ಮುಸ್ಲಿಮನಾಗಿ ಇದ್ದಿದ್ರೆ ಇನ್ನಷ್ಟು ಸಾಧನೆ ಮಾಡಬಹುದಿತ್ತು – ದಾನೇಶ್ ಕನೇರಿಯಾ
ನಾನು ಮುಸ್ಲಿಮನಾಗಿ ಇದ್ದಿದ್ರೆ ಪಾಕಿಸ್ತಾನದ ಕ್ರಿಕೆಟ್ ತಂಡದ ಕಪ್ತಾನನಾಗಬಹುದಿತ್ತು. ಅದರೊಂದಿಗೆ ಕ್ರಿಕೆಟ್ ನಲ್ಲಿ ಇನ್ನಷ್ಟು ಸಾಧನೆ ಮಾಡಲು ಅವಕಾಶ ಸಿಗುತ್ತಿತ್ತು. ನಮ್ಮದೇ ತಂಡದವರ ದಾಖಲೆ ಮುರಿಯಬಹುದಿತ್ತು. ಆದರೆ ನಾನು ನನ್ನ ಸನಾತನ ಧರ್ಮ ಬಿಟ್ಟು ಹೋಗಲು ತಯಾರಿರಲಿಲ್ಲ ಎಂದು ಮಾಜಿ ಪಾಕ್ ಕ್ರಿಕೆಟಿಗ ದಾನೇಶ್ ಕನೇರಿಯಾ ಹೇಳಿದ್ದಾರೆ. ಆಜ್ ತಕ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ನನಗೆ ನನ್ನ ಸನಾತನ ಧರ್ಮವೇ ಶ್ರೇಷ್ಟ. ಈ ವಿಷಯದಲ್ಲಿ ನಾನು ರಾಜಿಯಾಗಲು ಸಿದ್ಧನಿಲ್ಲ. ನನಗೆ ಮತಾಂತರವಾಗಲು ತುಂಬಾ ಒತ್ತಡ, ಆಮಿಷ ನೀಡಲಾಯಿತು. ಆದರೆ ನಾನು ಯಾವುದಕ್ಕೂ ಜಗ್ಗಲಿಲ್ಲ ಎಂದು ಕನೇರಿಯಾ ಹೇಳಿದ್ದಾರೆ. ನನಗೆ ಕೆಲಸ ಸಿಗಲಿ, ಬಿಡಲಿ, ಅದರ ಬಗ್ಗೆ ನನಗೆ ಯೋಚನೆ ಇಲ್ಲ. ಧರ್ಮ ಇದ್ದರೆ ಎಲ್ಲವೂ ಇದೆ. ಇಲ್ಲದಿದ್ದರೆ ಏನೂ ಇಲ್ಲ, ಜೈ ಶ್ರೀರಾಮ್ ಎಂದು ದಾನೇಶ್ ಕನೇರಿಯಾ ಹೇಳಿದ್ದಾರೆ.
ಪಾಕಿಸ್ತಾನದ ಅತ್ಯುತ್ತಮ ಗೂಗ್ಲಿ ಸ್ಪಿನರ್ ಎಂದೇ ಖ್ಯಾತರಾಗಿದ್ದ ದಾನೇಶ್ ಪರಬ ಶಂಕರ್ ಕನೇರಿಯಾ ಅವರಿಗೆ ಕೇವಲ 61 ಪಂದ್ಯ ಆಡಲು ಅವಕಾಶ ದೊರಕಿತ್ತು. ಸಿಕ್ಕಿದ ಕೆಲವೇ ಅವಕಾಶಗಳಲ್ಲಿ 261 ವಿಕೆಟ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದರು. ಆದರೆ ಅವರ ಕ್ರಿಕೆಟ್ ಪಯಣ ಬೇಗ ಕೊನೆಗೊಂಡಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 14.6% ಇತ್ತು. ಆದರೆ ಪ್ರಸ್ತುತ ಇದು 2.14% ಕ್ಕೆ ಬಂದು ಇಳಿದಿದೆ. ಅದಕ್ಕೆ ಕಾರಣ ಏನು ಎನ್ನುವುದು ದಾನೇಶ್ ಕನೇರಿಯಾ ಅವರ ಮಾತುಗಳಲ್ಲಿಯೇ ಅರ್ಥವಾಗುತ್ತದೆ.
Leave A Reply