ಕಣ್ಮನ ಸೆಳೆಯಲಿರುವ ನೂತನ ರೈಲು ನಿಲ್ದಾಣಗಳು 2025 ಕ್ಕೆ ಸಿದ್ಧ
ದೇಶದ ಒಟ್ಟು 508 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ಮಾಡಲಿದ್ದಾರೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈಲು ನಿಲ್ದಾಣಗಳು ಅಭಿವೃದ್ಧಿಗೊಳ್ಳಲು ಶಿಲಾನ್ಯಾಸ ನಡೆದಿರುವುದು ಇದೇ ಪ್ರಥಮ ಎಂದು ಹೇಳಲಾಗುತ್ತಿದೆ. 2025 ರ ಒಳಗೆ ಇಷ್ಟು ರೈಲು ನಿಲ್ದಾಣಗಳು ಅಭಿವೃದ್ಧಿಯಾಗಲಿವೆ ಎಂದು ಹಿರಿಯ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ಹೊರವಲಯದಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಕೂಡ ಇದೇ ಪಟ್ಟಿಯಲ್ಲಿದ್ದು, ಅಗಸ್ಟ್ 6 ರಂದು ಅಭಿವೃದ್ಧಿಗೆ ಶಿಲಾನ್ಯಾಸಗೊಳ್ಳಲಿದೆ. ಅಮೃತ ಭಾರತ ಸ್ಟೇಶನ್ ಸ್ಕೀಮ್ ನಲ್ಲಿ ಅಂದಾಜು 24,470 ಕೋಟಿ ರೂಪಾಯಿ ಇಷ್ಟು ರೈಲು ನಿಲ್ದಾಣಗಳು ಅಭಿವೃದ್ಧಿಯ ಪಥದಲ್ಲಿ ಸಾಗಲಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವನಿ ವೈಷ್ಣವ್ ಅವರು ” ಪ್ರಧಾನ ಮಂತ್ರಿಗಳು ಸ್ವತ: ಈ ರೈಲು ನಿಲ್ದಾಣಗಳ ಅಭಿವೃದ್ಧಿಯ ರೂಪುರೇಶೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿ ಸೂಚನೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು. 508 ರೈಲು ನಿಲ್ದಾಣಗಳಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದ 55, ಬಿಹಾರದ 49, ಮಹಾರಾಷ್ಟ್ರದ 44, ಪಶ್ಚಿಮ ಬಂಗಾಲದ 37, ಮಧ್ಯಪ್ರದೇಶದ 34, ಅಸ್ಸಾಂನ 32, ಓಡಿಶಾದ 25, ಪಂಜಾಬಿನ 22, ಗುಜರಾತ್ ಮತ್ತು ತೆಲಂಗಾಣದ 21, ಜಾರ್ಖಂಡಿನ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನ 18, ಹರ್ಯಾಣದ 15, ಕರ್ನಾಟಕದ 13 ರೈಲು ನಿಲ್ದಾಣಗಳು ಸೇರಿವೆ.
Leave A Reply