ಮಲ್ಟಿಫ್ಲೆಕ್ಸ್ ನಲ್ಲಿ ವಿಕ್ರಂ ವೇದ ವೀಕ್ಷಿಸಿದ ಪ್ರೇಕ್ಷಕರು!
ಜಮ್ಮು – ಕಾಶ್ಮೀರದಲ್ಲಿ ಸಂವಿಧಾನ ಆರ್ಟಿಕಲ್ 370 ರದ್ದುಗೊಳಿಸಿ ಅಗಸ್ಟ್ 5, 2022 ಕ್ಕೆ ಭರ್ತಿ ನಾಲ್ಕು ವರ್ಷಗಳಾಗಿವೆ. ಕೇಂದ್ರ ಸರಕಾರದ ಮಹತ್ವದ ಹೆಜ್ಜೆಯಿಂದ ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಮನ್ವಂತರ ಸೃಷ್ಟಿಯಾಗಿದೆ. 2022 ರ ಒಂದು ವರ್ಷದಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ನಾಗರಿಕರು ಕಾಶ್ಮೀರಕ್ಕೆ ಭೇಟಿ ನೀಡಿ ಭೂಲೋಕದ ಸ್ವರ್ಗವನ್ನು ನೋಡಿ ಆನಂದಿಸಿದ್ದಾರೆ. ಒಂದು ಕಾಲದಲ್ಲಿ ಹೊಸ ದೇವಾಲಯಗಳ ನಿರ್ಮಾಣ ಮಾಡುವುದು ಬಿಡಿ, ಆ ಬಗ್ಗೆ ಯೋಚನೆ ಮಾಡುವುದು ಕೂಡ ಕಷ್ಟವಾಗಿದ್ದ ಪ್ರದೇಶ ಕಾಶ್ಮೀರ. ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು – ಕಾಶ್ಮೀರದಲ್ಲಿ ಭವ್ಯ ತಿರುಪತಿ ಬಾಲಾಜಿಯ ದೇವಸ್ಥಾನ ನಿರ್ಮಾಣವಾಗಿದೆ. ಇದು ಕಾಶ್ಮೀರದ ಮುಕುಟಕ್ಕೆ ಹೊಸ ರತ್ನವನ್ನು ಜೋಡಿಸಿದಷ್ಟೇ ಭವ್ಯವಾಗಿದೆ. ಎರಡನೇಯ ಅದ್ಭುತ ಯಾವುದೆಂದರೆ ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರು ತಮ್ಮ ಮೂಲ ಸ್ಥಳದಲ್ಲಿ ತಮ್ಮ ಸಮುದಾಯದ ನವರೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿ ಸಂಭ್ರಮಿಸಿದರು. ಕಾಶ್ಮೀರಿ ಪಂಡಿತರು ಈ ಹಬ್ಬವನ್ನು ಕಾಶ್ಮೀರದಲ್ಲಿ ಆಚರಿಸದೇ 32 ವರ್ಷಗಳಾಗಿದ್ದವು. ತೊಂಭತ್ತರ ದಶಕದಲ್ಲಿ ನಡೆದ ಕ್ರೂರ ಘಟನೆಗಳ ಬಳಿಕ ನವರೆ ಹಬ್ಬವನ್ನು ಆಚರಿಸುವುದನ್ನು ಕಾಶ್ಮೀರಿಗಳು ಮರೆತುಬಿಟ್ಟಿದ್ದರು. ಮೂರನೇಯ ಮಹತ್ತರ ಬದಲಾವಣೆ ಎಂದರೆ ಕಾಶ್ಮೀರದಲ್ಲಿ ಜೀರ್ಣೋದ್ಧಾರಗೊಂಡಿರುವ ಶಾರದಾ ಮಂದಿರದಲ್ಲಿ ಹಿಂದೂ ಬಾಂಧವರು ಕಳೆದ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ಇತಿಹಾಸದಲ್ಲಿ ಕಾಶ್ಮೀರದಲ್ಲಿ ದೀಪಾವಳಿ ಆಚರಿಸಲು ಹಿಂದೂಗಳು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಇತ್ತು. ಯಾವಾಗ ಆರ್ಟಿಕಲ್ 370 ರದ್ದಾಯಿತೋ ದೀಪಾವಳಿ ಹಬ್ಬವನ್ನು ಇಲ್ಲಿ ಆಚರಿಸಲಾಯಿತು.
ಭವಿಷ್ಯದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ!
ಇನ್ನು ನಾಲ್ಕನೇಯದಾಗಿ ಕಾಶ್ಮೀರದಲ್ಲಿ 90 ರ ದಶಕದ ಮೊದಲು ಸಿನೆಮಾ ಥಿಯೇಟರ್ ಗಳು ಇದ್ದವು. ಕಾಶ್ಮೀರದ ನರಮೇಧದ ಅವಧಿಯಲ್ಲಿ ಎಲ್ಲಾ ಸಿನೆಮಾ ಗೃಹಗಳು ಮುಚ್ಚಲ್ಪಟ್ಟವು. 1999 ರಲ್ಲಿ ಮತ್ತೆ ಕೆಲವು ತೆರೆಯಲ್ಪಟ್ಟರೂ ಸಾಕಷ್ಟು ಪೇಕ್ಷಕರಿಲ್ಲದೇ ನಡೆಸುವುದು ಕಷ್ಟಸಾಧ್ಯವಾಯಿತು. ಹೆಚ್ಚಿನವು ಮಾಲ್ ಗಳಾಗಿ ಬದಲಾದವು. ಕೆಲವು ಆಸ್ಪತ್ರೆಗಳಾದವು. ಒಟ್ಟು ಇದ್ದ 15 ಸಿನೆಮಾ ಮಂದಿರಗಳಲ್ಲಿ ಈಗ ಒಂದೂ ಕೂಡ ಇಲ್ಲ. ಸದ್ಯ ಶ್ರೀನಗರದಲ್ಲಿ ರಾಜ್ಯದ ಮೊದಲ ಮಲ್ಟಿಫ್ಲೆಕ್ಸ್ ನಿರ್ಮಾಣವಾಗಿದೆ. 23 ವರ್ಷಗಳ ಬಳಿಕ ಜನರು ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಲು ಸಾಧ್ಯವಾಗಿದೆ. ವಿಕ್ರಂ ವೇದ, ಲಾಲ್ ಸಿಂಗ್ ಚಡ್ಡಾ ಸಿನೆಮಾಗಳು ಪ್ರದರ್ಶನಗೊಳ್ಳುತ್ತಿವೆ. ಸದ್ಯ ಜನರ ಸ್ಪಂದನೆ ಕಡಿಮೆ ಇದೆ. ಜನರಿಗೆ ಥಿಯೇಟರ್ ಗಳಿಗೆ ಬಂದು ಸಿನೆಮಾ ನೋಡುವುದು ಎಂದರೆ ಅದೊಂದು ಸವಾಲಿನ ಸಂಗತಿಯಂತೆ ತೋರುತ್ತಿದೆ. ಥಿಯೇಟರ್ ಇರುವ ರಸ್ತೆಯ ಆರಂಭದಲ್ಲಿ ಭದ್ರತಾ ಸಿಬ್ಬಂದಿಗಳು ನಾಗರಿಕರನ್ನು ಫುಲ್ ಚೆಕ್ ಮಾಡಿ ಮುಂದಕ್ಕೆ ಬಿಡುತ್ತಾರೆ. ಅದರ ನಂತರ ಥಿಯೇಟರ್ ಹೊರಗೆ ಮತ್ತೆ ಚೆಕ್ಕಿಂಗ್ ಇರುತ್ತದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾತ್ರ ಸದ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜನರು ಹೆಚ್ಚೆಚ್ಚಾಗಿ ಸಿನೆಮಾ ಮಂದಿರಕ್ಕೆ ಬರಬಹುದು ಎನ್ನುವುದು ಸಿನೆಮಾ ಗೃಹದ ಮಾಲೀಕರ ಅಭಿಪ್ರಾಯ
Leave A Reply