• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಟಿಡಿಆರ್ ಪ್ರಮಾಣಪತ್ರ ಕೊಡುವ ತನಕ ಅಧಿಕಾರಿಯ ವಸ್ತು ಅಡವು ಇಟ್ಟುಕೊಳ್ಳಿ!!

Hanumantha Kamath Posted On January 27, 2022
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯವರು ಮನೆಗೆ ಬಂದು ರಸ್ತೆ ಅಗಲೀಕರಣಕ್ಕಾಗಿ ನಿಮ್ಮ ಜಾಗ ಬಿಟ್ಟು ಕೊಡಿ ಎಂದು ವಿನಂತಿಸಬಹುದು. ಜಾಗ ಬಿಟ್ಟು ಕೊಟ್ಟ ಒಂದು ವಾರದ ಒಳಗೆ ಟಿಡಿಆರ್ ಪ್ರಮಾಣಪತ್ರ ಕೊಡುತ್ತೇವೆ ಎಂದು ಭರವಸೆ ಕೂಡ ನೀಡಬಹುದು. ಒಂದು ಸೆಂಟ್ಸ್ ಜಾಗ ಬಿಟ್ಟುಕೊಟ್ಟರೆ ಒಂದೂವರೆ ಸೆಂಟ್ಸ್ ಟಿಡಿಆರ್ ಕೊಡುತ್ತೇವೆ ಎಂದು ಹೇಳಿರಬಹುದು. ಅವರ ನಯ ವಿನಯದ ಮಾತು ಕೇಳಿ ನೀವು ಒಪ್ಪಿಗೆ ಕೊಡುವ ಕೊನೆ ಘಳಿಗೆಯಲ್ಲಿ ನಾನು ಒಂದು ಸಲಹೆ ಕೊಡುತ್ತೇನೆ, ಅದನ್ನು ನೆನಪಿನಲ್ಲಿಡಿ. ಮನೆಗೆ ಬರುವ ಅಧಿಕಾರಿಗಳ ಬಳಿ ಮೂರು ವಿಷಯಗಳನ್ನು ಹೀಗೆ ಕೇಳಿ. “ನಾವು ಜಾಗ ಬಿಟ್ಟು ಕೊಟ್ಟರೆ ಅದು ರಸ್ತೆ ಅಗಲೀಕರಣಕ್ಕೆ ಬಳಕೆಯಾಗುತ್ತದೆಯೋ ಅಥವಾ ಫುಟ್ ಪಾತ್ ರಸ್ತೆಯಷ್ಟು ಅಗಲ ಮಾಡಲು ಬಳಕೆಯಾಗುತ್ತದೆಯೋ. ಒಂದು ವೇಳೆ ಫುಟ್ ಪಾತ್ ಅಗಲ ಮಾಡಲು ಬಳಕೆಯಾಗುವುದಿದ್ದರೆ ಬೇಡಾ. ಎರಡನೇಯ ಅಂಶ, ನಾವು ನಮ್ಮ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಟ್ಟರೆ ನಾವು ಜಾಗ ಬಿಟ್ಟುಕೊಡುವ ನಮ್ಮದೇ ಮನೆಯ ಅಥವಾ ಅಂಗಡಿಯ ಎದುರು ನಾಲ್ಕು ಕಾರುಗಳು ಅಡ್ಡ ನಿಲ್ಲುವುದಿಲ್ಲ ಎಂದು ಗ್ಯಾರಂಟಿ ಕೊಡಿ. ಮೂರನೇಯದು ನೀವು ಟಿಡಿಆರ್ ಪ್ರಮಾಣಪತ್ರ ಒಂದು ವಾರದ ಒಳಗೆ ಸಿಗುತ್ತೆ ಎಂದು ಹೇಳಿದ್ದೀರಿ. ಆ ಒಂದು ವಾರದ ತನಕ ನಿಮ್ಮ ಯಾವುದಾದರೂ ಅಮೂಲ್ಯ ವಸ್ತುವನ್ನು ನಮ್ಮಲ್ಲಿ ಅಡವಿಟ್ಟು ಪ್ರಮಾಣಪತ್ರ ಕೊಟ್ಟ ನಂತರ ಬಿಡಿಸಿಕೊಂಡು ಹೋಗಿ” ಎಂದು ಖಡಕ್ಕಾಗಿ ಹೇಳಿಬಿಡಿ. ಯಾಕೆಂದರೆ ಮೊದಲ ಎರಡು ಪಾಯಿಂಟ್ ನಾನು ನಿನ್ನೆಯ ನನ್ನ ಜಾಗೃತ ಅಂಕಣದಲ್ಲಿ ವಿವರಿಸಿದ್ದೇನೆ. ಈಗ ಮೂರನೇ ಪಾಯಿಂಟಿಗೆ ಬರೋಣ. ನಿಮ್ಮ ಜಾಗವನ್ನು ಪಾಲಿಕೆಗೆ ಸ್ವಾಧೀನಪಡಿಸಿಕೊಳ್ಳುವ ತನಕ, ನೀವು ಟಿಡಿಆರ್ ಗೆ ಸಹಿ ಹಾಕುವ ತನಕ ಮಾತ್ರ ಈ ಅಧಿಕಾರಿಗಳಿಗೆ ಆಸಕ್ತಿ ಮತ್ತು ಸಮಯ ಎರಡೂ ಇರುತ್ತದೆ. ಯಾವಾಗ ಆ ಜಾಗ ನೀವು ಬಿಟ್ಟುಕೊಟ್ಟಿರೋ ನಂತರ ಒಂದು ವಾರದ ಒಳಗೆ ಪ್ರಮಾಣಪತ್ರ ತಂದುಕೊಡುತ್ತೇನೆ ಎಂದು ಹೇಳಿದ ಅಧಿಕಾರಿಗೆ ನಿಮ್ಮ ಮನೆಯ ವಿಳಾಸವೇ ಮರೆತುಹೋಗಿರುತ್ತದೆ. ಅದಕ್ಕೆ ನಾನು ಹೇಳಿದ್ದು, ಆ ಅಧಿಕಾರಿಯ ಚೈನೋ, ಉಂಗುರವೋ ಅಥವಾ ಕಾರೋ, ಬೈಕೋ ನೀವು ಅಡವು ಇಡಲು ಹೇಳಿ. ಆಗ ಆ ಅಧಿಕಾರಿ ಮರೆಯುವುದಿಲ್ಲ. ಇಲ್ಲದೇ ಹೋದರೆ ನಿಮ್ಮ ಚಪ್ಪಲಿ ಸವೆಯುವ ತನಕವೂ ನೀವು ಆಗಾಗ ಪಾಲಿಕೆಗೆ ಹೋದರೂ ಆ ಪ್ರಮಾಣಪತ್ರ ಸಿಗುವುದಿಲ್ಲ. ಹಾಗಂತ ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಇದಕ್ಕೆ ನನ್ನ ಬಳಿ ಅನೇಕ ಉದಾಹರಣೆಗಳಿವೆ. ಅದರಲ್ಲಿ ಒಂದು ಉದಾಹರಣೆ ಹೇಳುತ್ತೇನೆ. ಕಾವೂರಿನಲ್ಲಿ ಪಾಂಡುರಂಗ ಶೆಟ್ಟಿಗಾರ್ ಎನ್ನುವವರು ಇದ್ದಾರೆ. ಅವರು 2019 ರಲ್ಲಿ ರಸ್ತೆಗೆ ಜಾಗ ಬಿಟ್ಟುಕೊಟ್ಟಿದ್ರು. ಅವರು ಅದಕ್ಕೆ ಬೇಕಾದ ಎಲ್ಲಾ ದಾಖಲೆ ನೀಡಿದ್ದಾರೆ. ಅದು ಅವರ ತಂದೆಯಿಂದ ಬಂದ ವಂಶಪಾರಂಪರೆಯ ಜಾಗ. ಅದರ ಪೇಪರ್ಸ್ ನೀಡಿದ್ದಾರೆ. ಆರ್ಟಿಸಿ ಎಲ್ಲಾ ಕೊಟ್ಟಿದ್ದಾರೆ. ಒಂದು ವಾರದ ಒಳಗೆ ಟಿಡಿಆರ್ ಪ್ರಮಾಣಪತ್ರ ಕೊಡುವುದು ಕನಸಿನ ಮಾತು. ಏಳು ತಿಂಗಳ ನಂತರ ಪಾಲಿಕೆಯಿಂದ ಇವರಿಗೆ ಬಂದ ಪತ್ರದಲ್ಲಿ ತಾವು ಅರ್ಧ ಸೆಂಟ್ಸ್ ಜಾಗ ಬಿಟ್ಟುಕೊಟ್ಟಿದ್ದಿರಿ ಎನ್ನುವ ಒಕ್ಕಣೆ ಬಂದಿರುತ್ತದೆ. ಇವರಿಗೆ ಹೃದಯಾಘಾತ ಆಗುವುದು ಮಾತ್ರ ಬಾಕಿ. ಯಾಕೆಂದರೆ ಕಾವೂರಿನಲ್ಲಿ ಎರಡೂವರೆ ಸೆಂಟ್ಸಿಗೆ ಒಳ್ಳೆಯ ಬೆಲೆ ಇದೆ. ಹಾಗಿರುವಾಗ ಪಾಲಿಕೆ ಎರಡೂವರೆ ಸೆಂಟ್ಸ್ ವಶಪಡಿಸಿ ಈಗ ಅರ್ಧ ಸೆಂಟ್ಸ್ ಎಂದರೆ ಯಾರಿಗೆ ತಾನೆ ಕೋಪ ಬರುವುದಿಲ್ಲ. ಅವರು ನಮ್ಮ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಗೆ ಬಂದು ನನ್ನನ್ನು ಭೇಟಿಯಾದರು. ನಾನು ಇವರ ಜಾಗವನ್ನು ರೀ ಸರ್ವೆ ಮಾಡಬೇಕು ಎಂದು ಪಾಲಿಕೆಗೆ ಪತ್ರ ಬರೆದೆ. ಸರ್ವೇ ಆಗಿ ಎರಡೂವರೆ ಸೆಂಟ್ಸ್ ಎಂದು ಸಾಬೀತಾಗಿದೆ. ಇದಾಗಿ ಈಗ ಇವರ ಜಾಗ ಹೋಗಿ ಎರಡು ವರ್ಷ ಆಯಿತು. ಪ್ರಮಾಣಪತ್ರ ಇವರ ಕೈ ಸೇರಲು ಮೀನಾಮೇಶ ಎಣಿಸಲಾಗುತ್ತಿದೆ.
ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಇಂತಹ ಸಮಸ್ಯೆಗಳು ಉದ್ಭವಿಸಬಾರದು, ಜನರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಟಿಡಿಆರ್ ಸೆಲ್ ಎಂದು ಮಾಡಿದ್ದಾರೆ. ಆದರೆ ಅದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನಾಮಕಾವಸ್ತೆ ಆಗಿದೆ. ಅಲ್ಲಿ ಯಾರೂ ಇರುವುದಿಲ್ಲ. ಇನ್ನು ಪಾಲಿಕೆಯಲ್ಲಿ ಹುಡುಕಿದರೂ ಕೂಡ ಯಾವ ಅಧಿಕಾರಿ ನಿಮ್ಮ ಮನೆಗೆ ಬಂದು ನಿಮಗೆ ಒತ್ತಾಯ ಮಾಡಿ ಜಾಗ ಸ್ವಾಧೀನಪಡಿಸಿಕೊಂಡಿದ್ದರೋ ಅವರು ಸಿಗುವುದೇ ಇಲ್ಲ. ಒಂದು ವೇಳೆ ಅಪ್ಪಿತಪ್ಪಿ ಟಿಡಿಆರ್ ಸೆಲ್ ನಲ್ಲಿ ಯಾರಾದರೂ ಇದ್ದು ಅವರ ಬಳಿ ನೀವು ವಿಚಾರಿಸಿದರೆ ಅದು ಕಮಿಟಿಗೆ ಹೋಗಿದೆ. ಮುಂದೆ ಇನ್ನೊಂದು ದಿನ ಬಂದು ನೀವು ಕೇಳಿದರೆ ಕಮಿಟಿಯಿಂದ ಕೌನ್ಸಿಲ್ ಗೆ ಹೋಗಿದೆ. ಬಳಿಕ ಒಂದಿಷ್ಟು ದಿನಗಳ ಬಳಿಕ ಕೇಳಿದರೆ ಕೌನ್ಸಿಲ್ ನಿಂದ ಪಾಲಿಕೆ ಆಯುಕ್ತರ ಸಹಿಗೆ ಹೋಗಿದೆ. ಆ ಬಳಿಕ ಟಿಪಿಓಗೆ ಹೋಗಿದೆ. ಹೀಗೆ ಕೊಂಕಣ ಸುತ್ತಿ ಮೈಲಾರಕ್ಕೆ ನಿಮ್ಮ ಫೈಲ್ ಬರುವಾಗ ಅದೆಷ್ಟು ವರ್ಷವಾಗುತ್ತೋ ಆ ಭಗವಂತನೇ ಬಲ್ಲ. ಒಟ್ಟಿನಲ್ಲಿ ಅದು ಎರಡು ವರ್ಷವೂ ಆಗಬಹುದು. ಅದಕ್ಕಿಂತ ಜಾಸ್ತಿನೂ ಆಗಬಹುದು. ಆದ್ದರಿಂದ ಜಾಗ ಕೊಟ್ಟರೆ ಅದು ಯಾರಿಗೋ ಪಾರ್ಕಿಂಗ್ ಮಾಡಲು ಕೊಟ್ಟಂತೆ, ಇರಲಿ ಕೊಡೋಣ ಎಂದು ಗಟ್ಟಿ ಮನಸ್ಸು ಮಾಡಿ ಕೊಟ್ಟರೆ ಅದು ಟಿಡಿಆರ್ ಅಲೆದಾಟಕ್ಕೆ ವ್ಯರ್ಥವಾಗುವುದಾದರೆ ಯಾಕೆ ಕೊಡಬೇಕು ಎಂದು ನೀವು ಹಟಕ್ಕೆ ಕೂತರೆ ಯಾರಿಗೆ ಬುದ್ಧಿ ಬರಬೇಕೋ ಅವರಿಗೆ ಬರುತ್ತದೆ!!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search