ತಲೆಗೆ ಚಾವಣಿ ಬಿದ್ದರೂ ಮಗುವಿನ ಮುಗ್ಧ ನಗು!
Posted On August 11, 2023
0

ಅಂಗನವಾಡಿಯ ಛಾವಣಿ ಕುಸಿದು ಬಿದ್ದು, 10 ತಿಂಗಳ ಮಗುವಿಗೆ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ನಲ್ಲಿ ನಡೆದಿದೆ.
ಕೀರ್ತಿ ಎಂಬ 10 ತಿಂಗಳ ಮಗುವಿಗೆ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದ ಸಂದರ್ಭ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದಿದ್ದು, ಇದರಿಂದ ಮಗುವಿನ ತಲೆಗೆ ಗಾಯವಾಗಿದೆ. ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್ ಹಾಕಲಾಗಿದೆ. ಬಳಿಕ ಗಾಯಾಳು ಮಗುವನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನೋವಿನಲ್ಲೂ ಮಗುವಿನ ಮುಗ್ಧತೆ ಕಂಡು ಬಂದಿದೆ.
ಅಂಗನವಾಡಿಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿರುವುದು ನಿಜಕ್ಕೂ ದುರದೃಷ್ಟಕರ. ಅಂಗನವಾಡಿಯಲ್ಲಿ ಇದ್ದ ಉಳಿದ ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.