ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ upload!
ಉಡುಪಿ ಖಾಸಗಿ ಕಾಲೇಜಿನ ಟಾಯ್ಲೆಟಿನಲ್ಲಿ ವಿಡಿಯೋ ಪ್ರಕರಣ ಇನ್ನು ಕೂಡ ಜೀವಂತವಾಗಿರುವಾಗಲೇ ಹುಬ್ಬಳ್ಳಿಯ ಕಾಲೇಜಿನ ಇನ್ಟಾಗ್ರಾಂ ಹ್ಯಾಕ್ ಮಾಡಿ ಅದರಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿನಿಯರ ಎಡಿಟ್ ಮಾಡಲಾಗಿರುವ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ಈಗ ಪೊಲೀಸ್ ಠಾಣೆಯ ಮೆಟ್ಟಲೇರಿದೆ. ಮೂರು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ಈ ವಿಷಯ ತಂದಿದ್ದರು. ಆದರೆ ಕಾಲೇಜಿನ ಹೆಸರು ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿ ಏನೂ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಉತ್ತೇಜಿತಗೊಂಡ ದುರುಳರು ಇನ್ನಷ್ಟು ಫೋಟೋಗಳನ್ನು ಅಪಲೋಡ್ ಮಾಡಿದ್ದರು. ಇನ್ನು ನಮ್ಮನ್ನು ಯಾರೂ ಹಿಡಿಯಲು ಆಗುವುದಿಲ್ಲ, ನೀವು ಯಾರಿಗೆ ದೂರು ಕೊಟ್ಟರೂ ಏನೂ ಮಾಡಲು ಆಗುವುದಿಲ್ಲ, ನಮ್ಮ ಬಳಿ ಇನ್ನಷ್ಟು ಫೋಟೋ ಇದೆ ಎಂದು ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದರು. ಆಡಳಿತ ಮಂಡಳಿ ಈ ಬಗ್ಗೆ ಏನೂ ಮಾಡುವುದಿಲ್ಲ ಎಂದು ಗ್ಯಾರಂಟಿಯಾಗುತ್ತಿದ್ದಂತೆ ಸ್ವತ: ಯುವತಿಯರೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ ಕೇಸು ದಾಖಲಿಸಿಕೊಂಡಿದ್ದಾರೆ. ಈಗ ಸುದ್ದಿ ವೈರಲ್ ಆಗುತ್ತಿದ್ದಂತೆ ಕಾಶ್ಮಿರಾ19990_0 ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಡಿಲೀಟ್ ಆಗಿದೆ. ಕಾಲೇಜಿನ ವಿದ್ಯಾರ್ತಿನಿಯರ ಫೋಟೋಗಳನ್ನು ಯಾರೋ ಒಳಗಿನವರೇ ಅಡಿಟ್ ಮಾಡಿ ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಹೀಗಾಗಿ ಈ ಪ್ರಕರಣ ಸಂಬಂಧ ಹಲವು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ತನಿಖೆ ಶುರುವಾಗುತ್ತಲೇ ಫೋಟೋ ಡಿಲೀಟ್ ಮಾಡಿರುವುದರಿಂದ “ತನ್ನನ್ನು ಯಾರೂ ಹಿಡಿಯಲು ಆಗುವುದಿಲ್ಲ” ಎಂದು ಧೈರ್ಯದಿಂದ ಮೇಸೆಜ್ ಮಾಡಿದ್ದ ವ್ಯಕ್ತಿ ಹಾಗೆ ಯಾಕೆ ಮಾಡಿದ ಎನ್ನುವ ಅನುಮಾನ ಎಲ್ಲರಿಗೂ ಶುರುವಾಗಿದೆ.
Leave A Reply