• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಕ್ ಮಿತ್ರ ಟರ್ಕಿಯಲ್ಲಿ ಮುದಿಬೆಕ್ಕಿನಂತೆ ಕುಳಿತಿದ್ದ ಅಮೀರ್ ಖಾನ್ !!

Hanumantha Kamath Posted On August 19, 2020


  • Share On Facebook
  • Tweet It

ಅಪ್ಪಟ ಶತ್ರು ರಾಷ್ಟ್ರವೊಂದರ ನೆಲದಲ್ಲಿ ಮುದಿ ಬೆಕ್ಕಿನಂತೆ ಅಲ್ಲಿಯ ರಾಷ್ಟ್ರಪತಿಯ ಪತ್ನಿಯ ಎದುರು ಜೊಲ್ಲುಗರೆಯುತ್ತಾ ಕುಳಿತುಕೊಂಡ ನಮ್ಮ ಗಜನಿ ಅಮೀರ ಖಾನ್ ನ ನಡೆಯನ್ನು ಒಬ್ಬ ರಾಷ್ಟ್ರಭಕ್ತನಾಗಿ ಖಂಡಿಸುತ್ತೇನೆ. ಅಷ್ಟಕ್ಕೂ ಅಮೀರ್ ಖಾನ್ ಟರ್ಕಿಗೆ ಹೋಗಿ ಅಲ್ಲಿ ಕುಳಿತ ಫೋಟೋವೊಂದನ್ನು ನೋಡುವಾಗ ಮೈ ಎಲ್ಲ ಉರಿಯುತ್ತದೆ. ಅಷ್ಟಕ್ಕೂ ಟರ್ಕಿಯ ಆಡಳಿತಗಾರರು ಭಾರತವನ್ನು ನೋಡುವುದೇ ವೈರಿಯಾಗಿ. ನಾವು ಇಲ್ಲಿ ಆರ್ಟಿಕಲ್ 370 ನಿಷೇಧ ಮಾಡುವಾಗ ಟರ್ಕಿಯಲ್ಲಿ ಅವರಿಗೆ ಹೊಟ್ಟೆನೋವಾಗಿತ್ತು. ನಿಷೇಧದ ವಿರುದ್ಧ ಖಂಡನೆ ಅಲ್ಲಿನ ರಾಷ್ಟ್ರಾಧ್ಯಕ್ಷರಿಂದ ಬಂದಿತ್ತು. ಅಂತಹ ದೇಶಕ್ಕೆ ಹೋಗಿ ಅಮೀರ್ ಖಾನ್ ಬಂದಿದ್ದಾರೆ. ಕಳೆದ ಬಾರಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಬಾಲಿವುಡ್ ದಿಗ್ಗಜರನ್ನು ಕರೆದು ಮಹಾತ್ಮಾ ಗಾಂಧಿಜಿಯವರ ಭೋದನೆಗಳನ್ನು ಅನುಷ್ಟಾನಕ್ಕೆ ತರುವುದರ ಬಗ್ಗೆ ಸಂವಾದ ನಡೆಸಿದ್ದರು. ಅದರಲ್ಲಿ ಇದೇ ಅಮೀರ್ ಖಾನ್ ಗೂ ಆಹ್ವಾನ ಇತ್ತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಇತನ ಕುಳಿತ ಫೋಟೋ ನೀವು ನೋಡಿರಬಹುದು ಅಥವಾ ವಿಡಿಯೋ ಗಮನಿಸಿರಬಹುದು. ಕಾಲ ಮೇಲೆ ಕಾಲು ಹಾಕಿ ನಾನು ಯಾರಿಗೂ ಕ್ಯಾರೇ ಮಾಡುವುದಿಲ್ಲ ಎನ್ನುವ ರೀತಿಯಲ್ಲಿ ಕುಳಿತಿದ್ದ ಈ ಅಸಾಮಿ. ಮೊನ್ನೆ ಟರ್ಕಿಯಲ್ಲಿ ಇವನು ಕುಳಿತ ಫೋಟೋ ನೋಡಿ. ಯಾವುದೋ ಜ್ಯೂನಿಯರ್ ಆರ್ಟಿಸ್ಟ್ ಹೀರೋ ಎದುರು ಕುಳಿತುಕೊಂಡ ಹಾಗೆ ಕಾಣಿಸುತ್ತದೆ. ನಾನು ಇಲ್ಲಿ ಕುಳಿತುಕೊಂಡ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಬಾಡಿ ಲ್ಯಾಗ್ವೆಂಜ್ ಬಗ್ಗೆ ಕೂಡ ಹೇಳುತ್ತಿದ್ದೇನೆ. ಇಲ್ಲಿ ಇಂತವರಿಗೆ ನಾವು ಮರ್ಯಾದೆ ಕೊಟ್ಟಿದ್ದು ಜಾಸ್ತಿಯಾಗಿರುವುದರಿಂದ ಅವರಿಗೆ ಧೀಮಾಕು ತಲೆಯಲ್ಲಿ ತುಂಬಿ ತುಳುಕುತ್ತಾ ಇರುತ್ತದೆ. ಅದಕ್ಕೆ ನಾವೇ ಪ್ರಭಾವಿಗಳು. ನಮ್ಮ ಬಳಿಯೇ ಕೋಟಿಗಟ್ಟಲೆ ಹಣ, ಬಂಗಾರ, ಕಾರುಗಳು, ಬಂಗ್ಲೆ ಇರುವುದು. ಈ ಪ್ರಧಾನಿ ಫಕೀರನ ಬಳಿ ಏನಿದೆ ಎನ್ನುವ ಕೊಬ್ಬು ತಲೆಯಲ್ಲಿ ತುಂಬಿರುತ್ತದೆ. ನಾಲ್ಕು ಜನ ಸಿಳ್ಳೆ ಹೊಡೆದ ತಕ್ಷಣ ಇವರು ತಮ್ಮನ್ನು ತಾವು ಕ್ರಾಂತಿಕಾರಿ ಎನಿಸಿಕೊಳ್ಳುತ್ತಾರೆ.

ಅಮೀರ್ ಖಾನ್ ಒಬ್ಬ ಒಳ್ಳೆಯ ನಟ ಇರಬಹುದು. ಆದರೆ ಒಬ್ಬ ಒಳ್ಳೆಯ ನಾಗರಿಕನಾಗಿಲ್ಲ. ಆತ ನಟನೆಯಿಂದ ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಬಹುದೇ ವಿನ: ಬೇರೆ ಏನೂ ಇಲ್ಲ. ಯಾಕೆಂದರೆ ಇಂತವರಿಗೆ ತಮ್ಮ ದೇಶಕ್ಕಿಂತ ವೈಯಕ್ತಿಕ ಸ್ವಾರ್ಥ ಮುಖ್ಯ. ಈ ಮಣ್ಣಿನಲ್ಲಿ ಹುಟ್ಟಿದ ವ್ಯಕ್ತಿ ಮೊದಲಿಗೆ ಮರ್ಯಾದೆ ಕೊಡಬೇಕಾಗಿರುವುದು ಈ ನೆಲಕ್ಕೆ. ಆದರೆ ಇಲ್ಲಿ ಒಮ್ಮೆ ಅಮೀರ್ ಖಾನ್ ಏನು ಹೇಳಿದ್ದ ನೆನಪಿಸಿಕೊಳ್ಳಿ. ನನ್ನ ಪತ್ನಿಗೆ ಭಾರತದಲ್ಲಿ ಅಭದ್ರತೆ ಕಾಡುತ್ತದೆ? ಅಷ್ಟಕ್ಕೂ ಏನು ಅಭದ್ರತೆ? ಒಬ್ಬ ಸಹಾಯಕಿ ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಲಗಾನ್ ಸಿನೆಮಾದ ಸಮಯದಲ್ಲಿ ಅಮೀರ್ ಖಾನ್ ಗೆ ಹತ್ತಿರವಾಗಿದ್ದಳು. ಅವಳ ಹಾರೈಕೆ, ಉಪಚಾರ ನೋಡಿ ಅಮೀರ್ ನಂತರ ಅವಳನ್ನು ಮದುವೆ ಮಾಡಿಕೊಂಡ. ಅದರ ನಂತರ ಅವಳು ಅಮೀರ್ ಖಾನ್ ಹೆಂಡತಿ ಎನಿಸಿಕೊಂಡಳು. ಅದರ ನಂತರ ಅವಳಿಗೆ ಕೋಟಿ ಬೆಲೆಯ ಕಾರು, ಬಂಗಲೆ ಸಿಕ್ಕಿತ್ತು. ಅದರ ನಂತರ ಅವಳಿಗೆ ಐಡೆಂಟಿಟಿ ಸಿಕ್ಕಿತ್ತು. ಕೈ ಕಾಲುಗಳಿಗೆ ಆಳುಗಳು ಸಿಕ್ಕಿದ್ದರು. ಈಗ ಅಂತಹ ಕಿರಣ್ ರಾವ್ ಚಾಪೆಯಿಂದ ಮೊಲದ ಮೆತ್ತನೆಯ ಹಾಸಿಗೆಗೆ ಶಿಫ್ಟ್ ಆದ ಕೂಡಲೇ ಅವಳಿಗೆ ಅಭದ್ರತೆ ಕಾಡುತ್ತದೆ. ಲಗಾನ್ ಸೆಟ್ ನಲ್ಲಿ ಸಾಮಾನ್ಯ ಕಾರ್ಮಿಕರೊಂದಿಗೆ ತಟ್ಟೆ ಊಟ ಮಾಡುತ್ತಿದ್ದವಳಿಗೆ ಈಗ ಫೈವ್ ಸ್ಟಾರ್ ಹೋಟೆಲಿನಲ್ಲಿ ಊಟ ಮಾಡಲು ಶುರುವಾದ ನಂತರ ಅಭದ್ರತೆ ಕಾಡುತ್ತದೆ. ಅಮೀರ್ ಖಾನ್ ಹಣದಲ್ಲಿ ಎರಡು ಸಿನೆಮಾ ನಿರ್ದೇಶನ ಮಾಡಿದ ಕೂಡಲೇ ಅವಳು ಆಸ್ಕರ್ ಆವಾರ್ಡ್ ನಿರ್ದೇಶಕ ಆಗಿಲ್ಲ. ಒಂದು ವೇಳೆ ಅಮೀರ್ ಖಾನ್ ಮದುವೆಯಾಗದೇ ಇದ್ದಿದ್ದರೆ ಇವತ್ತಿಗೂ ಕಿರಣ್ ರಾವ್ ಆಶುತೋಷ್ ಗೋವರಕರ್ ಜೊತೆ ಕ್ಲಾಪ್ ಹಿಡಿದು ನಿಲ್ಲಬೇಕಿತ್ತು. ಇಂತವರಿಂದ ನಮ್ಮ ದೇಶ ಬೋಧನೆ ಮಾಡಿಸಿಕೊಳ್ಳಬೇಕಿಲ್ಲ.

ಈ ದೇಶಕ್ಕೆ ಯಾರು ಟೀಕೆ ಮಾಡುತ್ತಾರೋ ಅಂತಹ ದೇಶದವರ ಒಂದು ತೊಟ್ಟು ನೀರು ಕುಡಿಯಲ್ಲ ಎಂದು ಅಮೀರ್ ಹೇಳಿದಿದ್ದರೆ ಅವರು ನಟನಾಗಿ ಮಾತ್ರವಲ್ಲ, ಒಬ್ಬ ಉತ್ತಮ ನಾಗರಿಕನಾಗಿಯೂ ಸೈ ಎನಿಸಿಕೊಂಡಿದ್ದ. ಅಷ್ಟಕ್ಕೂ ಟರ್ಕಿ ಪಾಕಿಸ್ತಾನದ ಆಪ್ತ ಮಿತ್ರ. ನಮ್ಮ ಶತ್ರುವಿನ ಗೆಳೆಯನೊಂದಿಗೆ ಲಲ್ಲೆಗರೆಯುವುದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಅಮೀರ್ ಖಾನ್ ಗೆ ತಲೆಕೂದಲು ಮಾತ್ರ ಬಿಳಿಯಾಗಿದೆ ಎಂದುಕೊಂಡಿದ್ದೆ ಆದರೆ ತಲೆಯ ಒಳಗೆ ಕೇವಲ ಸೆಗಣಿ ತುಂಬಿದೆ ಎಂದು ಗೊತ್ತಾದದ್ದು ಟರ್ಕಿಯಲ್ಲಿ  ಆತ ನಿಂತಾಗ. ಆ ರಾಷ್ಟ್ರದಲ್ಲಿ ಚರ್ಚ್ ಇದ್ರೆ ಅದನ್ನು ಮಸೀದಿ ಮಾಡಿಬಿಡಬಲ್ಲಷ್ಟು ಪರಧರ್ಮ ಅಸಹಿಷ್ಣುತೆ ಅಲ್ಲಿದೆ. ಕಾಶ್ಮೀರದ ವಿಷಯದಲ್ಲಿ ಟರ್ಕಿ ಪಾಕಿಸ್ತಾನದ ಪರ ಇದೆ. ಅಲ್ಲಿ ಹೋಗಿ ಅಮೀರ್ ಖಾನ್ ಜಾಸ್ತಿ ಅಂದರೆ ಏನು ಮಾಡಬಹುದು. ಅಲ್ಲಿನವರ ಬೂಟು ನೆಕ್ಕಬಹುದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search