ಫೇಸ್ಬುಕ್ ಮೂಲಕ ಹನಿಟ್ರ್ಯಾಪ್ ಪ್ರಕರಣ! ನಾಲ್ವರು ಆರೋಪಿಗಳ ಬಂಧನ.!
ಮಂಗಳೂರು: ಕೇರಳ ಮೂಲದ ಯುವಕನಿಗೆ ಮಂಗಳೂರಿನ ಯುವತಿಯರಿಂದ ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಫೇಸ್ ಬುಕ್ ಮುಖಾಂತರ ಪರಿಚಯ ಮಾಡಿಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಸುರತ್ಕಲ್ ಪೋಲಿಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ರೇಷ್ಮಾ @ನೀಮಾ, ಮಹಮ್ಮದ್ ಇಕ್ಬಾಲ್, ಜೀನತ್ ಮತ್ತು ಅಬ್ದುಲ್ ಖಾದರ್ ನಾಜೀಪ್ ಬಂಧಿತರು
ಸುರತ್ಕಲ್ ಪೋಲಿಸ್ ಠಾಣ ವ್ಯಾಪ್ತಿಗೆ ಬರುವ ಕೃಷ್ಣಾಪುರ 6ನೇ ಬ್ಲಾಕ್ ಪರಿಸರದ ಮಠ ರಸ್ತೆಯ ಸಮೀಪದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ತನ್ನ ವ್ಯವಹಾರಕ್ಕಾಗಿ ವಾಸ್ತವ್ಯ ಹೂಡಿದ ಆರೋಪಿಗಳ ಪೈಕಿ ಆರೋಪಿ ಶ್ರೀಮತಿ ರೇಶ್ಮಾ @ನೀಮಾ ಮತ್ತು ಆರೋಪಿ ಶ್ರೀಮತಿ ಜೀನತ್ @ಜೀನತ್ ಮುಬೀನ ಜನರನ್ನು ಸಾಮಾಜಿಕ ಜಾಲತಾನದ ಮೂಲಕ ಪರಿಚಯಿಸಿಕೊಂಡು ಅವರ ಸ್ನೇಹ ಬೆಳೆಸಿ ಬಳಿಕ ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಅಹ್ವಾನಿಸಿ., ಮನೆಗೆ ಬಂದವರನ್ನು ಉಳಿದ ಆರೋಪಿಗಳಾದ ಇಕ್ಬಾಲ್ ಮಹಮ್ಮದ್ @ಇಕ್ಬಾಲ್ ಮತ್ತು ಶ್ರೀ ನಾಸಿಫ್@ಅಬ್ದುಲ್ ಖಾದರ್ ನಾಜೀಪ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತಿದ್ದ ವ್ಯವಸ್ಥಿತ ಜಾಲವೊಂದನ್ನು ಸುರತ್ಕಲ್ ಪೋಲಿಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ
ಕೇರಳ ಮೂಲದವರನ್ನು ಇದೇ ರೀತಿ ಬ್ಲಾಕ್ ಮೇಲ್ ಮಾಡಿ ಅವರಿಂದ 5ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಅವರು ನೀಡಿದ ದೂರಿನ ಅನ್ವಯ ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್ , ನಗದು ಹಣ ,ಕೃತ್ಯಕ್ಕೆ ಉಪಯೊಗಿಸಿದ ಆಯುಧ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಇನ್ನು ಇವರು ಈ ಮುಂಚೆ ಐದಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮತ್ತು ಇವರ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಯಾಗಿರುವ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕಿದ್ದಾರೆ. ಹಲವು ವರ್ಷಗಳಿಂದ ಇದೇ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ ಈ ಗುಂಪು ಇಂದು ಸುರತ್ಕಲ್ ಪೊಲೀಸ್ ಠಾಣೆ ಕಾಟಿಪಳ್ಳದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಇನ್ನು ಕಾರ್ಯಾಚರಣೆಯಲ್ಲಿ ಉಪ ಪೊಲಿಸ್ ಆಯುಕ್ತರಾದ ಶ್ರೀ ಹರಿರಾಮ್ ಶಂಕರ್ ಮತ್ತು ಉಪ ಪೋಲಿಸ್ ಆಯುಕ್ತರಾದ ಶ್ರೀ ವಿನಯ್ ಗಾಂವ್ ಕರ್.,ಉತ್ತರ ಉಪವಿಭಾಗ ಶ್ರೀ ಬೆಳ್ಳಿಯಪ್ಪ ಮತ್ತು ಸುರತ್ಕಲ್ ಪೊಲಿಸ್ ಠಾಣೆಯ ಪೋಲಿಸ್ ನೀರೀಕ್ಷರಾದ ಶ್ರೀ ಚಂದ್ರಪ್ಪ ಕೆ.ಮತ್ತು ಸಿಬ್ಬಂಧಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು
Leave A Reply