ಪಾಕ್ ಮಿತ್ರ ಟರ್ಕಿಯಲ್ಲಿ ಮುದಿಬೆಕ್ಕಿನಂತೆ ಕುಳಿತಿದ್ದ ಅಮೀರ್ ಖಾನ್ !!
ಅಪ್ಪಟ ಶತ್ರು ರಾಷ್ಟ್ರವೊಂದರ ನೆಲದಲ್ಲಿ ಮುದಿ ಬೆಕ್ಕಿನಂತೆ ಅಲ್ಲಿಯ ರಾಷ್ಟ್ರಪತಿಯ ಪತ್ನಿಯ ಎದುರು ಜೊಲ್ಲುಗರೆಯುತ್ತಾ ಕುಳಿತುಕೊಂಡ ನಮ್ಮ ಗಜನಿ ಅಮೀರ ಖಾನ್ ನ ನಡೆಯನ್ನು ಒಬ್ಬ ರಾಷ್ಟ್ರಭಕ್ತನಾಗಿ ಖಂಡಿಸುತ್ತೇನೆ. ಅಷ್ಟಕ್ಕೂ ಅಮೀರ್ ಖಾನ್ ಟರ್ಕಿಗೆ ಹೋಗಿ ಅಲ್ಲಿ ಕುಳಿತ ಫೋಟೋವೊಂದನ್ನು ನೋಡುವಾಗ ಮೈ ಎಲ್ಲ ಉರಿಯುತ್ತದೆ. ಅಷ್ಟಕ್ಕೂ ಟರ್ಕಿಯ ಆಡಳಿತಗಾರರು ಭಾರತವನ್ನು ನೋಡುವುದೇ ವೈರಿಯಾಗಿ. ನಾವು ಇಲ್ಲಿ ಆರ್ಟಿಕಲ್ 370 ನಿಷೇಧ ಮಾಡುವಾಗ ಟರ್ಕಿಯಲ್ಲಿ ಅವರಿಗೆ ಹೊಟ್ಟೆನೋವಾಗಿತ್ತು. ನಿಷೇಧದ ವಿರುದ್ಧ ಖಂಡನೆ ಅಲ್ಲಿನ ರಾಷ್ಟ್ರಾಧ್ಯಕ್ಷರಿಂದ ಬಂದಿತ್ತು. ಅಂತಹ ದೇಶಕ್ಕೆ ಹೋಗಿ ಅಮೀರ್ ಖಾನ್ ಬಂದಿದ್ದಾರೆ. ಕಳೆದ ಬಾರಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಬಾಲಿವುಡ್ ದಿಗ್ಗಜರನ್ನು ಕರೆದು ಮಹಾತ್ಮಾ ಗಾಂಧಿಜಿಯವರ ಭೋದನೆಗಳನ್ನು ಅನುಷ್ಟಾನಕ್ಕೆ ತರುವುದರ ಬಗ್ಗೆ ಸಂವಾದ ನಡೆಸಿದ್ದರು. ಅದರಲ್ಲಿ ಇದೇ ಅಮೀರ್ ಖಾನ್ ಗೂ ಆಹ್ವಾನ ಇತ್ತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಇತನ ಕುಳಿತ ಫೋಟೋ ನೀವು ನೋಡಿರಬಹುದು ಅಥವಾ ವಿಡಿಯೋ ಗಮನಿಸಿರಬಹುದು. ಕಾಲ ಮೇಲೆ ಕಾಲು ಹಾಕಿ ನಾನು ಯಾರಿಗೂ ಕ್ಯಾರೇ ಮಾಡುವುದಿಲ್ಲ ಎನ್ನುವ ರೀತಿಯಲ್ಲಿ ಕುಳಿತಿದ್ದ ಈ ಅಸಾಮಿ. ಮೊನ್ನೆ ಟರ್ಕಿಯಲ್ಲಿ ಇವನು ಕುಳಿತ ಫೋಟೋ ನೋಡಿ. ಯಾವುದೋ ಜ್ಯೂನಿಯರ್ ಆರ್ಟಿಸ್ಟ್ ಹೀರೋ ಎದುರು ಕುಳಿತುಕೊಂಡ ಹಾಗೆ ಕಾಣಿಸುತ್ತದೆ. ನಾನು ಇಲ್ಲಿ ಕುಳಿತುಕೊಂಡ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಬಾಡಿ ಲ್ಯಾಗ್ವೆಂಜ್ ಬಗ್ಗೆ ಕೂಡ ಹೇಳುತ್ತಿದ್ದೇನೆ. ಇಲ್ಲಿ ಇಂತವರಿಗೆ ನಾವು ಮರ್ಯಾದೆ ಕೊಟ್ಟಿದ್ದು ಜಾಸ್ತಿಯಾಗಿರುವುದರಿಂದ ಅವರಿಗೆ ಧೀಮಾಕು ತಲೆಯಲ್ಲಿ ತುಂಬಿ ತುಳುಕುತ್ತಾ ಇರುತ್ತದೆ. ಅದಕ್ಕೆ ನಾವೇ ಪ್ರಭಾವಿಗಳು. ನಮ್ಮ ಬಳಿಯೇ ಕೋಟಿಗಟ್ಟಲೆ ಹಣ, ಬಂಗಾರ, ಕಾರುಗಳು, ಬಂಗ್ಲೆ ಇರುವುದು. ಈ ಪ್ರಧಾನಿ ಫಕೀರನ ಬಳಿ ಏನಿದೆ ಎನ್ನುವ ಕೊಬ್ಬು ತಲೆಯಲ್ಲಿ ತುಂಬಿರುತ್ತದೆ. ನಾಲ್ಕು ಜನ ಸಿಳ್ಳೆ ಹೊಡೆದ ತಕ್ಷಣ ಇವರು ತಮ್ಮನ್ನು ತಾವು ಕ್ರಾಂತಿಕಾರಿ ಎನಿಸಿಕೊಳ್ಳುತ್ತಾರೆ.
Leave A Reply