• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿ ಹೇಳಿದ ಭವಿಷ್ಯ ವಾರದೊಳಗೆ ನಿಜವಾಗಿದೆ!

Tulunadu News Posted On February 16, 2024


  • Share On Facebook
  • Tweet It

ತಮ್ಮ ಸರಕಾರದ ಎರಡನೇ ಅವಧಿಯ ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳಿಂದ ಕೆಲವರು ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕಲಿದ್ದಾರೆ. ರಾಜ್ಯಸಭೆಯಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವರು ಎಂದಿನಂತೆ ಈ ಬಾರಿಯೂ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ” ಎಂದು ಬಹಿರಂಗವಾಗಿ ತಿಳಿಸಿದ್ದರು. ಅವರು ಹಾಗೆ ಹೇಳಿದ್ದು ವಿಪಕ್ಷ ಕಾಂಗ್ರೆಸ್ ಕುರಿತಾದರೂ ಅದು ಇಷ್ಟು ಬೇಗ ನಿಜವಾಗುತ್ತೆ ಎಂದು ಅನಿಸಿರಲಿಲ್ಲ. ಆದರೆ ಅಧಿವೇಶನ ಮುಗಿಸಿ ಇನ್ನು ಕೂಡ ವಾರ ಮುಗಿದಿಲ್ಲ, ಮೋದಿ ಭವಿಷ್ಯ ಸತ್ಯವಾಗಿದೆ.

1999 ರಲ್ಲಿ ಅಮೇಥಿ ಮತ್ತು ಬಳ್ಳಾರಿ ಎರಡು ಕಡೆಯಿಂದ ಸ್ಪರ್ಧಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದ ಸೋನಿಯಾ ಅವರು ಅಮೇಥಿಯನ್ನು ಉಳಿಸಿಕೊಂಡರು. ಆಗ ಅವರ ವಿರುದ್ಧ ಬಳ್ಳಾರಿಯಿಂದ ಸ್ಪರ್ಧಿಸಿದ್ದು ಸುಷ್ಮಾ ಸ್ವರಾಜ್. ನಂತರ ಮುಂದಿನ ಚುನಾವಣೆಯಲ್ಲಿ ಸೋನಿಯಾ ಅಮೇಥಿಯನ್ನು ಮಗನಿಗೆ ಬಿಟ್ಟುಕೊಟ್ಟು ತಾವು ಪಕ್ಕದ ರಾಯಬರೇಲಿಯಿಂದ ಸ್ಪರ್ಧಿಸಿದರು. 2004 ರಿಂದ ಅದೇ ಕ್ಷೇತ್ರದಿಂದ ಗೆಲ್ಲುತ್ತಿರುವ ಸೋನಿಯಾ 2006 ರ ಉಪಚುನಾವಣೆಯೂ ಸೇರಿದಂತೆ ಐದು ಬಾರಿ ರಾಯಬರೇಲಿಯಿಂದ ಒಮ್ಮೆ ಅಮೇಥಿಯಿಂದ ಒಟ್ಟು ಆರು ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದಾರೆ. ಇಲ್ಲಿಯ ತನಕ ಸೋಲು ಕಾರಣ ಸೋನಿಯಾ ಈ ಬಾರಿ ಸೋಲಿನ ರುಚಿಯನ್ನು ಗ್ರಹಿಸಿದರೇ? ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಕಳೆದ ಬಾರಿ ಪರಂಪರಾಗತವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಪುತ್ರ ರಾಹುಲ್ ಬಿಜೆಪಿಯ ಮುಖಂಡೆ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡರೋ ಅದರ ಬಳಿಕ ಈ ಬಾರಿ ಅಂತಹ ಫಲಿತಾಂಶ ರಾಯಬರೇಲಿಯಿಂದ ಬರಬಹುದಾ ಎನ್ನುವ ಆತಂಕ ಗಾಂಧಿ ಕುಟುಂಬಕ್ಕೆ ಇದ್ದಂತಿದೆ.

ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಕಾಂಗ್ರೆಸ್ಸಿಗೆ ಚುನಾವಣೆಯ ಮೊದಲೇ ಸೋಲಿನ ಮುನ್ಸೂಚನೆ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಕಳೆದ ಬಾರಿ ಅಮೇಥಿ ಕಾಂಗ್ರೆಸ್ ರಾಜಪರಿವಾರದಿಂದ ಕೈತಪ್ಪಿ ಹೋಗಿದ್ದರೆ ಈ ಬಾರಿ ರಾಯಬರೇಲಿಯಲ್ಲಿಯೂ ಅದೇ ಇತಿಹಾಸ ಮರುಕಳಿಸಬಹುದು ಎಂಬ ಹಿಂಟ್ ಗಾಂಧೀ ಕುಟುಂಬಕ್ಕೆ ಸಿಕ್ಕಿರಬಹುದು. ಅಜ್ಜ ನೆಟ್ಟ ಆಲದಮರ ಎಂದು ನೇತಾಡುವ ಪರಿಸ್ಥಿತಿ ಈಗ ಉತ್ತರ ಪ್ರದೇಶದಲ್ಲಿ ಇಲ್ಲ. ಆದ್ದರಿಂದ ಎರಡೆರಡು ಕಡೆ ತಾನೇ ನಿಂತು ಸುಮ್ಮನೆ ಸೋಲುವ ಸೂಚನೆಯನ್ನು ರವಾನಿಸುವ ಬದಲು ಎರಡು ತಿಂಗಳ ಮೊದಲೇ ಸೈಲೆಂಟಾಗಿ ಹಿಂದೆ ಸರಿದುಬಿಟ್ಟರೆ ರಗಳೆ ಇಲ್ವಲ್ಲಾ ಎನ್ನುವುದು ಕಾಂಗ್ರೆಸ್ ಕಿಚನ್ ಕ್ಯಾಬಿನೆಟ್ ಸೋನಿಯಾ ಅವರಿಗೆ ಐಡಿಯಾ ನೀಡಿರಬಹುದು.

ಇನ್ನು ಸೋನಿಯಾ ಬಿಟ್ಟುಕೊಡಲಿರುವ ರಾಯಬರೇಲಿಯಿಂದ ಗಾಂಧಿ ಕುಟುಂಬದಿಂದಲೇ ಯಾರಾದರೂ ಸ್ಪರ್ಧಿಸುತ್ತಾರಾ? ಪ್ರಿಯಾಂಕಾ ವಾದ್ರಾ. ಆ ಬಗ್ಗೆ ಈಗಲೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅವರು ಈ ಬಾರಿ ತಾಯಿಯ ಸ್ಥಾನವನ್ನು ರಾಯಬರೇಲಿಯಲ್ಲಿ ತುಂಬುತ್ತಾರಾ ಅಥವಾ ಪುತ್ರ ರಾಹುಲ್ ರಾಯಬರೇಲಿಗೆ ಬರುತ್ತಾರಾ, ಹದಿನೈದು ದಿನಗಳಲ್ಲಿ ಉತ್ತರ ಸಿಗಬಹುದು!

  • Share On Facebook
  • Tweet It


- Advertisement -


Trending Now
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
Tulunadu News May 20, 2025
ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
Tulunadu News May 20, 2025
Leave A Reply

  • Recent Posts

    • ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!
    • ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
    • ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!
    • RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!
    • ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
  • Popular Posts

    • 1
      ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • 2
      ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • 3
      ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!
    • 4
      ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • 5
      ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search