ಪೊಲೀಸರಿಗೆ ಫಿಟ್ನೆಸ್ ಇಲ್ಲದಿದ್ದರೆ ” ಸ್ಪೆಶಲ್ ಡ್ಯೂಟಿ”!
ಪೊಲೀಸರು ಅಂದರೆ ಸಿನೆಮಾಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿರುವ ಹೀರೋಗಳಂತೆ ಇರುತ್ತಾರಾ ಎಂದರೆ ಸಿನೆಮಾ ಬೇರೆ, ನಿಜ ಜೀವನ ಬೇರೆ ಎಂಬ ಮಾತು ಬರಬಹುದು. ಆದರೆ ಇನ್ನು ಪೊಲೀಸರು ಕೂಡ ಫಿಟ್ ಆಗಿ ಇರಬೇಕು ಎನ್ನುವ ಗುರಿ ಇಟ್ಟುಕೊಂಡು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ( ತರಬೇತಿ) ಅಲೋಕ್ ಕುಮಾರ್ ಅವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಪ್ರಕಾರ ತೂಕ ಹೊಂದದೆ ಹೆಚ್ಚುವರಿ ತೂಕ ಇರುವವರನ್ನು ಹೊಸ ವರ್ಷದಿಂದ “ವಿಶೇಷ ಕರ್ತವ್ಯ” ಕ್ಕೆ ನಿಯೋಜಿಸಲು ತಯಾರಿ ನಡೆಸಲಾಗಿದೆ. ಆದರೆ ಇದು ಸದ್ಯಕ್ಕೆ ಪೊಲೀಸ್ ಟ್ರೈನಿಂಗ್ ಸೆಂಟರ್ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಅನ್ವಯವಾಗಲಿದೆ. ಪೊಲೀಸ್ ಟ್ರೈನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚು ಫಿಟ್ ಆಗಿರುವ ಮೂಲಕ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ, ಸಿಬ್ಬಂದಿಗೆ ಮಾದರಿಯಾಗಿರಬೇಕು. ಆದರೆ ಇದು ಆಗದೇ ಇರುವುದರಿಂದ ಅಲೋಕ್ ಕುಮಾರ್ ಕಠಿಣ ತರಬೇತಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳಿಗೆ ಆರು ತಿಂಗಳ ಮೊದಲೇ ಬಿಎಂಐ ಸರಿಪಡಿಸಲು ಸೂಚಿಸಲಾಗಿತ್ತು. ಅನೇಕರು ಫಿಟ್ನೆಸ್ ಕಾಪಾಡಿಕೊಂಡಿಲ್ಲ. ಅಂತವರಿಗೆ ಬೇರೆ ಕಡೆ ಸೇವೆಗೆ ನಿಯೋಜಿಸಲಾಗುವುದು. ಅವರ ಬಿಎಂಐ ಸರಿಯಾದ ನಂತರ ಮತ್ತೆ ಮೂಲ ವಿಭಾಗಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
Leave A Reply