• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸಿಎಂ ಬದಲಾವಣೆಯಿಂದ ರಾಜ್ಯದ ಜನರಿಗೆ ಆಗುವಂತದ್ದು ಏನೂ ಇಲ್ಲ!!

Hanumantha Kamath Posted On August 11, 2022
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯಕ್ಕೆ ಭಾರತೀಯ ಜನತಾ ಪಾರ್ಟಿಯ ಈ ಅವಧಿಯಲ್ಲಿ ಮೂರನೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ. ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಅದು ಎಷ್ಟು ಸಲ ಮುಖ್ಯಮಂತ್ರಿಯನ್ನು ಬದಲಿಸುತ್ತೋ ಅಷ್ಟು ಅದರ ಮೇಲಿನ ವಿಶ್ವಾಸಾರ್ಹತೆ ಜನರಿಗೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ರಾಜಕೀಯ ಲೆಕ್ಕಾಚಾರ. ಹಾಗಂತ ಐದು ವರ್ಷಗಳಿಗೆ ಒಬ್ಬರೇ ಮುಖ್ಯಮಂತ್ರಿಯನ್ನು ಆಡಳಿತ ಪಕ್ಷ ಹೊಂದಿರಬೇಕು ಎನ್ನುವ ಯಾವ ನಿಯಮ ಕೂಡ ಇಲ್ಲ. ಬಹುಮತ ಹೊಂದಿದ ಆಡಳಿತ ಪಕ್ಷ ಐದು ವರ್ಷ ಐದು ಮುಖ್ಯಮಂತ್ರಿಗಳನ್ನು ಬೇಕಾದರೆ ಬದಲಿಸಬಹುದು. ಅದು ಆ ಪಕ್ಷದ ಆಂತರಿಕ ವಿಷಯ. ಹೇಗೆ ಪಾಲಿಕೆಗೆ ಐದು ವರ್ಷಗಳಿಗೆ ಐದು ಮೇಯರ್ ಇದ್ದ ಹಾಗೆ ಐದು ವರ್ಷ ಐದು ಸಿಎಂ ಎನ್ನುವುದು ಆಯಾ ಆಡಳಿತ ಪಕ್ಷಗಳು ಮಾಡಿಕೊಳ್ಳಲು ಅವಕಾಶ ಇರುವುದೇ ಈ ಪ್ರಜಾಪ್ರಭುತ್ವದ ಅವಕಾಶ. ಆದರೆ ಇದನ್ನು ಮಾಡಿದರೆ ಏನಾಗುತ್ತದೆ? ಪಕ್ಕಕ್ಕೆ ಅನಿವಾರ್ಯವಾದ ಏಟುಗಳು ಬೀಳುತ್ತವೆ. ಅದು ಹೇಗೆ?

ಮೊದಲನೇಯದಾಗಿ ಸಿಎಂ ಬದಲಾದಷ್ಟು ಅದು ಆಡಳಿತ ಪಕ್ಷದ ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ. ಅವರಿಗೆ ಅಧಿಕಾರ ಕೊಟ್ಟಿದ್ದರು. ಆದರೆ ನಡೆಸಲು ಗೊತ್ತಿಲ್ಲ, ವಿಫಲ ಕಂಡಿದ್ದಾರೆ, ಅದಕ್ಕೆ ಬದಲಾಯಿಸಬೇಕಾಯಿತು ಎಂದು ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ಹೋಗುತ್ತದೆ. ಸರಿಯಾಗಿ ನೋಡಿದರೆ ರಾಜ್ಯದ ಸಿಎಂ ಪದೇ ಪದೇ ಬದಲಾದರೆ ಅದರಿಂದ ಜನಸಾಮಾನ್ಯರಿಗೆ ನೇರವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಇದು ರಾಜವಂಶಸ್ಥ ಆಡಳಿತದ ಕಾಲವಲ್ಲ. ಯಾವ ಸಿಎಂ ಬಂದರೂ ಅವರು ಪ್ರಜಾಪ್ರಭುತ್ವದ ಒಳಗೆನೆ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಅಂತಹ ಏನೂ ತಲೆಕೆಡಿಸಬೇಕಾದ ಅಗತ್ಯ ರಾಜ್ಯದ ಪ್ರಜೆಗಳಿಗೆ ಬರುವುದಿಲ್ಲ. ಆದರೆ ಪ್ರತಿ ಬಾರಿ ಒಬ್ಬ ಮುಖ್ಯಮಂತ್ರಿಯನ್ನು ನೇಮಿಸುವುದು, ನಂತರ ಉತ್ತಮ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ಬದಲಾಯಿಸುವುದು, ಅದಕ್ಕೆ ಬೇರೆಯದ್ದೇ ಕಾರಣ ನೀಡುವುದು ಎಲ್ಲವೂ ಬಿಜೆಪಿಯಲ್ಲಿ ನಡೆದರೆ ಏನಾಗುತ್ತದೆ? ಹೀಗೆ ಮಾಡಿಯೂ ಬಿಜೆಪಿ ದೇಶದ ಅನೇಕ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಯಾಕೆಂದರೆ ರಾಜ್ಯಗಳಲ್ಲಿ ಚುನಾವಣೆ ನಡೆಸಲು ಬಿಜೆಪಿಯಲ್ಲಿ ಪ್ರತ್ಯೇಕ ರಣತಂತ್ರಗಳೇ ಇರುತ್ತದೆ. ಆದ್ದರಿಂದ ಅವರಿಗೆ ಸಿಎಂ ಬದಲಾವಣೆ ಎನ್ನುವುದು ದೊಡ್ಡ ವಿಷಯವೇ ಅಲ್ಲ. ಇನ್ನು ಬಿಜೆಪಿಯಲ್ಲಿ ಹೈಕಮಾಂಡ್ ಎಷ್ಟು ಸ್ಟ್ರಾಂಗ್ ಇದೆ ಎಂದರೆ ಅಲ್ಲಿ ಅಧಿಕಾರ ಹಸ್ತಾಂತರ ಎನ್ನುವುದು ಯಾವುದೇ ಒಂದು ವಿವಾದ ಇಲ್ಲದೆ ಮುಗಿದುಹೋಗುತ್ತದೆ. ಇಲ್ಲದಿದ್ದರೆ ಯಡ್ಡಿ ಅಂತಹ ಯಡ್ಡಿ, ಇಡೀ ಲಿಂಗಾಯತ ಸಮಾಜವನ್ನು ತಮ್ಮ ಬೆನ್ನಿಗೆ ಅಂಟಿಸಿಕೊಂಡು ನಿಂತಿರುವ ಪ್ರಬಲ ಮಾಸ್ ಲೀಡರ್ ಯಡ್ಡಿ ಒಂದು ಸಣ್ಣ ಕಣ್ಣೀರಿನೊಂದಿಗೆ ಇಳಿದದ್ದು ಬಿಟ್ಟರೆ ಮತ್ತೇ ಏನೂ ಸಾಧ್ಯವಿಲ್ಲ.

ಈಗ ಅದೇ ಬಸ್ಸು ಬೊಮ್ಮಾಯಿಯವರನ್ನು ಕೂಡ ಇಳಿಸಿ ಬೇರೆ ನಾಯಕರನ್ನು ಸಿಎಂ ಗಾದಿಯಲ್ಲಿ ಕುಳ್ಳಿರಿಸಿಬಿಡುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ಹೊರಟರೂ ಬೊಮ್ಮಾಯಿ ಏನೂ ಮಾತನಾಡದೇ ತಮ್ಮ ಕುರ್ಚಿ ಬಿಟ್ಟುಬಿಡುತ್ತಾರೆ. ಅಂತಹ ವ್ಯವಸ್ಥೆ ದೇಶದ ಎಲ್ಲಾ ಮೂಲೆಮೂಲೆಗಳಲ್ಲಿ ಬಿಜೆಪಿಗೆ ಇದೆ. ಆದರೆ ವಿಷಯ ಇರುವುದು ಏನು ಕಾರಣ ಕೊಡುತ್ತಾರೆ ಎನ್ನುವುದು ಮಾತ್ರ. ಯಡ್ಡಿಯವರನ್ನು ಇಳಿಸಿದಾಗ ಕೊಟ್ಟದ್ದು ಒಂದೇ ಕಾರಣ ಅವರಿಗೆ ವಯಸ್ಸಾಗಿದೆ. 75 ರ ನಂತರ ನಮ್ಮಲ್ಲಿ ಅಧಿಕಾರ ಕೊಡುವ ಕ್ರಮ ಇಲ್ಲದೇ ಇರುವುದರಿಂದ ಅದು ಸಹಜ ಪ್ರಕ್ರಿಯೆ ಎನ್ನುವಂತೆ ಬಿಜೆಪಿ ನಾಯಕರು ಅದನ್ನು ಪ್ರತಿಪಾದಿಸಿದರು. ಓಕೆ. ಅಲ್ಲಿಗೆ ಅದು ಅಷ್ಟರಮಟ್ಟಿಗೆ ಪಾಸಾಯಿತು. ಆದರೆ ಈ ಬಾರಿ ಇಳಿಸಲು ಕಾರಣಗಳು ಏನಿರುತ್ತವೆ? ವಯಸ್ಸು, ಅದು ಬೊಮ್ಮಾಯಿಯವರಿಗೆ ಅಷ್ಟಾಗಿ ಆಗಿಲ್ಲ. ಆರೋಗ್ಯ, ಕಾಲುನೋವಿಗೆ ಚಿಕಿತ್ಸೆ ಆಗಾಗ ಪಡೆದುಕೊಳ್ಳುತ್ತಾರೆ ಬಿಟ್ಟರೆ ಅದು ಅಂತಹ ದೊಡ್ಡ ಸಮಸ್ಯೆ ಅಲ್ಲ. ಇನ್ನು ಫೈಲುಗಳು ಶೀಘ್ರದಲ್ಲಿ ಕ್ಲಿಯರ್ ಆಗಲ್ಲ ಎನ್ನುವ ಆರೋಪಗಳು ಸ್ವಪಕ್ಷದ ಶಾಸಕರಿಂದ ಇದೆ ಎನ್ನುವುದು ಬಿಟ್ಟರೆ ಅದು ಇಳಿಸಲು ಜನರಿಗೆ ಹೇಳಬಹುದಾದ ವಿಷಯ ಅಲ್ಲ. ಹಾಗಾದರೆ ಇಳಿಸಲು ಕಾರಣಗಳೇನು ಎಂದು ಬಿಜೆಪಿ ಹೇಳುತ್ತದೆ ಎನ್ನುವುದೇ ಈಗಿನ ಪ್ರಶ್ನೆ. ಬಿಜೆಪಿಯ ಒಳಗೆ ಎಂತಹುದೇ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿರಲಿ, ಆದರೆ ಇಳಿಸುವುದಕ್ಕೆ ಪ್ರಬಲ ಕಾರಣಗಳನ್ನು ಕೊಡದೇ ಹೋದರೆ ಅದು ಚುನಾವಣೆಯ ವಿಷಯದಲ್ಲಿ ಬಹಳ ದೊಡ್ಡ ಪೆಟ್ಟು ನೀಡುತ್ತದೆ. ಹಿಂದಿನ ಬಾರಿ ಕೂಡ ಹೀಗೆ ಆಗಿತ್ತು. ಐದು ವರ್ಷಕ್ಕೆ ಮೂರು ಮುಖ್ಯಮಂತ್ರಿಗಳನ್ನು ಬಿಜೆಪಿಯವರು ನೇಮಿಸಿದ್ದರು. ಒಂದು ಯಡ್ಡಿ, ಎರಡನೇಯದ್ದು ಡಿವಿಎಸ್ ಹಾಗೂ ಮೂರನೇಯದ್ದು ಜಗದೀಶ್ ಶೆಟ್ಟರ್. ಯಡ್ಡಿ ಎರಡನೇ ಬಾರಿ ಸಿಎಂ ಆದರು. ಉಳಿದ ಇಬ್ಬರೂ ನಂತರ ರಾಜಕೀಯವಾಗಿ ಅಂತಹ ಏಳಿಗೆಯನ್ನು ಕಂಡೇ ಇಲ್ಲ.

ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿನಲ್ಲಿಯೂ ಇಲ್ಲಿಯ ತನಕ ಇಂತದ್ದು ಆಗಿಯೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಕೂಡ ಆಗಿದೆ. ಬಂಗಾರಪ್ಪ, ವೀರಪ್ಪ ಮೊಯಿಲಿ, ಗುಂಡೂರಾವ್, ದೇವರಾಜ್ ಅರಸ್, ವೀರೇಂದ್ರ ಪಾಟೀಲ್ ಹೀಗೆ ಅನೇಕ ಕಾಂಗ್ರೆಸ್ ಸಿಎಂಗಳು ತಮ್ಮ ಅಧಿಕಾರಾವಧಿ ಮುಗಿಸಿಲ್ಲ. ಹಾಗಂತ ಆಗ ಇಷ್ಟು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಇರದೇ ಇದ್ದ ಕಾರಣ ಅದು ಅಷ್ಟು ಸುದ್ದಿ ಆಗುತ್ತಿರಲಿಲ್ಲ. ಆದರೆ ಈಗ ಒಂದು ಟ್ವೀಟ್ ಕೂಡ ರಾಜ್ಯದ ಪ್ರಮುಖ ವಾಹಿನಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯನ್ನು ಹುಟ್ಟುಹಾಕುತ್ತದೆ ಎಂದರೆ ಯಾರಿಗೆ ಕೆಲಸ ಇಲ್ಲ ಎನ್ನುವುದು ಯೋಚಿಸಬೇಕು. ವಾಹಿನಿಗಳಿಗೋ, ಅದರಲ್ಲಿ ಭಾಗವಹಿಸುವ ವ್ಯಕ್ತಿಗಳಿಗೋ ಅಥವಾ ಅದನ್ನು ಗಂಟೆಗಟ್ಟಲೆ ನೋಡುವ ವೀಕ್ಷಕರಿಗೋ

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search