ಈಗ ರಾಜಸ್ಥಾನದಲ್ಲಿಯೂ ಬುಲ್ಡೋಜರ್ ಪ್ರಯೋಗ!
ರಾಜಸ್ಥಾನ ಸರಕಾರ ಕೂಡ ಬುಲ್ಡೋಜರ್ ಅಸ್ತ್ರವನ್ನು ಸಮಾಜ ವಿಧ್ವಂಸಕ ಕೃತ್ಯ ಮಾಡುವವರ ವಿರುದ್ಧ ಪ್ರಯೋಗಿಸುವ ಮೂಲಕ ಉತ್ತರ ಪ್ರದೇಶ, ಮಧ್ಯಪ್ರದೇಶ ಸರಕಾರದ ಮಾದರಿಯನ್ನು ಅನುಸರಿಸಿದೆ. ರಾಜಸ್ಥಾನದ ಕರಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿಯವರನ್ನು ಅವರ ಮನೆಗೆ ಬಂದು ಮಾತನಾಡುವ ನೆಪದಲ್ಲಿ ಆರೋಪಿಗಳು ಹತ್ಯೆಗೈದಿದ್ದರು. ಈ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಮುಖ ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಪ್ರಮುಖ ಆರೋಪಿ ರೋಹಿತ್ ರಾಥೋರ್ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ.
ಖಾಟಿಪುರದಲ್ಲಿರುವ ಆರೋಪಿ ರೋಹಿತ್ ಮನೆ ಅಕ್ರಮವಾಗಿ ಕಟ್ಟಲಾಗಿದೆ. ಈ ಕುರಿತು ಜೈಪುರ್ ಮುನ್ಸಿಪಾಲಿಟಿ ಕಾರ್ಪೋರೇಶನ್ ಸರಕಾರಿ ಜಾಗದಲ್ಲಿ ಅತಿಕ್ರಮವಾಗಿ ಹಾಗೂ ಅಕ್ರಮವಾಗಿ ಕಟ್ಟಿದ ಮನೆಯನ್ನು ಧ್ವಂಸಗೊಳಿಸಿದೆ. ಸುಖದೇವ್ ಹತ್ಯೆ ಬೆನ್ನಲ್ಲೇ ಗೋಲ್ಡಿ ಬ್ರಾರ್ ಗ್ಯಾಂಗ್ ಸ್ಟರ್ ಸಂಘಟನೆ ಇದರ ಹೊಣೆ ಹೊತ್ತುಕೊಂಡಿತ್ತು. ಇದೇ ಸಂಘಟನೆಯ ರೋಹಿತ್ ರಾಥೋರ್ ಫೇಸ್ ಬುಕ್ ಪೋಸ್ಟ್ ಮಾಡಿ ಹತ್ಯೆಯನ್ನು ಸಂಭ್ರಮಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ರೋಹಿತ್ ರಾಥೋರ್, ನಿತಿನ್ ಫೌಜಿ, ಉದ್ದಮ್ ನನ್ನು ಬಂಧಿಸಲಾಗಿತ್ತು.
ಮೃತ ಸುಖ್ ದೇವ್ ಗೊಡಮೇಡಿ ಮೂಲತ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನೆಯಲ್ಲಿದ್ದು, 2015 ರಲ್ಲಿ ಪದ್ಮಾವತ್ ಚಿತ್ರದ ಕುರಿತು ತಮ್ಮ ನಾಯಕ ಲೋಕೇಂದ್ರ ಸಿಂಗ್ ಕಲ್ವಿ ಜೊತೆ ಭಿನ್ನಾಭಿಪ್ರಾಯ ಬಂದ ಹಿನ್ನಲೆಯಲ್ಲಿ ತಮ್ಮದೇ ಪ್ರತ್ಯೇಕ ಬಣವನ್ನು ಸ್ಥಾಪಿಸಿದ್ದರು.
Leave A Reply