• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿಯವರೇ ಇವರಿಗೆ ಹಣದ ಜೊತೆ ಬುದ್ಧಿಯೂ ಕಳುಹಿಸಿಕೊಡಿ!!

Tulunadu News Posted On August 16, 2021


  • Share On Facebook
  • Tweet It

ಒಂದು ಆಡಳಿತ ಮಾಡಲು ಅಧಿಕಾರ ವಹಿಸಿಕೊಂಡ ವ್ಯಕ್ತಿ ದೂರದೃಷ್ಟಿಯಿಂದ ಯೋಜನೆಗಳನ್ನು ಹಾಕಿಕೊಳ್ಳಬೇಕೆ ವಿನ: ಆತ ತನಗಾಗಿ, ತನ್ನ ಸುತ್ತಮುತ್ತಲಿನಲ್ಲಿ ಇರುವವರ ಹಿತಕ್ಕಾಗಿ ಮತ್ತು ತನಗೆ ಆರ್ಥಿಕ ಸಂಪನ್ಮೂಲ ಪೂರೈಸುವ ಗುತ್ತಿಗೆದಾರರ ಭವಿಷ್ಯವನ್ನು ಇಟ್ಟುಕೊಂಡು ಯೋಜನೆಗಳನ್ನು ಹಂಚಿಕೊಂಡರೆ ಆತ ಬಾವಿಯೊಳಗಿನ ಕಪ್ಪೆಯೇ ಆಗುತ್ತಾನೆ. ಒಂದು ದಿನ ಹಾವು ನುಂಗಿದಾಗಲೇ ಗೊತ್ತಾಗುವುದು, ತಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುದಾಗಿ. ಮಂಗಳೂರಿನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಹಣೆಬರಹವನ್ನು ನೋಡಬೇಕಾದರೆ ನೀವು ಪಚ್ಚನಾಡಿಗೆ ಹೋಗಬೇಕು. ಅಲ್ಲಿ ತ್ಯಾಜ್ಯದ ಬೃಹತ್ ನದಿ ನಿರ್ಮಾಣವಾಗಿ ವರ್ಷವೇ ಕಳೆದುಹೋಗಿದೆ. ಮೊದಲು ಅದನ್ನು ವೈಜ್ಞಾನಿಕವಾಗಿ ಸರಿ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಯ ಹೊತ್ತಿನಲ್ಲಿ ಅದರ ಫೋಟೋ, ವಿಡಿಯೋವನ್ನು ತೋರಿಸಿಯೇ ವಿಪಕ್ಷಗಳು ಈಗಿನ ಆಡಳಿತ ಪಕ್ಷವನ್ನು ಅಡ್ಡಡ್ಡ ಮಲಗಿಸಿಬಿಡಲಿವೆ. ಹಾಗಾದರೆ ಇವರು ಏನು ಮಾಡಬೇಕು? ಸಂಶಯವೇ ಬೇಡಾ, ನಾನು ಇದರ ಹಿಂದಿನ ಜಾಗೃತಿ ಅಂಕಣದಲ್ಲಿ ಹೇಳಿದ ಹಾಗೆ ಮೋದಿ ಕಳುಹಿಸಿಕೊಟ್ಟಿರುವ 800 ಕೋಟಿ ರೂಪಾಯಿ ಇದೆಯಲ್ಲ, ಅದನ್ನು ಸಮರ್ಪಕವಾಗಿ ಬಳಸಬೇಕು. ಇವರು ಏನು ಪ್ಲಾನ್ ಮಾಡಿದ್ದಾರೆ ಎನ್ನುವುದನ್ನು ಅದರಲ್ಲಿಯೇ ಬರೆದಿದ್ದೇನೆ. ಈಗ ಅದನ್ನೇ ಮತ್ತೆ ಬರೆಯದೇ ನೇರ ವಿಷಯಕ್ಕೆ ಬರುತ್ತೇನೆ.

ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ನಿತ್ಯ 330 ಟನ್ ತ್ಯಾಜ್ಯ ಬಂದು ಬೀಳುತ್ತಿದೆ. ಆದರೆ ಅಲ್ಲಿ ಇರುವ ಯಂತ್ರೋಪಕರಣಗಳಿಂದ ತ್ಯಾಜ್ಯದಿಂದ ಗೊಬ್ಬರ ಮಾಡುವ ಗರಿಷ್ಟ ಸಾಮರ್ತ್ಯ 100 ಟನ್ ಮಾತ್ರ. ಆದ್ದರಿಂದ ಬರುವ ಉಳಿದ ತ್ಯಾಜ್ಯ ಅಲ್ಲಿಯೇ ಶೇಖರಣೆ ಆಗುತ್ತಾ ಹೋಗುತ್ತದೆ. ಹೀಗೆ ಬಿದ್ದಿರುವ ತ್ಯಾಜ್ಯದಿಂದಲೇ ಈಗ ಅಲ್ಲಿ ಸಮಸ್ಯೆ ಉದ್ಭವಿಸಿರುವುದು. ನೀವೆ ಲೆಕ್ಕ ಹಾಕಿ, ನಿತ್ಯ 220 ಟನ್ ಹೆಚ್ಚು ಒಂದು ಕಡೆ ರಾಶಿಯಾದರೆ ಏನಾಗುತ್ತದೆ. ಅಲ್ಲಿ ಆಗಾಗ ಬೆಂಕಿ ಬೀಳುತ್ತದೆ. ಬೆಂಕಿ ಬಿದ್ದರೆ ಯಾರಿಗೆ ಲಾಭ? ಇದೆ, ಕೆಲವರಿಗೆ ಲಾಭ ಇದೆ. ಇನ್ನು ಹೀಗೆ ತ್ಯಾಜ್ಯದ ಗುಡ್ಡ ಬೆಳೆಯುತ್ತಾ ಹೋಗುತ್ತಿದ್ದಂತೆ ಜೆಸಿಬಿಗಳು ಬಂದು ಅದನ್ನು ಸಮತಟ್ಟು ಮಾಡಬೇಕಾಗುತ್ತದೆ. ಅದರ ಬಿಲ್ ವರ್ಷಕ್ಕೆ 12 ರಿಂದ 15 ಲಕ್ಷ ರೂಪಾಯಿಗಳು ಆಗುತ್ತದೆ. ಇದರಿಂದ ಯಾರಿಗೆ ಲಾಭ? ಇದೆ. ಲಾಭ ಇದೆ. ಇಲ್ಲದಿದ್ದರೆ ಬೆಂಕಿ, ನೀರು, ಜೆಸಿಬಿ ಸುಮ್ಮನೆ ಓಡಾಡುತ್ತಾ? ಅವು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಆಗಿರುವುದರಿಂದ ಯಾರಿಗೂ ಪಚ್ಚನಾಡಿಗೆ ಶಾಶ್ವತ ಪರಿಹಾರ ಮಾಡುವ ಮನಸ್ಸು ಇಲ್ಲವೇ ಇಲ್ಲ. ಈಗ ನಾನು ಹೇಳುವುದೇನೆಂದರೆ 500 ಟನ್ ಗೊಬ್ಬರ ಮಾಡುವ ಬೃಹತ್ ಯಂತ್ರೋಪಕರಣಗಳನ್ನು ಖರೀದಿಸಿ. ಈಗಿನ ಆಧುನಿಕ ತಂತ್ರಜ್ಞಾನ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ನೀವು ಅದರಲ್ಲಿ ನೀವು ಗ್ಲಾಸು, ಪೈಪು ಅಂತದ್ದೇಲ್ಲ ಏನೇನು ಇದೆಯೋ ಅದನ್ನೆಲ್ಲಾ ಹಾಕಿದರೂ ಅದು ಒಳಗೆ ವಿಂಗಡಿಸಲ್ಪಟ್ಟು ಗೊಬ್ಬರ ಆಗಿ ಹೊರಬರುತ್ತದೆ. ಆ ಬಗ್ಗೆ ಒಂದಿಷ್ಟು ಸಂಶೋಧನೆ ಮಾಡಿ ಉತ್ತಮ ಕಂಪೆನಿಯ ದೀರ್ಘ ಬಾಳ್ವಿಕೆಯ ಯಂತ್ರವನ್ನು ಖರೀದಿಸುವುದು ಒಳ್ಳೆಯದು. ಒಂದು ವೇಳೆ ಹಾಳಾದರೂ ಅದರ ರಿಪೇರಿ ಇಲ್ಲಿಯೇ ಕಡಿಮೆ ಖರ್ಚಿನಲ್ಲಿ ಆಗುವ ಹಾಗೆ ನೋಡಿಕೊಳ್ಳುವುದು ಉತ್ತಮ. ಯಾಕೆಂದರೆ ರಿಪೇರಿಯವರು ಚೆನೈನಿಂದಲೇ ಬರಬೇಕು ಎಂದು ಕಂಡೀಶನ್ ಇದ್ದರೆ ಪುನ: ಅದು ಕೂಡ ಬಿಳಿಯಾನೆಯಾದೀತು. ಹೀಗೆ ಮಾಡಿದರೆ ಏನಾಗುತ್ತದೆ ಎಂದರೆ ತ್ಯಾಜ ಘಟಕದಲ್ಲಿ ನಿತ್ಯ ಬರುವ 330 ಟನ್ ಜೊತೆಗೆ ಒಂದು ಕಡೆ ರಾಶಿ ಬಿದ್ದಿರುವ ತ್ಯಾಜ್ಯವನ್ನು ಕೂಡ ನಿಧಾನವಾಗಿ ಗೊಬ್ಬರ ಮಾಡುತ್ತಾ ಹೋಗಬಹುದು. ಅದರೊಂದಿಗೆ ಘಟಕದ ಇನ್ನೊಂದು ಭಾಗದಲ್ಲಿ ಸಾಗರದಂತೆ ಬಿದ್ದಿರುವ ತ್ಯಾಜ್ಯವನ್ನು ಕೂಡ ಹಂತಹಂತವಾಗಿ ಕಡಿಮೆ ಮಾಡುತ್ತಾ ಹೋಗಬಹುದು. ಆಗ ಜಾಗವೂ ಖಾಲಿಯಾಗುತ್ತಾ ಹೋಗುತ್ತದೆ. ಅಲ್ಲಿನ ಪರಿಸರ ಕೂಡ ಸಹ್ಯವಾಗುತ್ತದೆ.

ಈ ಹಳೆ ಗುತ್ತಿಗೆದಾರರಿಗೆ ಕೊಟ್ಟರೆ ಮಂಗಳೂರು ಸ್ವಚ್ಚವಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ನಾನು ಹೇಳಬೇಕಾಗಿಲ್ಲ. ಈಗ ಮೇಯರ್ ಆಗಿರುವ ಪ್ರೇಮಾನಂದ ಶೆಟ್ಟಿಯವರೇ ಹೇಳಲಿ. ಇಬ್ಬರೂ ಶಾಸಕರನ್ನು ಸೇರಿಸಿಕೊಂಡು ಇಡೀ ಪಾಲಿಕೆಯ ಒಳಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಅತ್ಯಂತ ಹಿರಿಯರು ಯಾರಾದರೂ ಇದ್ದರೆ ಅದು ಪ್ರೇಮಾನಂದ ಶೆಟ್ಟಿಯವರು ಮಾತ್ರ. ಅವರಿಗೆ ಗೊತ್ತಿಲ್ವಾ? ಖಾಸಗಿ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರ ಹಣೆಬರಹ. ಇನ್ನು ವಿಪಕ್ಷಗಳ ಬಳಿ ಕೇಳಿದರೆ ಶಶಿಧರ್ ಹೆಗ್ಡೆ ಇದ್ದಾರೆ, ಭಾಸ್ಕರ್ ಮೊಯಿಲಿ, ಲ್ಯಾನ್ಸ್ ಪಿಂಟೋ ಇದ್ದಾರೆ ಅವರನ್ನು ಕೇಳಿ ನೋಡಲಿ. ಆಂಟೋನಿ ವೇಸ್ಟ್ ಮ್ಯಾನೇಜಿಮೆಂಟಿನವರು ಮುಂಬೈ, ಪುಣೆಯಲ್ಲಿ ಯಶಸ್ವಿಯಾಗಿ ಈ ತ್ಯಾಜ್ಯ ಸಂಗ್ರಹದ ಕೆಲಸ ಮಾಡುತ್ತಿದ್ದರು ಎಂದೇ ಅವರನ್ನು ಇಲ್ಲಿ ಕೆಂಪು ಹಾಸು ಹಾಕಿ ಸ್ವಾಗತಿಸಲಾಗಿತ್ತು. ಆದರೆ ಇಲ್ಲಿನ ಪಾಲಿಕೆಯನ್ನು ಸುಲಭವಾಗಿ ಬಗ್ಗಿಸಬಹುದು ಎಂದು ಅವರಿಗೆ ಅನಿಸಿತು. ಮುಂಬೈ, ಪುಣೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಶಿವಸೇನೆ, ಇನ್ನೊಂದು ಸೇನೆ ಬಂದು ಇವರನ್ನು ತ್ಯಾಜ್ಯದಂತೆ ಎತ್ತಿ ಬಿಸಾಡುತ್ತದೆ. ನಮ್ಮಲ್ಲಿ ಜನರು ಮಾತನಾಡುವುದಿಲ್ಲ. ಕಾರ್ಪೋರೇಟರ್ಸ್ ಅದಕ್ಕಿಂತ ಮೊದಲು ಮಾತನಾಡುವುದಿಲ್ಲ. ಇನ್ನು ಪಾಲಿಕೆಯ ಕಮೀಷನರ್ ಮಾತನಾಡುತ್ತಾರೋ ಎಂದು ನೋಡಿದರೆ ಅವರಿಗೆ ಹಿರಿಯ ಅಧಿಕಾರಿಗಳು ಹೆದರಿಸಿ ಇಟ್ಟಿದ್ದಾರೆ ” ಸರ್, ಆಂಟೋನಿಯವರನ್ನು ಹೆಚ್ಚು ಟೈಟ್ ಮಾಡಿದರೆ ನಾಳೆ ಅವರು ಕೆಲಸ ನಿಲ್ಲಿಸಿಬಿಟ್ಟರೆ ಜನ ಬೀದಿಗೆ ಬರುತ್ತಾರೆ, ಮುತ್ತಿಗೆ ಹಾಕುತ್ತಾರೆ, ನಿಮಗೆ ಕೆಟ್ಟ ಹೆಸರು ಬರುತ್ತದೆ” ಅಲ್ಲಿಗೆ ಅವರು ಕೂಡ ಸೈಲೆಂಟ್!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search