ಕೊರೋನಾ ರೋಗದಿಂದ ಸಾವಿಗೀಡಾದ ಬಂಟ್ವಾಳದ ವೃದ್ಧೆಗೆ ಸಂಬಂಧಿಕರಾದ ದ.ಕ ಜಿಲ್ಲಾ ಪೊಲೀಸರು.
ನಿನ್ನೆ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ವೃದ್ದೆಯ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾದ ಸಮಯದಲ್ಲಿ ಶವಧಪನದ ಕೆಲಸವನ್ನು ದ.ಕ ಜಿಲ್ಲಾ ಪೊಲೀಸರೇ ನಡೆಸಿದ ಪ್ರಸಂಗ ವರದಿಯಾಗಿದೆ. ದ.ಕ ಜಿಲ್ಲಾ ಪೊಲೀಸರು ಚಿತಾಗಾರವನ್ನು ಹುಡುಕುವಲ್ಲಿಂದ ಹಿಡಿದು ಬೇಕಾಗುವ ಸೌದೆ ಒಟ್ಟು ಮಾಡಿ, ಸೀಮೆ ಎಣ್ಣೆ, ತುಪ್ಪ ಮುಂತಾದ ಸಾಮಾಗ್ರಿಗಳನ್ನು ಸ್ವತಃ ಪೊಲೀಸರೇ ತರಿಸಿ ಧಪನ ಮಾಡಬೇಕಾಯಿತು. ಈ ಸಮಯದಲ್ಲಿ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಮಾಡಲೇ ಬೇಕೆಂಬ ದೃಢ ಸಂಕಲ್ಪ ತೊಟ್ಟ ಪೊಲೀಸರು ರಾತ್ರಿ 2 ಗಂಟೆಗೆ ಶವ ಧಪನದ ಕಾರ್ಯವನ್ನು ಮುಗಿಸಿ ಬಿಟ್ಟರು.
ಮಾನವೀಯತೆ/ಕರುಣೆ ಇಲ್ಲದವರು ಪೊಲೀಸರು ಎಂದು ಹೇಳಿಕೊಂಡು ಬರುವವರು ಕೂಡ ಮಾಡದ ಕಾರ್ಯವನ್ನು ಸ್ವತಃ ಪೊಲೀಸರೇ ಮುಂದೆ ನಿಂತು ಸಂಪೂರ್ಣ ಶವ ಧಪನವಾಗುವ ತನಕ ಕಾದು ಬಳಿಕ ಪೊಲೀಸರು ವಾಪಾಸಾದರು. ಕೇವಲ 1-2 ವ್ಯಕ್ತಿಗಳು ಮೃತ ಹೊಂದಿದಾಗಲೇ ನಮ್ಮ ಜನರ-ಜಿಲ್ಲಾಡಳಿತದ ಅವಸ್ಥೆ ಈ ರೀತಿಯಾದರೇ ಆಮೇರಿಕಾ ದೇಶಕ್ಕಾದ ಪರಿಸ್ಥಿತಿ ಆದರೇ ದೇವರೇ ಗತಿ.
ಕೊರೋನಾ ಎದುರಿಸಲು ಸರ್ವ ಸಿದ್ಧ ಎಂದು ಹೇಳಿಕೊಂಡು ಬರುತ್ತಿರುವ ಜಿಲ್ಲಾಡಳಿತ ಕೊರೋನಾದಿಂದಾಗಿ ಮೃತಪಟ್ಟಲ್ಲಿ ಶವ ಸಂಸ್ಕಾರ ನಡೆಸಲು ಜಾಗಕ್ಕೆ ಪರದಾಡಬೇಕಾದ ದುಸ್ಥಿತಿ ಬಂದಿರುವುದು ವಿಪರ್ಯಾಸ.ಆದರೆ ಎಲ್ಲಾ ಸಮಯದಲ್ಲಿಯೂ ಸಾಮಾಜಿಕ ಜವಾಬ್ದಾರಿ ಗಳನ್ನು ನಿಭಾಯಿಸುವ ಅನಿವಾರ್ಯತೆ ಮತ್ತು ಅವಶ್ಯಕತೆ ಪೊಲೀಸರಿಗೇ ಮಾತ್ರವೇ?
Leave A Reply