ರಿಷಬ್ ಶೆಟ್ಟಿ ಇನ್ನು ಛತ್ರಪತಿ ಶಿವಾಜಿ!
ಈಗಾಗಲೇ ಕನ್ನಡ ಭಾಷೆಯಲ್ಲಿ ಹಲವು ಸಿನೆಮಾಗಳನ್ನು ನಿರ್ದೇಶಿಸಿ, ನಟಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೂ ಕಾಂತಾರಾ ಸಿನೆಮಾದಿಂದ ಖ್ಯಾತಿಯ ತುದಿಗೇರಿರುವ ರಿಷಬ್ ಶೆಟ್ಟಿಯವರು ಈಗಾಗಲೇ ಕಾಂತಾರಾ ಪ್ರೀಕ್ವೆಲ್ ನಲ್ಲಿ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಇಡೀ ಭಾರತಾದ್ಯಂತ ಪ್ರಸಿದ್ಧರಾಗಿರುವುದರಿಂದ ಅವರನ್ನು ಸಹಜವಾಗಿ ಬಾಲಿವುಡ್ ಕೂಡ ತನ್ನ ಸಿನೆಮಾದಲ್ಲಿ ನಟಿಸಲು ಕಾತರದಿಂದ ಕಾಯುತ್ತದೆ. ಈಗ ಆ ನಿರೀಕ್ಷೆ ಈಡೇರಿದೆ.
ತೆಲುಗಿನ ಜೈ ಹನುಮಾನ್ ಸಿನೆಮಾಗೆ ಓಕೆ ಹೇಳಿರುವ ರಿಷಬ್ ಈಗ ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾಗೂ ಜೈ ಎಂದಿದ್ದಾರೆ. ಈ ಐತಿಹಾಸಿಕ ವ್ಯಕ್ತಿಯ ಕತೆಯುಳ್ಳ ಬಾಲಿವುಡ್ ಸಿನೆಮಾವನ್ನು ಸಂದೀಪ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಈ ಕುರಿತು ಮಾತನಾಡಿದ ಅವರು ” ಈ ಸಿನೆಮಾ ಮಾಡುವುದು ನನ್ನ ಬಹುಕಾಲದ ಕನಸು. ಛತ್ರಪತಿ ಶಿವಾಜಿ ಪಾತ್ರಕ್ಕೆ ರಿಷಬ್ ಶೆಟ್ಟಿಯವರೇ ನನ್ನ ಏಕೈಕ ಆಯ್ಕೆಯಾಗಿದ್ದರು. ಸಿನೆಮಾದ ತಂತ್ರಜ್ಞಾನ ಬಹಳ ಅತ್ಯುತ್ತಮವಾಗಿ ಮೂಡಿಬರಲಿದೆ” ಎಂದು ಅವರು ಹೇಳಿದರು.
ಈ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿಯವರು ” ದಿ ಫ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾವನ್ನು ನಿರ್ದೇಶಕ ಸಂದೀಪ್ ಸಿಂಗ್ ಕಲ್ಪಿಸಿಕೊಂಡಿರುವ ರೀತಿ ಅದ್ಭುತವಾಗಿದೆ. ಆದ್ದರಿಂದ ತಕ್ಷಣ ಒಪ್ಪಿಕೊಂಡು ಬಿಟ್ಟಿದ್ದೇನೆ. ಶಿವಾಜಿ ಮಹಾರಾಜರು ರಾಷ್ಟ್ರೀಯ ಹೀರೋ. ಅಂತಹ ಮಹಾನ್ ನಾಯಕನ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ದೊರಕಿದ ಶ್ರೇಷ್ಟ ಅವಕಾಶ ಮತ್ತು ಗೌರವ” ಎಂದು ಹೇಳಿದ್ದಾರೆ.
ದಿ ಫ್ರೈಡ್ ಆಫ್ ಭಾರತ್ : ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾ 2027 ಜನವರಿ 21 ರಂದು ವಿಶ್ವಮಟ್ಟದಲ್ಲಿ ಬಿಡುಗಡೆಯಾಗಲಿದೆ.
Leave A Reply