ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
ಅಯೋಧ್ಯೆಗೆ ಹಿಂದೆ ಫೈಜಾಬಾದ್ ಎಂದು ಕರೆಯಲಾಗುತ್ತಿತ್ತು. ಅಲಹಾಬಾದ್ ಈಗ ಪ್ರಯಾಗರಾಜ್ ಆಗಿದೆ. ಆದ್ದರಿಂದ ಇನ್ನು ಮುಸ್ತಫಾಬಾದ್ ಇನ್ನು ಕಬೀರ್ ಧಾಮ್ ಆಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ” ತಾವು ಮುಸ್ತಫಾಬಾದ್ ನಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟಿದೆ ಎಂದು ಅಧಿಕಾರಿಗಳ ಬಳಿ ಕೇಳಿದೆ. ಅಲ್ಲಿ ಮುಸ್ಲಿಮರೇ ಇಲ್ಲ ಎನ್ನುವ ಮಾಹಿತಿ ಸಿಕ್ಕಿತು. ಮುಸ್ಲಿಮರೇ ಇಲ್ಲದ ಊರಿಗೆ ಆ ಹೆಸರು ಯಾಕೆ. ಬದಲಾಯಿಸಿಬಿಡಿ, ಕಬೀರ್ ಧಾಮ್ ಎಂದು ಇಡಿ ಎಂದು ಹೇಳಿದ್ದೇನೆ” ಎಂದು ಸಿಎಂ ಬಹಿರಂಗ ಸಭೆಯಲ್ಲಿ ಘೋಷಿಸಿದ್ದಾರೆ.
ಮುಸ್ತಫಾಬಾದ್ ನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಲ್ಲಿಂದ ಪ್ರಸ್ತಾಪನೆ ಕಳುಹಿಸಲು ಸೂಚಿಸಲಾಗುವುದು. ಅದರ ನಂತರ ಹೆಸರು ಬದಲಾಯಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅಯೋಧ್ಯೆಯ ಹಿಂದಿನ ಹೆಸರು ಫೈಜಾಬಾದ್ ಎಂದು ಇದ್ದದ್ದನ್ನು ಬದಲಾಯಿಸಿದ್ದು ನಾವೇ. ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಕೂಡ ಚೆಂಜ್ ಮಾಡಿದ್ದು ನಾವೇ. ಹೀಗಿರುವಾಗ ಮುಸ್ಲಿಮರೇ ಇಲ್ಲದ ಊರಿನಲ್ಲಿ ಯಾರೋ ಇಟ್ಟ ಹೆಸರು ಹಾಗೆ ಯಾಕೆ ಮುಂದುವರೆಯಬೇಕು. ಕಬೀರ್ ಧಾಮ್ ಇದಕ್ಕೆ ಸೂಟ್ ಆಗುತ್ತದೆ” ಎಂದು ಯೋಗಿ ಹೇಳಿದ್ದಾರೆ. ಸಂಸ್ಕೃತಿ ಹಾಗೂ ಪರಂಪರೆಯ ಪುನರುತ್ಥಾನಕ್ಕೆ ಬದ್ಧರಾಗಿರುವುದಾಗಿ ಯೋಗಿ ಮತ್ತೆ ಪುನರುಚ್ಚರಿಸಿದ್ದಾರೆ.









