• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಿಚಾರಣೆ ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ಆಗಬೇಕೆಂಬ ಹಟದ ಹಿಂದಿನ ಸಂಶಯ!!

Hanumantha Kamath Posted On November 12, 2022


  • Share On Facebook
  • Tweet It

ಮಳಲಿ ಮಸೀದಿ ವಿವಾದ ಒಂದು ಹಂತಕ್ಕೆ ಬಂದು ನಿಂತಿದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ಹಕ್ಕಿದೆ ಎನ್ನುವ ತೀರ್ಪು ಬರುತ್ತಿದ್ದಂತೆ ಹಿಂದೂ ಸಂಘಟನೆಗಳಿಗೆ ಖುಷಿಯಾಗಿದೆ. ಯಾಕೆಂದರೆ ಮಳಲಿ ಮಸೀದಿಯ ಪರ ವಾದ ಮಾಡುವವರ ವಾದವೇ ಬೇರೆ ಇತ್ತು. ಅವರ ಪ್ರಕಾರ ಸಿವಿಲ್ ನ್ಯಾಯಾಲಯಕ್ಕೆ ಈ ವಿಚಾರಣೆ ಮಾಡುವ ಹಕ್ಕಿಲ್ಲ. ಯಾಕೆಂದರೆ ಆ ಭೂಮಿ ವಕ್ಫ್ ಟ್ರಿಬ್ಯೂನಲ್ ಅವರದ್ದಾಗಿದೆ ಎಂದು ವಾದಿಸುತ್ತಲೇ ಬರಲಾಗುತ್ತಿತ್ತು. ಅಷ್ಟಕ್ಕೂ ಮಳಲಿಯ ಭೂಮಿ ವಕ್ಫ್ ಆಸ್ತಿಯಾಗಿದ್ದರೂ ವಕ್ಫ್ ಬೋರ್ಡಿಗೆ ಆ ಭೂಮಿ ಕೊಟ್ಟವರ್ಯಾರು? ವಕ್ಫ್ ಬೋರ್ಡ್ ಅದನ್ನು ಖರೀದಿಸಿರುವುದಿಲ್ಲ. ಯಾವುದೋ ಕಾಲಕ್ಕೆ ಯಾವುದೋ ಅರಸ ಮುಸ್ಲಿಮರಿಗೆ ಇಂತಿಷ್ಟು ಜಾಗವನ್ನು ಉಂಬಳಿಯಾಗಿ ಕೊಟ್ಟಿರುತ್ತಿದ್ದ. ಅಲ್ಲಿ ಕಾಲಾಂತರದಲ್ಲಿ ಅವರು ಅದನ್ನು ತಮ್ಮದೇ ಭೂಮಿ ಎಂದು ಸಾಧಿಸುತ್ತಲೇ ಬರುತ್ತಿದ್ದಾರೆ. ಈಗ ವಕ್ಫ್ ಭೂಮಿ ಆದ ಕೂಡಲೇ ಅಲ್ಲಿ ವಿಚಾರಣೆ ನಡೆದು ಪ್ರಕರಣ ಅವರ ಪರವಾಗಿ ಹೋಗುತ್ತದೆ ಎನ್ನುವ ಧೈರ್ಯ ಮುಸ್ಲಿಮರದ್ದು ಆಗಿರಬಹುದು. ಆದ್ದರಿಂದ ಇಂತಹ ಯಾವುದೇ ವಿವಾದ ಆದಾಗ ಅವರು ಅದು ನಮ್ಮ ವಕ್ಫ್ ಭೂಮಿ ಮತ್ತು ವಿಚಾರಣೆ ವಕ್ಫ್ ಟ್ರಿಬ್ಯೂನಲ್ ನಲ್ಲಿಯೇ ಆಗಬೇಕು ಎಂದು ಹಟ ಹಿಡಿಯುವುದು ಸಾಮಾನ್ಯ.
ಇದೆಲ್ಲ ಬಿಡಿ, ಮಳಲಿ ಮಸೀದಿ ವಿವಾದ ಬಹಳ ಚಿಕ್ಕದು. ಅಯೋಧ್ಯೆಯ ಪ್ರಕರಣವನ್ನೇ ತೆಗೆದುಕೊಳ್ಳಿ. ಅಲ್ಲಿ ಒಂದು ವಿವಾದಿತ ಕಟ್ಟಡ ಇತ್ತು. ಅದರ ವಿಚಾರಣೆ ಸ್ಥಳೀಯ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ ತನಕ ನಡೆದಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದು ಕೂಡ ಅದೇ ರೀತಿಯ ಪ್ರಕರಣ. ಆದ್ದರಿಂದ ಇದನ್ನು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಸುವುದಕ್ಕೆ ಎಲ್ಲಾ ಹಕ್ಕನ್ನು ನ್ಯಾಯಾಲಯ ಹೊಂದಿದೆ. ಬೇಕಾದರೆ ಅವರಿಗೆ ಇಲ್ಲಿ ಬರುವ ತೀರ್ಪು ಸಮಾಧಾನಕರವಲ್ಲದಿದ್ದರೆ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅದರಲ್ಲಿಯೂ ತಾವು ನಿರೀಕ್ಷಿಸಿದ ತೀರ್ಪು ಬರದಿದ್ದರೆ ಸುಪ್ರೀಂಕೋರ್ಟಿಗೆ ಹೋಗಬಹುದು. ಅದನ್ನು ಬಿಟ್ಟು ತಮಗೆ ಬೇಕಾದ ಕಡೆಯಲ್ಲಿಯೇ ವಿಚಾರಣೆ ನಡೆಯಬೇಕು. ತಾವು ಬಯಸಿದ ಕಡೆ ವಿಚಾರಣೆ ಆದರೆ ತಮಗೆ ಬೇಕಾದ ತೀರ್ಪು ಬರುತ್ತದೆ ಎಂಬ “ದೂರದೃಷ್ಟಿ” ಯಾರಿಗೂ ಇರಕೂಡದು. ಆದರೆ ಮುಸ್ಲಿಮರ ಹಟ ನೋಡಿದರೆ ಇಂತಹ ಸಂಶಯ ಬರುವುದು ಸಾಮಾನ್ಯ. ಅಷ್ಟಕ್ಕೂ ನೀವು ಒಮ್ಮೆ ಮಳಲಿಯ ಆ ಮಸೀದಿ ಇರುವ ಜಾಗವನ್ನು ನೋಡಬೇಕು. ಬಹಳ ಹಳೆ ನಿರ್ಮಾಣ. ಅದನ್ನು ನವೀಕರಿಸುವುದಕ್ಕಾಗಿ ಮಸೀದಿಯ ಆಡಳಿತ ಮಂಡಳಿಯವರು ಕಟ್ಟಡವನ್ನು ಒಡೆದಿದ್ದರು. ಒಡೆದು ನೋಡುವಾಗ ಅಲ್ಲಿ ದೇವಸ್ಥಾನದ ಶೈಲಿಯ ಕೆತ್ತನೆಗಳು ಕಂಡು ಬಂದವು. ಈಗಾಗಲೇ ಉತ್ತರ ಭಾರತದ ಕೆಲವು ಕಡೆ ಮಸೀದಿಯ ಒಳಗೆ ಹಿಂದೂ ದೇವರ ಮತ್ತು ದೇವಾಲಯಗಳ ಶೈಲಿಯ ಅಸ್ತಿತ್ವವನ್ನು ಮಾಧ್ಯಮಗಳ ಮೂಲಕ ಪ್ರಪಂಚವೇ ನೋಡಿದೆ. ಆದ್ದರಿಂದ ಇಲ್ಲಿಯೂ ಅಂತಹುದೇ ಅನುಮಾನಗಳು ಕಂಡು ಬಂದಾಗ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸಂಘಟನೆಗಳು ತೀರ್ಮಾನಿಸಿದವು. ಮಳಲಿ ಮಸೀದಿಯ ಆಡಳಿತ ಮಂಡಳಿಯೊಂದಿಗೆ ಸೌಹಾರ್ದ ಮಾತುಕತೆ ನಡೆಸಲಾಯಿತು. ಆದರೆ ಯಾರೂ ಕೂಡ ಈ ಕುರಿತು ಯಾವುದೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ ಎಂದು ಅನಿಸಲು ಶುರುವಾಗಿತ್ತು. ನಂತರ ವೀಲ್ಯ ಪ್ರಶ್ನೆಯನ್ನು ಹಾಕಲಾಯಿತು. ಅದರಲ್ಲಿ ಆ ಪ್ರದೇಶದಲ್ಲಿ ಒಂದು ಕಾಲದಲ್ಲಿ ಹಿಂದೂ ದೇವರ ಆರಾಧನೆ ನಡೆಯುತ್ತಿರುವುದರ ಕುರುಹು ಕಂಡುಬಂದಿತ್ತು. ಈಗ ಅದರ ವಿಚಾರಣೆ ನಡೆಸುವ ವ್ಯಾಪ್ತಿ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಇದೆ ಎನ್ನುವ ಆದೇಶ ಬಂದಿದೆ ಬಿಟ್ಟರೆ ಪ್ರಕರಣ ಇನ್ನೂ ಮುಗಿದಿಲ್ಲ. ಒಂದು ಕಾಲದಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ಸಿಗರು ಇದ್ದಬದ್ದ ಜಮೀನುಗಳನ್ನು ವಕ್ಫ್ ಬೋರ್ಡಿಗೆ ನೀಡುತ್ತಿದ್ದರು. ಅದರಿಂದ ಇವತ್ತು ವಕ್ಫ್ ಬೋರ್ಡ್ ಎನ್ನುವುದು ಅತ್ಯಂತ ಬಲಿಷ್ಟ ಭೂ ಓಡೆಯನಾಗಿ ಬೆಳೆದು ನಿಂತಿದೆ. ಒಂದು ಕಾಲದಲ್ಲಿ ಅದೆಲ್ಲಾ ಸರಕಾರದ ಭೂಮಿಯಾಗಿತ್ತು. ಈಗ ಅದನ್ನು ತನ್ನದು ಎಂದು ಹೇಳಿ ವಿವಾದವಾದರೆ ಅದನ್ನು ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ವಾದ ಮಾಡಲಾಗುತ್ತಿದೆ. ಒಟ್ಟಿನಲ್ಲಿ ದೈವ ದೇವರುಗಳ ನೆಲೆಬೀಡಾಗಿರುವ ತುಳುನಾಡಿನಲ್ಲಿ ಕೊನೆಗೆ ಸತ್ಯವೇ ಗೆಲ್ಲಲಿ ಎಂದು ನಮ್ಮ ಪ್ರಾರ್ಥನೆ.
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search