ರಾಜ್ಯ-ಅಂತರ್ ರಾಜ್ಯ ಕಳ್ಳತನ ಪ್ರಕರಣ ಪ್ರಮುಖ ಆರೋಪಿಯ ಬಂಧನ
ಬಜಪೆ:ರಾಜ್ಯ,ಅಂತರ್ ರಾಜ್ಯಗಳಲ್ಲಿನ ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಅಬ್ಬಾಸ್ ಮಿಯಾಪದವು ಬಂಧಿತ ಆರೋಪಿಯಾಗಿದ್ದಾನೆ.ಬಂಧಿತ ಆರೋಪಿಯಿಂದ 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಯು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಆರೋಪಿಯ ಬಗ್ಗೆ ಮನೆಕಳವು,ಗ್ಯಾಸ್ ಸಿಲಿಂಡರ್ ಕಳವು,ಬೈಕ್ ಕಳ್ಳತನ,ಬೀಟೆ ಮರ ಕಳ್ಳತನ ಕ್ಕೆ ಸಂಬಂಧಿಸಿ ಕೊಣಾಜೆ,ಉಳ್ಳಾಲ್,ಬೆಳ್ತಂಗಡಿ,ಕೇರಳದ ಕುಂಬ್ಳೆ,ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಒಟ್ಟು 20 ಕ್ಕೂ ಹೆಚ್ಚು ಕೇಸುಗಳು ದಾಖಲಾಗಿತ್ತು.
ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಡಿಸಿಪಿ ಹರಿರಾಮ್ ಶಂಕರ್(ಕಾ.ಸು),ಡಿಸಿಪಿ ದಿನೇಶ್ ಕುಮಾರ್ (ಅ.ಸಂ) ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್.ಮಹೇಶ್ ಕುಮಾರ್ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ,ಸಿಬ್ಬಂದಿಗಳಾದ ಪಿ ಎಸ್ ಐ ಪೂವಪ್ಪ,ರಾಘವೇಂದ್ರ ನಾಯಕ್,ಶ್ರೀಮತಿ ಕಮಲ,ಪ್ರೊ.ಪಿಎಸ್ ಐ ಅರುಣಕುಮಾರ,ರಾಮ ಪೂಜಾರಿ ಮೇರಮಜಲು,ಸಂತೋಷ ಡಿಕೆ ಸುಳ್ಯ,ರಶೀದ ಶೇಖ್,ಸುಜನ್,ಸಿದ್ದಲಿಂಗಯ್ಯ ಹಿರೇಮಠ್,ಕಮಲಾಕ್ಷ,ರಾಜೇಶ, ಹೊನ್ನಪ್ಪ ಗೌಡ,ಎಪ್.ಬಿಯು ವಿಭಾಗದ ಪ್ರಕಾಶ್,ಕಂಪ್ಯೂಟರ್ ವಿಭಾಗದ ಮನೋಜ್ ಹಾಗೂ ಮತ್ತಿತರರು ಕಾರ್ಯದಲ್ಲಿ ಸಹಕರಿಸಿದ್ದರು.
Leave A Reply