ಭಟ್ಕಳ: 8 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆ ಅರೆಸ್ಟ್!
Posted On June 10, 2021
0
8 ವರ್ಷಗಳ ಹಿಂದೆ ಜಾವೇದ್ ಮೊಹಿದ್ದೀನ್ ಎಂಬ ಭಟ್ಕಳದ ಯುಕನನ್ನು ದುಬೈನಲ್ಲಿ ಮದುವೆಯಾಗಿದ್ದಳು, ನಂತರ 2004 ರಲ್ಲಿ 3 ತಿಂಗಳ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ನಂತರ ದುಬೈಗೆ ವಾಪಾಸ್ ಹೋಗಿದ್ದಳು. ಮತ್ತೆ ಕಳ್ಳ ಮಾರ್ಗದ ಮೂಲಕ ದುಬೈನಿಂದ ಭಾರತಕ್ಕೆ ಆಗಮಿಸಿ ತನ್ನ ಮೂರು ಮಕ್ಕಳೊಂದಿಗೆ ಕಳೆದ 8 ವರ್ಷಗಳಿಂದ ಭಟ್ಕಳದಲ್ಲಿ ವಾಸವಿದ್ದಳು.
ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ದಾಳಿ ನಡೆಸಿದಾಗ ನಕಲಿ ವೋಟರ್ ಐಡಿ, ರೇಷನ್ ಕಾರ್ಡ್ ತಯಾರಿಸಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 468, 471 ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









