ಅರುಣ್ ಶ್ಯಾಮ್ ಅವರಿಗೆ ಹಿಂದೂ ಕಾರ್ಯಕರ್ತರ ಕೃತಜ್ಞತೆ
ಹಿಂದೂ ಕಾರ್ಯಕರ್ತ, ಯುವ ಬ್ರಿಗೇಡ್ ಟಿ. ನರಸಿಂಹಪುರ ಸಂಚಾಲಕರಾಗಿದ್ದ ವೇಣುಗೋಪಾಲ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದ ವಿಷಯ ರಾಜ್ಯವ್ಯಾಪಿ ಹಿಂದೂ ಸಂಘಟನೆಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಜುಲೈ 8 ರಂದು ಹನುಮ ಜಯಂತಿ ಆಚರಣೆಯ ವೇಳೆ ನಡೆದ ಮಾತಿನ ಚಕಮಕಿಯ ಬಳಿಕ ಮರುದಿನ ವೇಣುಗೋಪಾಲ್ ಹಾಗೂ ಅವರ ಮನೆಯವರಿಗೆ ಪರಿಚಯವಿದ್ದ ಕೆಲವು ವ್ಯಕ್ತಿಗಳು ಮಾತುಕತೆಗೆ ಎಂದು ಕರೆದು ಹತ್ಯೆ ಮಾಡಿದ್ದರು.
ಅಗಲಿದ ಹಿಂದೂ ಕಾರ್ಯಕರ್ತನ ಆತ್ಮಕ್ಕೆ ಸದ್ಗತಿ ಕೋರಿ ಜುಲೈ 18 ಮಂಗಳವಾರದಂದು ತಿ ನರಸಿಂಹಪುರದ ಗುಂಜ ನರಸಿಂಹ ಸ್ವಾಮಿ ದೇವಾಲಯದ ಪಕ್ಕದ ಸ್ಥಳದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಚಕ್ರವರ್ತಿ ಸೂಲಿಬೆಲೆ, ಬಸವರಾಜ ಪಾಟೀಲ್ ಯತ್ನಾಳ್ ಹಾಗೂ ಅನೇಕ ಗಣ್ಯರು ಭಾಗವಹಿಸುವವರಿದ್ದರು. ಆದರೆ ಸರಕಾರದ ಗೃಹ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಸರಕಾರದ ಅನುಮತಿ ನಿರಾಕರಣೆಯ ವಿರುದ್ಧ ವೇಣುಗೋಪಾಲ್ ಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರು ನ್ಯಾಯಾಲಯದ ಮೆಟ್ಟಿಲು ಏರಿದ್ದವು. ಸಂಘಟನೆಗಳ ಪರ ಖ್ಯಾತ ವಕೀಲರಾದ ಅರುಣ್ ಶ್ಯಾಮ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಅರುಣ್ ಶ್ಯಾಮ್ ಅವರ ಪರಿಣಾಮಕಾರಿ ಅಂಶಗಳನ್ನು ಪರಿಗಣಿಸಿದ ಘನ ನ್ಯಾಯಾಲಯ ಅನುಮತಿಯನ್ನು ನೀಡಿದೆ.
ಅಸಂಖ್ಯಾತ ಹಿಂದೂ ಕಾರ್ಯಕರ್ತರು ಅರುಣ್ ಶ್ಯಾಮ್ ಅವರಿಗೆ ಈ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Leave A Reply