ಅಲ್ಲಾನ ಎದುರು ಯಾವ ಕೊರೊನಾ ಕೂಡ ಇಲ್ಲ ಎಂದದ್ದು ಮೌಲಾನಾ!?
ಒಂದು ವೇಳೆ ಕೊರೊನಾ ನಿಯಂತ್ರಣ ನಮ್ಮ ಕೈ ಮೀರಿ ಹೋದರೆ ಅದಕ್ಕೆ ಕಾರಣ ಮಾರ್ಚ್ ಮಧ್ಯದಲ್ಲಿ ದೆಹಲಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶ ಎನ್ನಲು ಯಾವ ಹೆದರಿಕೆಯೂ ಇಲ್ಲ. ಯಾಕೆಂದರೆ ಸಮಾವೇಶದಲ್ಲಿ ಭಾಗಿಯಾಗಿದ್ದ ಸಾವಿರಾರು ಮುಸ್ಲಿಮರು ಸೋಂಕು ಅಂಟಿಸಿಕೊಂಡು ದೇಶಾದ್ಯಂತ ಚದುರಿದ ಹಿನ್ನೆಲೆಯಲ್ಲಿ , ರಾಷ್ಟ್ರದ ಮೂಲೆಮೂಲೆಗೂ ಈ ಮಹಾಮಾರಿ ಸುಲಭವಾಗಿ ಹಬ್ಬಿದೆ. 21 ದಿನಗಳ ಲಾಕ್ ಡೌನ್ ನಂತರ ಕಠಿಣ ಕ್ರಮಗಳು ಫಲ ನೀಡದಂತಾಗಿದೆ. ಈ ಸಮಾವೇಶದಿಂದಲೇ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಪತ್ತೆಯಾಗಿದೆ. ನಿನ್ನೆಯಿಂದ ದೇಶದ ನಾನಾ ಕಡೆಗಳಲ್ಲಿ ಪತ್ತೆಯಾದ ಸೊಂಕೀತರನ್ನು ವಿಚಾರಿಸಿದಾಗ ಅವರೆಲ್ಲರಿಗೂ ದೆಹಲಿ ಸಮಾವೇಶದ ನಂಟು ಇರುವುದು ಗ್ಯಾರಂಟಿಯಾಗಿದೆ. ಇಷ್ಟೆಲ್ಲ ಆದರೂ ಕೆಲವು ಮುಸ್ಲಿಂ ಧಾರ್ಮಿಕ ಗುರುಗಳು ಕೊಡುತ್ತಿರುವ ಹೇಳಿಕೆ ಮತ್ತು ಅವರನ್ನು ಬೆಂಬಲಿಸಿ ಮಾತನಾಡುತ್ತಿರುವವರು ದೇಶದಲ್ಲಿ ಪರೋಕ್ಷವಾಗಿ ಯಾವುದೋ ಸಂಚು ನಡೆಸುತ್ತಿರುವಂತೆ ಕಾಣಿಸುತ್ತಿದ್ದಾರೆ. ಅಲ್ಲಿನ ಮೌಲಾನಾ ಸಾದ್ ಎನ್ನುವವರು ನಮಗೆ ಅಲ್ಲಾನ ಎದುರು ಬೇರೆ ಏನಿಲ್ಲ. ಮಸೀದಿಗೆ ಹೋಗಬೇಡಿ ಎನ್ನುವುದು ಸರಿಯಲ್ಲ. ದೆಹಲಿಯ ಈ ನಿಜಾಮುದ್ದೀನ್ ಈ ಬರ್ಕತ್ ಪ್ರದೇಶದಲ್ಲಿ ಬಂದು ಸತ್ತರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನೀವು ಕೊರೊನಾ ಇದ್ದರೂ ಆರಾಮವಾಗಿ ತಿರುಗಾಡಿ ಎಂದು ಆದೇಶ ನೀಡಿದ್ದಾರೆ. ಇದು ನಿಜಕ್ಕೂ ರಾಷ್ಟ್ರದ್ರೋಹ. ಯಾಕೆಂದರೆ ಇಡೀ ದೇಶ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಕೈಕಾಲು ಬಡಿಯುತ್ತಿದ್ದರೆ ಇಂತವರು ಹೀಗೆ ಹೇಳಿಕೆ ಕೊಡುವುದು ದೇಶವನ್ನು ನಾಶ ಮಾಡಲು ಪಣ ತೊಟ್ಟಂತೆ ಕಾಣುತ್ತದೆ. ಇನ್ನು ದೆಹಲಿಯ ಜೆಎನ್ ಯು ವಿದ್ಯಾರ್ಥಿ ಬಿಲಾಲ್ ಖಾನ್ ಕೂಡ ಇದನ್ನು ಬೆಂಬಲಿಸಿ ಮಾಡಿದ್ದಾರೆ. ಇನ್ನು ಆಪ್ ಪಕ್ಷದ ರಾಘವ್ ಚಂದ್ರ ಎನ್ನುವವರು ದೆಹಲಿಯ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪೊಲೀಸರು ತೆಗೆದುಕೊಂಡ ನಿರ್ಧಾರಗಳೇ ತಪ್ಪಾಗಿದ್ದವು ಎಂದು ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಸಮಾವೇಶದ ಸ್ಥಳದಿಂದ 53 ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರ ಸರಕಾರದ ಅಧೀನದಲ್ಲಿ ಬರುವುದರಿಂದ ದೆಹಲಿಯ ಸರಕಾರ ಈಗ ವಿಷಯವನ್ನು ಕೇಂದ್ರದ ಮೇಲೆ ಹಾಕುವ ಪ್ಲಾನ್ ಮಾಡುತ್ತಿದೆ.
ಈ ಧಾರ್ಮಿಕ ಸಮಾವೇಶದಿಂದ ನಮಗೇನು ಹೆದರಿಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಮೊದಲನೇಯದಾಗಿ ಆ ಮುಸ್ಲಿಂ ಸಮಾವೇಶದಲ್ಲಿ ಕರ್ನಾಟಕದಿಂದ ಕನಿಷ್ಟ 21 ಜನ ಭಾಗವಹಿಸಿದ್ದಾರೆ ಎನ್ನುವ ಖಚಿತ ಮಾಹಿತಿ ಇದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇನ್ನು ನಮಗೆ ಹೆಚ್ಚುವರಿ ಆತಂಕ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲಿಯೂ ಮಂಗಳೂರಿನ ಪಿಲ್ಲಾರ್, ಚೆಂಬುಗುಡ್ಡೆಯ ಕೆಲವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಇನ್ನು ಆ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ವಿದೇಶದಿಂದ ಬಂದ 300 ಜನ ಕೂಡ ಭಾಗವಹಿಸಿದ್ದಾರೆ. ಇದರಿಂದ ದೇಶದಲ್ಲಿ 24 ಗಂಟೆಯಲ್ಲಿ 386 ಹೊಸ ಪ್ರಕರಣಗಳು ದಾಖಲಾದಂತೆ ಆಗುತ್ತದೆ.
ಕೊರೋನಾ ಸೋಂಕೀತರಲ್ಲಿ ನೂರರಲ್ಲಿ ಸಾಯುವುದು ಮೂರು ಜನ ಮಾತ್ರ ಆದರೂ ಹೀಗೆ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಕೊರೊನಾ ಹತ್ತಿಸಿಕೊಂಡ ಸಾವಿರಾರು ಜನ ಅವರ ಮನೆ, ಕೇರಿಗೆ ಹೋಗಿ ಸುತ್ತಾಡುವುದರಿಂದ ಏನಾಗುತ್ತದೆ ಎಂದರೆ ಅದರಿಂದ ಹೆಚ್ಚೆಚ್ಚು ಜನ ಈ ಸೊಂಕಿಗೆ ಒಳಗಾಗುತ್ತಾರೆ. ಅದರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಪಾಯ ಹೆಚ್ಚಾಗುತ್ತದೆ. ಇನ್ನು ಇವತ್ತು ಕೇರಳ ನ್ಯಾಯಾಲಯ ಕರ್ನಾಟಕ ಗಡಿಯನ್ನು ತೆರೆಯಲು ಸೂಚನೆ ನೀಡಬೇಕೆಂದು ಕೇಂದ್ರಕ್ಕೆ ಆದೇಶ ನೀಡಿದೆ. ಇದರಿಂದ ದಕ್ಷಿಣ ಕನ್ನಡದ ಜನ ನಿಜಕ್ಕೂ ಭಯಬೀತರಾಗಿದ್ದಾರೆ. ಒಂದು ವೇಳೆ ಕೇಂದ್ರ ಸರಕಾರ ಕೇರಳ ಹೈಕೋರ್ಟಿನ ಆದೇಶವನ್ನು ಮನ್ನಿಸಿ ಗಡಿ ತೆರೆಯಲು ಸೂಚನೆ ಕೊಟ್ಟರೆ ನಮ್ಮ ಜಿಲ್ಲೆ ಆತ್ಮಹತ್ಯಾಕಾರಿ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ. ಯಾಕೆಂದರೆ ನಮ್ಮ ಕರ್ನಾಟಕದ ಇಡೀ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 110. ಅದೇ ಕೇರಳದ ಒಂದೇ ಜಿಲ್ಲೆ ಕಾಸರಗೋಡುವಿನಲ್ಲಿ ಅದರ ಸಂಖ್ಯೆ 120. ಕಾಸರಗೋಡುವಿನಲ್ಲಿ ಯಾವುದೇ ಮೆಡಿಕಲ್ ಕಾಲೇಜು ಇದ್ದಂತಿಲ್ಲ. ಅಲ್ಲಿನ ಜನ ಯಾವುದೇ ವೈದ್ಯಕೀಯ ನೆರವಿಗೆ ಓಡಿ ಬರುವುದು ಮಂಗಳೂರಿಗೆ. ಹೀಗಿರುವಾಗ ಗಡಿಯನ್ನು ತೆರೆದರೆ ಏನಾಗುತ್ತದೆ. ವೆನಲಾಕ್ ನಲ್ಲಿ ಕೊರೊನಾ ಸೋಂಕಿತರು ತುಂಬಿ ತುಳುಕಿ ಹೋಗಲಿದ್ದಾರೆ. ಅದರ ನಂತರ ಪರಿಸ್ಥಿತಿ ನೀವೆ ಊಹಿಸಿಕೊಳ್ಳಿ. ಉಳಿದದ್ದು ನಮ್ಮ ಜನಪ್ರತಿನಿಧಿಗಳಿಗೆ ಬಿಟ್ಟಿದ್ದು. ಎಷ್ಟರಮಟ್ಟಿಗೆ ಈ ವಿಷಯಗಳನ್ನು ಕೇಂದ್ರಕ್ಕೆ ಮನದಟ್ಟು ಮಾಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ!
Leave A Reply