ಶತ್ರುರಾಷ್ಟ್ರದ ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಮೋದಿಯನ್ನು ನಿಲ್ಲಿಸಿ ಯಾರಿಗಾದರೂ ಸಂದೇಶ ನೀಡಲಾಗಿತ್ತೇ?
ಪ್ರಧಾನಿ ಮೋದಿಯವರ ವಾಹನವನ್ನು ತಡೆದು ನಿಲ್ಲಿಸಿದವರಿಗೆ 80 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದನಂತೆ ಖಲಿಸ್ತಾನದ ಮುಖಂಡ ಪನ್ನು. ಅದರ ಭಾಗವೆನ್ನುವಂತೆ ಮೊನ್ನೆ ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನಾಕಾರರು ಪ್ಲೈ ಒವರ್ ಮೇಲೆ ಪ್ರತಿಭಟನೆ ಮಾಡಲು ಹೋಗಿ ಮೋದಿಯವರ ವಾಹನವನ್ನು ಬರೋಬ್ಬರಿ 20 ನಿಮಿಷ ತಡೆದು ನಿಲ್ಲಿಸಿದ್ದಾರೆ. ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದವರಿಗೆ 80 ಲಕ್ಷ ರೂಪಾಯಿ ಸಿಕ್ಕಿತೋ ಇಲ್ವೋ ಗೊತ್ತಿಲ್ಲ, ಆದರೆ ಈ ಪನ್ನು, ಚಿನ್ನು, ಮನ್ನುನಂತವರಿಗೆ ತಾವು ಚಾಲೆಂಜ್ ಹಾಕಲು ಮತ್ತು ಅದನ್ನು ಸವಾಲಾಗಿ ಸ್ವೀಕರಿಸಿ ಅನುಷ್ಟಾನಗೊಳಿಸಲು ಅವನ ಬೆಂಬಲಿಗರಿಗೆ ಅವಕಾಶ ನೀಡುತ್ತಿರುವ ಪಂಜಾಬ್ ಸರಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆಯಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಮೋದಿ ಪಂಜಾಬ್ ನಲ್ಲಿ ಚುನಾವಣಾ ಪ್ರಚಾರಕ್ಕೆಂದೇ ಬರಲಿ, ಆದರೆ ಅವರು ಈ ದೇಶದ ಪ್ರಧಾನಿ. ಅವರು ಪಂಜಾಬ್ ನಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ ಕೇವಲ ಭಾರತೀಯ ಜನತಾ ಪಾರ್ಟಿಯ ಮುಖಂಡ ಆಗುವುದಿಲ್ಲ. ಒಂದು ವೇಳೆ ಅವರನ್ನು ಪಂಜಾಬಿನ ಕಾಂಗ್ರೆಸ್ ಸರಕಾರ ಪ್ರಧಾನಿಯಾಗಿ ನೋಡಲು ಬಯಸದೇ ಇದ್ದರೂ ಅವರು ಆ ರಾಜ್ಯದ ಅತಿಥಿ. ಅವರಿಗೆ ಬಿಡಿ, ಅವರ ವಾಹನಕ್ಕೆ ಒಂದು ಚೂರು ಹಾನಿಯಾದರೂ ಹೋಗುವ ಮರ್ಯಾದೆ ಯಾರದ್ದು? ಪಂಜಾಬಿದ್ದು ಮತ್ತು ನಂತರ ಭಾರತದ್ದು.
ಇನ್ನು ಈ ದೇಶದ ಪ್ರಧಾನಿ ತಿಂಗಳಲ್ಲಿ ಹತ್ತು ಬಾರಿ ಯಾವುದೇ ರಾಜ್ಯಕ್ಕೆ ಸುಖಾಸುಮ್ಮನೆ ಹೋಗಿ ಬೋರ್ ಆಯಿತು, ಹಾಗೆ ಸುಮ್ಮನೆ ಅಡ್ಡಾಡಲು ಬಂದೆ ಎನ್ನಲ್ಲ. ಯಾವತ್ತೋ ಒಮ್ಮೆ ಬರುವ ಪ್ರಧಾನಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಯಾ ರಾಜ್ಯದ ಮುಖ್ಯಮಂತ್ರಿ ಹೋಗಬೇಕು. ಆ ರಾಜ್ಯದ ಮುಖ್ಯ ಕಾರ್ಯದರ್ಶಿ ಹೋಗಬೇಕು. ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥ ಹೋಗಬೇಕು. ಅವರು ಹೋಗಿ ಪ್ರಧಾನಿಗೆ ಉದ್ದಂಡ ನಮಸ್ಕಾರ ಹಾಕಬೇಕು ಎಂದು ಯಾರು ಹೇಳುವುದಿಲ್ಲ. ಅದೆಲ್ಲ ಜಯಲಲಿತಾ ಕಾಲಕ್ಕೆ ಮುಗಿಯಿತು. ಆದರೆ ಕನಿಷ್ಟ ಅಲ್ಲಿ ಹಾಜರಾತಿ ಹಾಕಬೇಕಾಗಿರುವುದು ಪ್ರೋಟೋಕಾಲ್. ನಂತರ ಪಿಎಂ ಅಲ್ಲಿಂದ ರಾಜ್ಯದ ಅಧಿಕೃತ ಸ್ಥಳವಾಗಿರುವ ವಿಧಾನಸೌಧವಾದರೆ ಅಲ್ಲಿ ಸಭೆ ಮಾಡಿ ರಾಜ್ಯದ ಸ್ಥಿತಿಗತಿ ಪರಿಶೀಲಿಸಲು ಬಯಸಿದ್ದಲ್ಲಿ ಆ ಸಭೆಯಲ್ಲಿಯೂ ಈ ಮೂವರು ಇರಬೇಕಾದದ್ದು ಅತ್ಯಗತ್ಯ. ಇಂತಹ ಕೆಲಸ ಬಿಟ್ಟು ಈ ಮೂವರಿಗೆ ಅದೆಂತಹ ಘನಂಧಾರಿ ಕೆಲಸ ಮೊನ್ನೆ ಇತ್ತು ಎಂದು ಅವರೇ ಹೇಳಬೇಕು. ಪ್ರಧಾನಿಗೆ ಅಗೌರವ ತೋರಿಸುವುದು ಹೇಗೆ ಎಂದು ಇವರಿಗೆಲ್ಲ ಮೊದಲು ತೋರಿಸಿಕೊಟ್ಟಿದ್ದೇ ಮಮತಾ ಬ್ಯಾನರ್ಜಿ. ಕಳೆದ ವಿಧಾನಸಭಾ ಚುನಾವಣೆಯ ಮೊದಲು ಅಲ್ಲಿ ಮೋದಿ ಹೋದಾಗ ವಿಮಾನ ನಿಲ್ದಾಣದಲ್ಲಿ ಬಂದು ಮುಖ ತೋರಿಸಿ ಹೋದ ಆ ಹೆಂಗಸು ನಂತರ ನಡೆದ ಸಭೆಯಲ್ಲಿ ಬರದೇ ಪ್ರಧಾನಿಯನ್ನೇ ಅವಮಾನಿಸಿದ್ದಳು. ಅವಳಿಂದ ಪಾಠ ಹೇಳಿಸಿಕೊಂಡ ಇಂತಹ ಚಿನ್ನಿಗಳು ಒಂದು ಹೆಜ್ಜೆ ಮುಂದೆ ಹೋಗಿ ವಿಮಾನ ನಿಲ್ದಾಣಕ್ಕೂ ಬರಲೇ ಇಲ್ಲ. ಬಹುಶ: ಇದನ್ನೆಲ್ಲ ನೋಡಿದರೆ ಪಂಜಾಬನ್ನು ಕಾಂಗ್ರೆಸ್ಸಿಗಿಂತ ಖಲಿಸ್ತಾನದ ಉಗ್ರರು ಆಳುತ್ತಿದ್ದಾರೆ ಎಂದು ಅನಿಸುತ್ತದೆ. ನೀವು ಪ್ರಧಾನಿಗೆ ಸ್ವಾಗತ ಕೋರಲು ಹೋದರೆ ಇಲ್ಲಿ ನಿಮ್ಮನ್ನು ಸೋಲಿಸುತ್ತೇವೆ ಎನ್ನುವ ಧಮ್ಕಿ ಇತ್ತೋ ಏನೋ? ಆದರೆ ಖಲಿಸ್ತಾನದ ಉಗ್ರರಿಗೆ ಈ ದೇಶ ಒತ್ತೆ ಕೊಡಲು ಆಗಲ್ಲ ಎಂದು ಸ್ವತ: ಚಂಡಿಯಾಗಿ ಇಂದಿರಾಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್ ಒಳಗೆ ಸೇನೆಯನ್ನು ನುಗ್ಗಿಸಿ ಧೀರ ಮಹಿಳೆ ಎಂದು ಕರೆಸಿಕೊಂಡಿದ್ದರು. ಈಗ ಅವರ ಸಂತತಿಯ ಮುಂದುವರೆದ ದ್ಯೋತಕವಾಗಿರುವ ರಾಹುಲ್ ಗಾಂಧಿ ಪಂಜಾಬಿನಲ್ಲಿ ಖಲಿಸ್ತಾನದ ಶಕ್ತಿಯ ಎದುರು ಮಂಡಿಯೂರಿದಂತೆ ಕಾಣುತ್ತಿದ್ದಾರೆ.
ಇನ್ನು ಪ್ರಧಾನಿ ಕೊನೆಯ ಕ್ಷಣದಲ್ಲಿ ರೂಟ್ ಬದಲಾಯಿಸಿದರು, ನಮಗೆ ಗೊತ್ತೆ ಆಗಿಲ್ಲ ಎಂದು ಚಿನ್ನಿ ಹೇಳುತ್ತಿದ್ದಾರೆ. ಒಬ್ಬ ಪ್ರಧಾನ ಮಂತ್ರಿ ಒಂದು ರಾಜ್ಯಕ್ಕೆ ಬರುವ ಸಾಕಷ್ಟು ಮೊದಲೇ ಅವರ ಅಂದಿನ ದಿನಚರಿ, ರೂಟ್ ಮ್ಯಾಪ್, ಮೊಕ್ ಟ್ರಯಲ್ ಎಲ್ಲಾ ನಡೆದೇ ಇರುತ್ತದೆ. ವಿಮಾನದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದವರು ಹವಾಮಾನದ ವೈಪರಿತ್ಯಕ್ಕೆ ಒಳಗಾಗಿ ವಿಮಾನದ ಬದಲು ಕಾರಿನಲ್ಲಿ ಪ್ರಯಾಣಿಸಲು ಬಯಸಿದರೆ ಆಗ ಅದು ನಮ್ಮ ಜವಾಬ್ದಾರಿ ಅಲ್ಲ ಎಂದು ಹೇಳಲು ಅವರು ಪ್ರಧಾನ ಮಂತ್ರಿಯೋ ಅಥವಾ ಯಾವುದಾದರೂ ಪಾಲಿಕೆಯ ವಾರ್ಡ್ ಅಧ್ಯಕ್ಷರೋ? ಪ್ರಧಾನಿ ಒಂದು ರಾಜ್ಯದಲ್ಲಿ ಇದ್ದಾರೆಂದರೆ ಅವರ ಕಾರ್ಯಕ್ರಮಗಳಿಗೆ ಏನೂ ತೊಂದರೆ ಆಗದಂತೆ ವಿವಿಧ ಪರ್ಯಾಯ ಸಾಧ್ಯತೆಗಳನ್ನು ತೆರೆದಿಡಲೇಬೇಕು. ಇನ್ನು ಪ್ರಧಾನಿ ಒಂದು ಮಾರ್ಗದಲ್ಲಿ ಹೋಗುವ ಮೊದಲು ಆ ರಸ್ತೆ ಕ್ಲಿಯರ್ ಆಗಿ ಇದೆ ಎಂದು ಪರಿಶೀಲಿಸಿಯೇ ಹೋಗುವ ಗ್ರೀನ್ ಸಿಗ್ನಲ್ ಎಸ್ ಪಿಜಿಗಳು ಕೊಟ್ಟಿರುತ್ತಾರೆ. ಹಾಗಿರುವಾಗ ಹೋಗುವ ದಾರಿಯಲ್ಲಿ ಅರ್ಧದಲ್ಲಿ ಸಡನ್ನಾಗಿ ಈ ಪ್ರತಿಭಟನಾಕಾರರು ಎಲ್ಲಿಂದ ಬಂದರು? ಅವರು ಮೋದಿ ಅಲ್ಲಿ ಬರುವ ತನಕ ಸ್ಥಳೀಯ ಪೊಲೀಸರೊಂದಿಗೆ ನಿಂತು ಚಾ ಯಾಕೆ ಕುಡಿಯುತ್ತಿದ್ದರು? ಅವರ ಕೈಯಲ್ಲಿ ಲಾಠಿ ಯಾಕೆ ಇತ್ತು? ಇನ್ನು ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿಮೀ ದೂರದಲ್ಲಿ ಈ ಘಟನೆಯನ್ನು ವ್ಯವಸ್ಥಿತವಾಗಿ ಮಾಡಿ ಯಾರಿಗಾದರೂ ಸಂದೇಶ ನೀಡಲಾಗಿತ್ತೇ? ಇನ್ನು ಪಾಕಿಸ್ತಾನದ ದ್ರೋಣ್ ಆಗಾಗ ಬಂದು ಹೋದ ಜಾಗದಲ್ಲಿ ಮೋದಿಯವರನ್ನು 20 ನಿಮಿಷ ನಿಲ್ಲಿಸಿದ್ದು ಯಾವ ವಿಫಲ ಯೋಜನೆಯ ಭಾಗ. ಕೊನೆಯದಾಗಿ ರ್ಯಾಲಿಗೆ ಜನರು ಇರಲಿಲ್ಲ ಎಂದು ಮೋದಿ ವಾಪಾಸ್ ಹೋದರು ಎಂದು ಚಿನ್ನಿಯ ಹಿಂಬಾಲಕರು ಹೇಳುತ್ತಿದ್ದಾರೆ. ಅಷ್ಟಕ್ಕೂ ಬಂದದ್ದು ಮೋದಿ. ಲಾಲಿಪಾಪ್ ರಾಹುಲ್ ಅಲ್ಲ!
Leave A Reply