• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನವಾಜ್ ತಲೆ ಗೋಡೆಗೆ ಬಡಿದು ರಕ್ತವಾಂತಿ ಮಾಡಿ ಸತ್ತದ್ದು ಉಳಿದವರಿಗೆ ಪಾಠ!!

Tulunadu News Posted On April 3, 2021
0


0
Shares
  • Share On Facebook
  • Tweet It

ನಮ್ಮ ಧರ್ಮ ಶ್ರೇಷ್ಟ ಎಂದು ಅಂದುಕೊಳ್ಳುವುದು ತಪ್ಪಲ್ಲ. ಆದರೆ ನಮ್ಮ ಧರ್ಮ ಮಾತ್ರ ಶ್ರೇಷ್ಟ ಎಂದು ಅಂದುಕೊಳ್ಳುವುದು ಅಕ್ಷರಶ: ತಪ್ಪು. ಕೆಲವರು ತಮ್ಮ ಧರ್ಮ ಮಾತ್ರ ಶ್ರೇಷ್ಟ ಎಂದು ಅಂದುಕೊಂಡು ಮನೆಯಲ್ಲಿಯೇ ತೆಪ್ಪಗೆ ಕುಳಿತುಕೊಂಡಿದ್ದರೆ ಪರವಾಗಿರಲಿಲ್ಲ. ಆದರೆ ಅವರು ಬೇರೆ ಧರ್ಮವನ್ನು ಕೆಣಕಲು ಶುರು ಮಾಡಿದರು. ಬೇರೆ ಧರ್ಮದವರು ಅತ್ಯಂತ ಭಕ್ತಿ ಗೌರವದಿಂದ ಆರಾಧಿಸುವ ದೈವಗಳ ಶಕ್ತಿಯನ್ನು ಪರೀಕ್ಷಿಸಲು ಹೊರಟರು. ಅದರಲ್ಲಿ ತಾವು ಯಶಸ್ವಿಯಾದೆವು ಎಂದು ಅಂದುಕೊಂಡುಬಿಟ್ಟರು. ಯಾಕೆಂದರೆ ಅವರು ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು. ಆದರೆ ಈ ತುಳುನಾಡಿನ ಅತ್ಯಂತ ಪ್ರಬಲ ಶಕ್ತಿಗಳಾದ ದೈವಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಾದಾಗ ಕಾಲ ಮಿಂಚಿತ್ತು. ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಬಳಸಿದ ಕಾಂಡೋಮ್, ಅಶ್ಲೀಲ ಪದಗಳನ್ನು ಬರೆದಿದ್ದ ಪತ್ರ ಇನ್ನು ಏನೇನೂ ಹಾಕಿದವ ರಕ್ತಕಾರಿ ಸತ್ತು ಹೋಗಿದ್ದಾನೆ. ಕೊನೆಕೊನೆಗೆ ಗೋಡೆಗೆ ತಲೆ ಹೊಡೆದು ಹುಚ್ಚುಹಿಡಿದು ಸತ್ತು ಹೋಗಿದ್ದಾನೆ ಎಂದು ಹೇಳಲಾಗಿದೆ. ಅವನು ತನ್ನ ಜೊತೆ ಆವತ್ತು ಆ ಕೆಟ್ಟ ಕೃತ್ಯಗಳಲ್ಲಿ ಭಾಗಿಯಾದವರನ್ನು ಕರೆದು ಸಾವಿನ ಭಯ ಹೇಳಿದ್ದಾನೆ. ನನ್ನ ಹಾಗೆ ನಿಮಗೂ ಹೀಗೆ ಆಗಬಹುದು ಎಂದು ಅವರಿಗೆ ಮನವರಿಕೆ ಮಾಡಿದ್ದಾನೆ. ಅದರಲ್ಲಿ ಒಬ್ಬನಿಗೆ ಈಗಾಗಲೇ ಅನಾರೋಗ್ಯ ಆರಂಭವಾಗಿದೆ. ಉಳಿದ ಇಬ್ಬರು ಪ್ರಾಣಭಯದಿಂದ ಒದ್ದಾಡುತ್ತಿದ್ದಾರೆ. ಸಾವಿನ ಮಂಚದಲ್ಲಿ ಮಲಗಿದವನಿಗೆ ಕೊನೆಗೆ ಜ್ಞಾನೋದಯವಾಗಿ ಹೇಳಿದ ಕಾರಣ ಇವರು ತಪ್ಪು ಕಾಣಿಕೆ ಹಾಕಲು ಮುಂದಾಗಿದ್ದಾರೆ. ಆದರೆ ದೈವ ಇವರ ತಪ್ಪುಕಾಣಿಕೆ ಸ್ವೀಕರಿಸಲು ಒಪ್ಪಲಿಲ್ಲ. ಆದರೆ ನೇರವಾಗಿ ಪೊಲೀಸ್ ಠಾಣೆಯ ದಾರಿ ಮಾತ್ರ ಅವರಿಗೆ ಸಿಕ್ಕಿದೆ. ಅವರಿಗೆ ನ್ಯಾಯಾಲಯ, ಪೊಲೀಸ್ ಅಥವಾ ಕಾನೂನು ಕುಣಿಕೆಯಿಂದ ಶಿಕ್ಷೆ ಆಗಲೂಬಹುದು ಅಥವಾ ಆಗದೇ ತಪ್ಪಿಸಿಕೊಳ್ಳಬಹುದು. ಆದರೆ ಅವರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ನಮ್ಮ ತುಳುನಾಡಿನ ದೈವಗಳ ಕೋಪದಿಂದ ಅವರು ಉಳಿಯಲು ಸಾಧ್ಯವಿಲ್ಲ. ನಾನು ಹೇಳುವುದೇನೆಂದರೆ ತುಳುನಾಡಿನಲ್ಲಿ ನಾವು ಜಾತಿ, ಭಾಷೆ, ಪಂಗಡ, ಪಂಥ, ಧರ್ಮಗಳನ್ನು ಮೀರಿ ದೈವಗಳನ್ನು ಆರಾಧಿಸುತ್ತೇವೆ. ನಮಗೆ ಅವು ಯಾವತ್ತೂ ಕಾಪಾಡುತ್ತವೆ ಎನ್ನುವ ವಿಶ್ವಾಸ ಇದೆ. ಅದು ಪ್ರತಿ ಬಾರಿ ಸತ್ಯವೂ ಆಗಿದೆ. ಒಂದು ವಸ್ತು ಕಾಣೆಯಾದರೆ ಕೊರಗಜ್ಜನನ್ನು ನೆನೆದ ಕೂಡಲೇ ಅದು ಸಿಗುತ್ತದೆ ಎಂದು ಪವಾಡ ಅನುಭವಿಸಿದವರು ಇದ್ದಾರೆ. ಅದೇ ರೀತಿಯಲ್ಲಿ ಕೊರಗಜ್ಜನಿಗೆ ಚಿಕ್ಕ ಹರಕೆ ಹೇಳಿಕೊಂಡರೆ ಸಿಗಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡ ವಸ್ತುಗಳು ಕೂಡ ಸಿಕ್ಕಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಷ್ಟೆಲ್ಲ ಇರುವಾಗ ಏನೋ ಬ್ಲ್ಯಾಕ್ ಮ್ಯಾಜಿಕ್ ಕಲಿತ ನವಾಜ್ ಎನ್ನುವ ಅಬ್ಬೇಪಾರಿ ನಮ್ಮ ದೈವಗಳ ಕಾರಣೀಕಕ್ಕೆ ಸವಾಲು ಹಾಕಿದ್ದ. ನಂತರ ಅವನು ತುಂಬಾ ದಿನ ಬದುಕಲಿಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಾಗಿದೆ. ಅಷ್ಟಕ್ಕೂ ನವಾಜ್ ಗೆ ಸತ್ತಾಗ ವಯಸ್ಸು 32. ಆದರೆ ಅವನ ಮನಸ್ಸಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಇತ್ತು. ಅದೇ ಅವನ ಸಾವಿಗೆ ಕಾರಣವಾಯಿತು.
ನವಾಜ್ ಗೆ ಕಾನೂನಿನ ಶಿಕ್ಷೆ ಕೊಡುವ ಅಗತ್ಯ ಇಲ್ಲ. ಅವನಿಗೆ ಈಗಾಗಲೇ ದೈವಗಳು ಶಿಕ್ಷೆ ನೀಡಿವೆ. ಆದರೆ ಹೀಗೆ ಮಾಡಿದರೂ ತಮಗೆ ಪೊಲೀಸರು ಹಿಡಿಯಲಿಲ್ಲವಲ್ಲ ಎನ್ನುವ ಅಹಂಕಾರ ಅವರಲ್ಲಿ ಇತ್ತು. ಎಷ್ಟೋ ಪ್ರಕರಣಗಳಲ್ಲಿ ಪೊಲೀಸರು ದುಷ್ಟಕೃತ್ಯಗಳನ್ನು ಮಾಡಿದವರು ಯಾರೆಂದು ಗೊತ್ತಾಗದೇ ಪತ್ತೆ ಹಚ್ಚುವಲ್ಲಿ ವಿಫಲವಾದದ್ದು ಇದೆ. ಈ ಪ್ರಕರಣಗಳಲ್ಲಿ ಕೂಡ ಹಾಗೆ ಆಯಿತು. ಇಲ್ಲಿ ಒಂದು ದೈವಸ್ಥಾನದಲ್ಲಿ ಹೀಗೆ ಅಪಚಾರ ನಡೆದ ಮೇಲೆ ಈ ದುರುಳರು ಸರಣಿಯಲ್ಲಿ ಬೇರೆ ದೈವಸ್ಥಾನಗಳ ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸುವ ಪ್ರಯತ್ನ ಮಾಡಿದ್ದರು. ಇವರು ಏನು ಮಾಡಿದರೂ ನಮಗೆ ನಮ್ಮ ದೈವಸ್ಥಾನಗಳ ಬಗ್ಗೆ ಇರುವ ಶ್ರದ್ಧೆಯಲ್ಲಿ ಒಂದಿಂಚೂ ವ್ಯತ್ಯಾಸ ಆಗಲ್ಲ ಎನ್ನುವುದು ಬೇರೆ ವಿಷಯ. ಆದರೆ ಈ ಮೂಲಕ ಆರೋಪಿಗಳು ಹಿಂದೂ-ಮುಸ್ಲಿಮರಲ್ಲಿ ಒಡಕನ್ನು ಉಂಟು ಮಾಡಲು ಯತ್ನಿಸಿರುವುದು ನಿಜ. ಯಾಕೆಂದರೆ ದೈವಸ್ಥಾನಗಳಲ್ಲಿ ಅಪಪ್ರಚಾರ ಮಾಡಿದಾಗ ಅದನ್ನು ಒಬ್ಬ ಪ್ರಜ್ಞೆ ಇರುವ ಹಿಂದೂ ಮಾಡಲು ಸಾಧ್ಯವಿಲ್ಲ ಎನ್ನುವುದು ಯಾರಿಗಾದರೂ ಗೊತ್ತಿರುವ ವಿಷಯ. ಯಾಕೆಂದರೆ ಹಿಂದೂಗಳು ದೈವಗಳ ವಿಷಯದಲ್ಲಿ ಅಗೌರವದಿಂದ ವರ್ತಿಸುವುದು ಬಿಡಿ, ಆ ಬಗ್ಗೆ ಯೋಚಿಸಲು ಕೂಡ ಹೋಗುವುದಿಲ್ಲ. ಆದ್ದರಿಂದ ನಮ್ಮ ದೈವಗಳ ಶಕ್ತಿಯನ್ನು ಅಂದಾಜು ಮಾಡದವರೇ ಹೀಗೆ ಮಾಡಿದ್ದಾರೆ ಎಂದು ಹೆಚ್ಚಿನವರಿಗೆ ಅನಿಸಿತ್ತು. ಅದಕ್ಕಾಗಿ ಪೊಲೀಸರಿಗೆ ದೂರು ಕೊಟ್ಟು ಎಷ್ಟು ದಿನವಾದರೂ ಏನೂ ಆಗದೇ ಇದ್ದಾಗ ಎಲ್ಲರೂ ದೈವಗಳಿಗೆ ಮೊರೆ ಹೋಗಲು ನಿರ್ಧರಿಸಿದರು. ನಮ್ಮ ನಡೆ ಕೊರಗಜ್ಜನೆಡೆ ಎನ್ನುವ ಅಭಿಯಾನದೊಂದಿಗೆ ಪಾದಯಾತ್ರೆ ಮಾಡಲಾಗಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದರು. ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸಿದರು. ಭಕ್ತಿಗೆ ದೈವ ಒಲಿಯಲು ತಡ ಮಾಡಲಿಲ್ಲ. ಆದ್ದರಿಂದ ನಾನು ಹೇಳುವುದೇನೆಂದರೆ ನಮ್ಮ ಧರ್ಮ ಯಾವುದೇ ಇರಲಿ ಆದರೆ ಬೇರೆ ಧರ್ಮದವರನ್ನು ನಾವು ಗೌರವಿಸುವುದನ್ನು ಕಲಿಯಬೇಕು. ದೈವಗಳನ್ನು ನಂಬಿದ ಮುಸ್ಲಿಮರು ನಮ್ಮಲ್ಲಿದ್ದಾರೆ. ಆದ್ದರಿಂದ ಯಾರೋ ಕೆಲವರು ಮತಿಹೀನರು ಮಾಡಿದ ಕೂಡಲೇ ಎಲ್ಲಾ ಮುಸ್ಲಿಮರು ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೀಗೆ ಒಬ್ಬ ದಾರಿ ತಪ್ಪಲು ತಯಾರಾದಾಗ ಅವನ ಕುಟುಂಬಕ್ಕೆ ಅದು ಗೊತ್ತಾದರೆ ತಕ್ಷಣ ಅವರು ಎಚ್ಚೆತ್ತು ಅದನ್ನು ತಪ್ಪಿಸುವುದು ಒಳ್ಳೆಯದು. ಇಲ್ಲದೆ ಹೋದರೆ ಅವರೇ ಮನೆಯ ಯುವಕನನ್ನು ಕಳೆದುಕೊಳ್ಳಬಹುದು!
0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search