಮ ನಿಮ್ಮ ತೆರಿಗೆ ಹಣದಿಂದ ಪ್ರತಿ ತಿಂಗಳು ಎರಡೂ ಕಾಲು ಕೋಟಿ ಹಣವನ್ನು ಪಾವತಿಸಲಾಗುತ್ತದೆ. ಅವರಿಗೆ ಅಷ್ಟು ಹಣ ಕೊಡಬೇಕು ಎನ್ನುವ ಕಾರಣದಿಂದ ಪಾಲಿಕೆ ಆಡಳಿತ ನೋಡಿಕೊಳ್ಳುವವರು ಪ್ರತಿ ವರ್ಷ ನಮ್ಮ ಮೇಲೆ ವಿಧಿಸುವ ಕಸಕರ ಹೆಚ್ಚು ಮಾಡುತ್ತಲೇ ಹೋಗುತ್ತಾರೆ. 100 ಚದರ ಅಡಿಗೆ 15 ರೂಪಾಯಿ ಇದ್ದದ್ದು ಈ ವರ್ಷ 50 ರೂಪಾಯಿ ಆಗಿದೆ. 500 ಚದರ ಅಡಿಗೆ 75 ರೂಪಾಯಿ ಇದ್ದದ್ದು 250 ರೂಪಾಯಿ ಆಗಿದೆ. ಅಂದರೆ ಸುಮಾರು 350% ಹೆಚ್ಚಳವಾಗಿದೆ. ಒಂದು ಕಡೆ ನಮ್ಮಿಂದ ಕಸಕರ ಜಾಸ್ತಿ ತೆಗೆದುಕೊಳ್ಳುವುದು ಯಾವ ಕಾರಣಕ್ಕೆ ಎಂದರೆ ಅಲ್ಲಿ ಆಂಟೋನಿಯವರಿಗೆ ಎರಡೂ ಕಾಲು ಕೋಟಿ ಕೊಡಲು ಇದೆ ಎನ್ನುವ ಸಬೂಬು ಪಾಲಿಕೆಯ ಅಧಿಕಾರಿಗಳ ಬಳಿ ತಯಾರಾಗಿ ಇದೆ. ಹಾಗಿದ್ದ ಮೇಲೆ ಮಂಗಳೂರು ಹೇಗೆ ಆಗಬೇಕಿತ್ತು ಎನ್ನುವ ಕಲ್ಪನೆ ಮಾಡಿಕೊಳ್ಳಿ. ನಗರ ವ್ಯಾಪ್ತಿಯ ರಸ್ತೆ, ಚರಂಡಿಗಳು ಸಿಂಗಾಪುರವನ್ನೇ ನಾಚಿಸಬೇಕಿತ್ತು. ಆದರೆ ಹಾಗೇ ಆಗಿದೆಯಾ? ಪ್ರತಿ ದಿನ ಗುಡಿಸಬೇಕಾದ ವಾರ್ಡುಗಳಲ್ಲಿಯೇ ಹೀಗೆ ಪರಿಸ್ಥಿತಿ ಇದ್ದರೆ ಉಳಿದ ವಾರ್ಡುಗಳ ಕಥೆ ಹೇಗಿರಬಹುದು ನೀವೆ ಯೋಚಿಸಿ. ಇಲ್ಲಿ ಆಗಿರುವ ಕಥೆ ಏನೆಂದರೆ ಹೆಸರಿಗೆ ತ್ಯಾಜ್ಯ ಸಂಗ್ರಹದ ಕೆಲಸ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನದ್ದು ಆಗಿದ್ದರೂ ಅದನ್ನು ಕೆಳಮಟ್ಟದಲ್ಲಿ ಅನುಷ್ಠಾನಕ್ಕೆ ತರುತ್ತಿರುವವರು ಹಿಂದಿನ ತ್ಯಾಜ್ಯ ಗುತ್ತಿಗೆದಾರರೇ ಆಗಿದ್ದಾರೆ. ಸಾಗಾಟದ ವಾಹನಗಳು ಮತ್ತು ಡ್ರೈವರ್ಸ್ ಬಿಟ್ಟರೆ ಉಳಿದದ್ದೆಲ್ಲಾ ಒಳಗುತ್ತಿಗೆ ಕೊಡಲಾಗಿದೆ. ಆಂಟೋನಿ ವೇಸ್ಟ್ ಜೊತೆಗೆ ಪಾಲಿಕೆ ಮಾಡಿಕೊಂಡ ಒಪ್ಪಂದ ಹೇಗಿತ್ತು ಎಂದರೆ ಒಳಗುತ್ತಿಗೆ ಕೊಡಲೇಬಾರದು, ಎಲ್ಲವನ್ನು ಆಂಟೋನಿಯವರೇ ನಿರ್ವಹಿಸಬೇಕಿತ್ತು ಎಂದಿತ್ತು. ಆದರೆ ಇವರು ಕಂಡೀಷನ್ ಉಲ್ಲಂಘಿಸಿ ಒಳಗುತ್ತಿಗೆ ಕೊಟ್ಟಿದ್ದಾರೆ. ಇದನ್ನು ಪಾಲಿಕೆಯ ಅಧಿಕಾರಿಗಳು ಪ್ರಶ್ನಿಸಿಲ್ಲ. ಯಾಕೆಂದರೆ ಅವರಿಗೆ ಬೇಕಾದಷ್ಟು ಸಮಥಿಂಗ್ ಸಿಗುತ್ತಿರುವುದರಿಂದ ಅವರು ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾಲಿಕೆಯ ಹಿಂದಿನ ಕಮೀಷನರ್ ಅವರು ಟ್ರಾನ್ಸಫರ್ ಆಗಿ ಹೊಸ ಕಮೀಷನರ್ ಬಂದಾಗ ಅವರ ಮೇಲೆ ತುಂಬಾ ವಿಶ್ವಾಸವಿತ್ತು. ಅವರು ಏನಾದರೂ ಮಾಡಬಹುದು ಎಂದು ಅನಿಸಿತ್ತು. ಆದರೆ ಸದ್ಯ ಏನೂ ಆಗಿಲ್ಲ. ಆದರೆ ಕೇವಲ ಆಯುಕ್ತರ ಒಬ್ಬರ ಜವಾಬ್ದಾರಿ ಇದಲ್ಲ. ಅಧಿಕಾರಿಗಳು ಕೂಡ ಜನರ ತೆರಿಗೆ ಹಣದಿಂದ ಸಂಬಳ ಪಡೆಯುವಾಗ ಹೀಗೆ ಬೇಕಾಬಿಟ್ಟಿ ಕೆಲಸ ಮಾಡುವವರ ಮೇಲೆ ನಿಗಾ ಇಡದಿದ್ದರೆ ಪರಮಾತ್ಮ ಮೆಚ್ಚುತ್ತಾನಾ?
0
Shares
  • Share On Facebook
  • Tweet It




Trending Now
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Hanumantha Kamath December 17, 2025
ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
Hanumantha Kamath December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
  • Popular Posts

    • 1
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 2
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 3
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 4
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search