ಮೂರು ಸೋಲಿನ ಬಳಿಕ ದಕ್ಕುವುದೇ ಬಾಹುಬಲಿ ಯಶಸ್ಸು!
ವರ್ಷದ ಕೊನೆಯ ಅತ್ಯಂತ ನಿರೀಕ್ಷಿತ ಸಿನೆಮಾ ಇದೇ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನೆಮಾ ಬಿಡುಗಡೆ ಕಾಣಲಿದೆ. ಬಾಹುಬಲಿಯ ಸೂಪರ್ ಹಿಟ್ ಕಲೆಕ್ಷನ್ ಬಳಿಕ ಪ್ರಭಾಸ್ ಅಭಿನಯಿಸಿದ ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಬಾಕ್ಸ್ ಆಫೀಸ್ ನಲ್ಲಿ ಏನೂ ಮ್ಯಾಜಿಕ್ ಮಾಡದೇ ಬಂದ ದಾರಿಗೆ ಸುಂಕವಿಲ್ಲದೇ ಕಳೆಗುಂದಿದ್ದವು. ಇಂತಹ ಕಾಲಘಟ್ಟದಲ್ಲಿ ಒಂದು ದೊಡ್ಡ ಯಶಸ್ಸು ಪ್ರಭಾಸ್ ಗೆ ಅನಿವಾರ್ಯವಾಗಿತ್ತು. ಹೀಗಿರುವಾಗ ಅವರು ಕೈಜೋಡಿಸಿದ್ದೇ ಪ್ರಶಾಂತ್ ನೀಲ್ ಜೊತೆಗೆ.
ಆದಾಗಲೇ ಪ್ರಶಾಂತ್ ನೀಲ್ ಕೆಜಿಎಫ್ 1 ಮತ್ತು 2 ಮಾಡಿ ಜಗತ್ತಿಗೆ ತಮ್ಮ ಹೆಸರನ್ನು ಸಾಬೀತುಪಡಿಸಿ ಆಗಿತ್ತು. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆಯಾದರೆ ಬಾಹುಬಲಿ ಹಾಗೂ ಕೆಜಿಎಫ್ ಎರಡನ್ನು ಮೀರಿಸಿದ ಒಂದು ಸಿನೆಮಾ ಹೊರಬರಬಹುದು ಎಂದು ಹೊಂಬಾಳೆ ಬ್ಯಾನರಿಗೂ ಅನಿಸಿತ್ತು. ಹೀಗೆ ಕಾಂತಾರಾದ ಯಶಸ್ಸಿನ ಅಲೆಯಲ್ಲಿರುವ ಹೊಂಬಾಳೆ ಫಿಲಂಸ್ ಮತ್ತೆ ತೆರೆಯ ಮೇಲೆ ಹೊಸ ಫ್ಯಾಂಟಸಿ ಲೋಕವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದರ ಪರಿಣಾಮವೇ ಸಲಾರ್.
ಸಲಾರ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಒಪನ್!
ಇತ್ತೀಚಿಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣ ಪತ್ರ ಪಡೆದಿರುವ ” ಸಲಾರ್ ಪಾರ್ಟ್ 1 – ಸೀಸ್ ಫೈರ್ ” ಚಿತ್ರವು ಎರಡು ಗಂಟೆ 55 ನಿಮಿಷ ಅವಧಿಯದ್ದಾಗಿದೆ. ಈ ಮೊದಲ ಭಾಗದಲ್ಲಿ ಪ್ರಭಾಸ್ ಜೊತೆ ಮಲಯಾಳಂ ನಾಯಕನಟ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಚಿತ್ರಪ್ರೇಮಿಗಳ ಸಂಭ್ರಮಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇವೆ.
Leave A Reply