ನ್ಯಾಯ ಕೇಳಿ ನಡೆದ ಪ್ರತಿಭಟನೆಯ ನೇತೃತ್ವ ಸಿಎಂ ಮಮತಾ!!
ಪಶ್ಚಿಮ ಬಂಗಾಲದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಷಯದಲ್ಲಿ ಇಡೀ ದೇಶದಲ್ಲಿ ಪ್ರತಿಭಟನೆಗಳು ಆಗುತ್ತಿವೆ. ಮಂಗಳೂರು ಸಹಿತ ಕರ್ನಾಟಕದ ವಿವಿಧ ಭಾಗಗಳನ್ನು ಸೇರಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯಂತೆ ಕೊಲ್ಕೊತ್ತಾದಲ್ಲಿಯೂ ಪ್ರತಿಭಟನೆ ನಡೆಯಿತು. ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಸೇರಿದ್ದರು. ಅದರ ನೇತೃತ್ವ ವಹಿಸಿಕೊಂಡವರು ಮಮತಾ ಬ್ಯಾನರ್ಜಿ.
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ. ಅವರದ್ದೇ ಸರಕಾರದ ಆಡಳಿತವಿರುವ ರಾಜ್ಯದಲ್ಲಿ ಯುವತಿಯೊಬ್ಬಳು ಅತ್ಯಾಚಾರ, ಕೊಲೆಗೀಡಾದರೆ ಅವರೇ ಪ್ರತಿಭಟನೆ ಮಾಡಲು ಇಳಿಯುವುದೇ ಒಂದು ರೀತಿಯಲ್ಲಿ ಆಶ್ಚರ್ಯವಾಗುತ್ತದೆ. ಒಂದು ರಾಜ್ಯದ ಕಾನೂನು ಸುವ್ಯವಸ್ಥೆ ಆ ರಾಜ್ಯದ ಪೊಲೀಸ್ ಇಲಾಖೆಯ ಅಧೀನದಲ್ಲಿರುತ್ತದೆ. ಮಂಗಳೂರಿನಲ್ಲಿ ಪ್ರತಿಭಟನೆಗೆ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಪಾದಯಾತ್ರೆಯ ಮೂಲಕ ಹೋಗುತ್ತಿದ್ದಾಗ ಅವರನ್ನು ತಡೆಯುವಂತಹ ಪ್ರಯತ್ನ ಪೊಲೀಸರು ಮಾಡಿದ್ದಾರೆ. ಯಾಕೆ? ನ್ಯಾಯ ಕೇಳಲು ಪ್ರತಿಭಟನೆ ಮಾಡುವುದು ತಪ್ಪಾ? ಹಾಗಾದರೆ ಪಶ್ಚಿಮ ಬಂಗಾಲದಲ್ಲಿ ಪ್ರತಿಭಟನೆ ಮಾಡಲು ಇಳಿದವರ ನೇತೃತ್ವ ವಹಿಸಿದ್ದು ಅಲ್ಲಿನ ಸಿಎಂ. ಹಾಗಾದರೆ ಮುಖ್ಯಮಂತ್ರಿಯನ್ನೇ ಪ್ರತಿಭಟನೆ ಮಾಡದಂತೆ ಅಲ್ಲಿನ ಪೊಲೀಸರು ತಡೆಯಬಲ್ಲರಾ?
ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ ಬ್ಯಾನರ್ಜಿ ” ವೈದ್ಯೆಯ ಕುಟುಂಬಕ್ಕೆ ನ್ಯಾಯ ಕೇಳಲು ನಾವೆಲ್ಲ ಒಂದಾಗಿದ್ದೇವೆ” ಎಂದು ಹೇಳಿದ್ದಾರೆ. ಆದರೆ ಈ ಪ್ರತಿಭಟನೆಯ ಹಿಂದಿನ ದಿನ ಸೂರ್ಯ ಹುಟ್ಟುವ ಮೊದಲೇ ಕತ್ತಲೆಯಲ್ಲಿ ನಸುಕಿನ ಜಾವ ಆದದ್ದಾದರೂ ಏನು? 40 ಪುಂಡರ ತಂಡ ಆ ದುರ್ಘಟನೆ ನಡೆದ ಆಸ್ಪತ್ರೆಗೆ ನುಗ್ಗಿ ಅಲ್ಲಿನ ತುರ್ತು ಚಿಕಿತ್ಸಾ ವಿಭಾಗ, ಚಿಕಿತ್ಸಾ ಕೊಠಡಿ, ಔಷಧಗಳ ಸಂಗ್ರಹ ಕೊಠಡಿಯನ್ನು ಧ್ವಂಸ ಮಾಡಿದ್ದಾರೆ. ಅದರೊಂದಿಗೆ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಪುಡಿ ಮಾಡಿದ್ದು, ಅದರೊಂದಿಗೆ ಕಿರಿಯ ವೈದ್ಯರು ಪ್ರತಿಭಟನೆ ಮಾಡಲು ಹಾಕಿಕೊಂಡಿದ್ದ ವೇದಿಕೆಯನ್ನು ಕೂಡ ನಾಶಪಡಿಸಿದ್ದಾರೆ. ಇಡೀ ದೇಶವೇ ಬೆಚ್ಚಿಬಿದ್ದಂತೆ ನಡೆದಿರುವ ವೈದ್ಯೆಯ ಅತ್ಯಾಚಾರ, ಕೊಲೆ ನಡೆದಿರುವ ಆಸ್ಪತ್ರೆಗೆ ಪೂರ್ಣ ಸುರಕ್ಷತೆಯನ್ನು ನೀಡಬೇಕಾದ ಪೊಲೀಸ್ ಇಲಾಖೆ ಅಲ್ಲಿ ಕೇಸಿನ ಸಾಕ್ಷ್ಯಗಳನ್ನು ನಾಶವಾಗಲು ಅನುವು ಮಾಡಿಕೊಟ್ಟಂತೆ ಆದ ಘಟನೆ ಎಲ್ಲರಲ್ಲಿಯೂ ಅನುಮಾನ ಮೂಡಿಸಿದೆ. ಸದ್ಯ ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದ್ದು, ವೈದ್ಯೆಯ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವುದು ತುಳುನಾಡು ನ್ಯೂಸ್ ಆಶಯ.
Leave A Reply