• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೂ ಕಾರ್ಯಕರ್ತರ ಹತ್ಯಾಯತ್ನ ಮತ್ತೆ ಶುರುವಾಗುವ ಮುನ್ಸೂಚನೆ!!

Hanumanthana kamath Posted On October 20, 2021
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹಿಂದೂ ಕಾರ್ಯಕರ್ತರ ಮೇಲೆ ಮತೀಯವಾದಿಗಳ ದಾಳಿ ಶುರುವಾಗಿದೆ. ಈ ಮೂಲಕ ಮುಂದಿರುವ ದಿನಗಳಲ್ಲಿ ಅನಾವಶ್ಯಕವಾಗಿ ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಸಂಚು ನಡೆಯಲಿದೆ ಎನ್ನುವುದು ಸ್ಪಷ್ಟ. ಈಗ ಪ್ರಕಾಶ್ ಶೆಟ್ಟಿಯವರ ಮೇಲೆ ಯಾರು ಹಲ್ಲೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ತಕ್ಷಣ ಪತ್ತೆ ಹಚ್ಚಿ ಅವರನ್ನು ಕಂಬಿಗಳ ಹಿಂದೆ ನಿಲ್ಲಿಸಬೇಕು. ಅಷ್ಟೇ ಅಲ್ಲ, ಇದಕ್ಕೆ ಏನು ಕಾರಣ, ಇದರ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಚುನಾವಣೆಗಳು ಹತ್ತಿರ ಬರುವಾಗಲೇ ಯಾಕೆ ಹಿಂದೂ ಯುವಕರ ಮೇಲೆ ಹಲ್ಲೆ, ಕೊಲೆಯತ್ನ, ಕೊಲೆಗಳು ನಡೆಯುತ್ತವೆ ಎನ್ನುವುದು ಗೊತ್ತಾಗಬೇಕು. ಈಗ ಒಬ್ಬ ಅಮಾಯಕ ಯುವಕ ತನ್ನ ಅದೃಷ್ಟ ಗಟ್ಟಿಯಿತ್ತು. ಬದುಕಿಕೊಂಡ ಎಂದು ಹೇಳಬಹುದು. ಆದರೆ ಇದು ಇಲ್ಲಿಗೆ ಮುಗಿಯುವುದಿಲ್ಲ. ಕೋಮುಗಲಭೆಯನ್ನು ಮಾಡಲೇಬೇಕು ಎಂದು ಸಂಚು ಹೂಡಿರುವ ದುರುಳರು ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಹೊರಡಬಹುದು. ಈ ಬಾರಿ ಕೊಲೆಯತ್ನ ಮಾತ್ರ ಆಗಿದೆ. ಮುಂದಿನ ಬಾರಿ ಗ್ರಹಚಾರ ಕೆಟ್ಟ ಅಮಾಯಕನೊಬ್ಬ ಪಾಪಿಗಳ ಕೈಯಲ್ಲಿ ಸಾಯಲುಬಹುದು. ಆಗ ಏನಾಗುತ್ತೆ, ನಾವು ಕೈಕಟ್ಟಿ ಕುಳಿತಿಲ್ಲ, ಬುದ್ಧಿ ಕಲಿಸುತ್ತೇವೆ ಎನ್ನುವ ಮಾತುಗಳು ಹೊರಗೆ ಬರುತ್ತವೆ. ಇದರಿಂದ ಸಾವು, ನೋವುಗಳ ಸಂಖ್ಯೆ ಹೆಚ್ಚಾಗಬಹುದು. ಇದರ ಮೇಲೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು. ಯಾರದ್ದೋ ಹೆಣದ ಮೇಲೆ ಇನ್ಯಾರೋ ಸಿಂಹಾಸನ ಇಟ್ಟುಕೊಳ್ಳಬಹುದು. ಇನ್ಯಾರೋ ಬಂದು ಕೂರಬಹುದು. ಹೀಗೆ ಆಗಿ ನಂತರ ಇದು ಹದ್ದು ಮೀರಿದಾಗ ಮಂಗಳೂರು ಬಂದ್ ಆಗಬಹುದು. ಇದರಿಂದ ಸರಕಾರಿ ಅಧಿಕಾರಿಗಳಿಗೆ ರಜೆ ಸಿಗಬಹುದು. ಆದರೆ ಸಂಬಳ ಬಂದೇ ಬರುತ್ತದೆ. ರಾಜಕಾರಣಿಗಳಿಗೆ ಹೆಚ್ಚು ಕೆಲಸ ಸಿಗುತ್ತದೆ, ಓಡಾಟ ನಡೆಯುತ್ತದೆ. ಅವರಿಗೆ ಏನೂ ತೊಂದರೆಯಾಗಲ್ಲ. ಯಾವುದೇ ಧರ್ಮದ ಸಂಘಟನೆ ಇರಲಿ ಅವರ ಕಾರ್ಯಕರ್ತರಿಗೆ ಮೇಲಿನಿಂದ ಪೋಷಿಸುವವರು ಇದ್ದೇ ಇರುತ್ತಾರೆ. ಅವರಿಗೆ ಏನೂ ತೊಂದರೆ ಆಗುವುದಿಲ್ಲ. ಸಮಸ್ಯೆಗೆ ಬೀಳುವವನು ಯಾವುದರಲ್ಲಿಯೂ ಇಲ್ಲದೆ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆ ಹೊರೆಯಲು ಆ ದಿನ ಅನಿವಾರ್ಯವಾಗಿ ಬೀದಿಗೆ ಇಳಿಯಲೇಬೇಕಲ್ಲ, ಅವರಿಗೆ ಜೀವನ ಸವಾಲಾಗುತ್ತದೆ. ಅಂತವರು ಯಾರಿಗೆ ಹೇಳಬೇಕು. ಅವರ ಪ್ರಾಬ್ಲಂ ಯಾರಿಗೆ ಅರ್ಥವಾಗುತ್ತದೆ. ಈಗಾಗಲೇ ಕೊರೊನಾ ಅನೇಕ ಕುಟುಂಬಗಳ ಶಾಂತಿಗೆ ದಕ್ಕೆ ತಂದಿದೆ. ಇನ್ನು ಶಾಲೆಗಳು ಶುರುವಾಗುತ್ತವೆ. ಮಕ್ಕಳ ಫೀಸ್, ಇತರೆ ಖರ್ಚು, ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ, ಅದರ ಖರ್ಚು ಹೀಗೆ ನಡೆಯುತ್ತಿವೆ. ಸಣ್ಣ ಸಣ್ಣ ಬಟ್ಟೆ ಅಂಗಡಿ, ಚಪ್ಪಲ್ ಅಂಗಡಿ, ಫ್ಯಾನ್ಸಿ ಸ್ಟೋರ್ಸ್ ನವರು ಈಗ ತಾನೆ ಉಸಿರಾಡುತ್ತಿದ್ದಾರೆ. ನೀವು ನಾವು ಒಳಗೆ ಕುಳಿತರೆ ಗಂಜಿಯಾದರೂ ಕುಡಿಯಬಹುದು. ಕೆಲವರು ಬೀದಿಗೆ ಇಳಿಯಲೇಬೇಕಾಗುತ್ತದೆ. ಅಂತವರಲ್ಲಿ ಆನ್ ಲೈನ್ ಡೆಲಿವರಿ ಹುಡುಗರು ಇರುತ್ತಾರೆ. ಕಳೆದ ಬಾರಿ ಕೊರೊನಾ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ ಕೋಮು ಸಂಘರ್ಷ ಆದರೆ ಕತ್ತಲಲ್ಲಿ ಕೂಡ ಸರಿದಾಡುವ ಸಣ್ಣ ನೆರಳು ಅಮಾಯಕ ಯುವಕರು ರಾತ್ರಿಗಳಲ್ಲಿ ಹೊರಗೆ ಕಾಲಿಡಲು ಹೆದರುವಂತಾಗಬಹುದು. ಇದರಿಂದ ಪಾಪ, ಅನೇಕರಿಗೆ ರಾತ್ರಿಗಳ ಊಟ ಮಿಸ್ ಆಗಬಹುದು. ಡಯಾಬೀಟಿಸ್ ಇದ್ದವರಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗದೇ ಆರೋಗ್ಯ ಕೆಡಬಹುದು. ಇನ್ನು ದೂರದ ಯೋಚನೆ ಮಾಡಿದರೆ ಮಂಗಳೂರಿನಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಂಪೆನಿಗಳು ಬರಲು ಹಿಂದೇಟು ಹಾಕುತ್ತಿರುವುದೇ ಈ ಕೋಮು ವಿಷಯದಲ್ಲಿ ಮಾತ್ರ. ಅದು ಬಿಟ್ಟರೆ ರೈಲು, ವಿಮಾನ, ರಸ್ತೆ, ಬಂದರು ಸಮರ್ಪಕವಾಗಿ ಇರುವ ರಾಜ್ಯದ ಯಾಕೆ ದೇಶದ ಬೆರಳೆಣಿಕೆಯ ನಗರಗಳಲ್ಲಿ ಮಂಗಳೂರು ಒಂದಾಗಿದೆ. ಆದರೂ ನಮ್ಮ ಯುವಕರು ಬೆಂಗಳೂರು, ಚೆನೈ, ಮುಂಬೈ, ದೆಹಲಿ, ಹೈದ್ರಾಬಾದ್ ಎಂದು ಹೋಗಬೇಕಾಗಿದೆ. ಯಾಕೆಂದರೆ ಇಲ್ಲಿ ಸೂಕ್ತ ಉದ್ಯೋಗ ಸಿಗುವುದಿಲ್ಲ. ಹಾಗಂತ ವಿದ್ಯಾಭ್ಯಾಸ, ಆಸ್ಪತ್ರೆಗಳು ಇಲ್ಲಿ ಉತ್ತಮವಾಗಿದೆ. ಭವಿಷ್ಯದಲ್ಲಿ ಗಲಭೆ ಸಂಭವಿಸಿದರೆ ಅವುಗಳಿಗೂ ಕುತ್ತು ಬರುತ್ತದೆ. ಒಂದು ಉತ್ತಮ ಪ್ರವಾಸೋದ್ಯಮ ನಗರವಾಗಿಯಾದರೂ ಬೆಳೆಯಬಲ್ಲ ಮಂಗಳೂರು ದೇಶದಲ್ಲಿಯೇ ಯುವ ಪ್ರತಿಭಾವಂತರನ್ನು ತನ್ನತ್ತ ಸೆಳೆಯಬೇಕಾದರೆ ಏನು ಮಾಡಬೇಕು? ಸಂಶಯವೇ ಇಲ್ಲ. ಮೊಳಕೆಯಲ್ಲಿಯೇ ಕೋಮು ಸಂಘರ್ಷವನ್ನು ಚಿವುಟಿ ಹಾಕಬೇಕು. ಆಗುತ್ತಾ? ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಇಲ್ಲಿ ಬಂಡವಾಳ ಹರಿದುಬರಬೇಕು. ಬಂಡವಾಳ ಬರಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಮತ್ತು ಪ್ರಯತ್ನ ಆಗಬೇಕು. ಅದು ಬಂದ ಮೇಲೆ ಇಲ್ಲಿ ಅದಕ್ಕೆ ವಾತಾವರಣ ನಿರ್ಮಾಣವಾಗಬೇಕು. ಬಂಡವಾಳದಾರರಿಗೆ ವಿಶ್ವಾಸ ಬರಬೇಕು. ಹಾಗೆ ಆಗಬೇಕಾದರೆ ಇಲ್ಲಿ ಶಾಂತಿ, ಸುವ್ಯವಸ್ಥೆ ಶಾಶ್ವತವಾಗಿ ಇರಬೇಕು. ಇಲ್ಲದೆ ಹೋದರೆ ಎಲ್ಲವೂ ಇದ್ದು ಏನೂ ಇಲ್ಲದಂತಿರುವ ಪರಿಸ್ಥಿತಿ ನಮ್ಮದು ಮುಂದುವರೆಯಬಹುದು. ಇದಕ್ಕಾಗಿ ಮೊದಲು ಬೆಕ್ಕಿಗೆ ಯಾರಾದರೂ ಗಂಟೆ ಕಟ್ಟಬೇಕು. ಡ್ರಗ್ಸ್ ಎಂಬ ಬೆಕ್ಕು, ಗಂಟೆ ಎಂಬ ಕಾನೂನು ದೃಢವಾಗಿರಬೇಕು. ಮತ್ತೆ ಅದೇ ಪ್ರಶ್ನೆ ಉದ್ಭವಿಸುತ್ತದೆ. ಆಗುತ್ತಾ!!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumanthana kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumanthana kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search