• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪತ್ನಿಗೆ ಜೀವನಾಂಶ ಒತ್ತಡ: ಉದ್ಯಮಿ ಆತ್ಮಹತ್ಯೆಗೆ ಶರಣು!

Tulunadu News Posted On January 1, 2025


  • Share On Facebook
  • Tweet It

ಬೆಂಗಳೂರಿನ ಐಟಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ದೆಹಲಿಯ ಉದ್ಯಮಿಯವರು ಅದೇ ಹಾದಿ ಹಿಡಿದಿದ್ದು, ಎರಡು ಸಾವಿನ ಪ್ರಕರಣಗಳಲ್ಲಿಯೂ ಅನೇಕ ಸ್ವಾಮ್ಯತೆ ಕಂಡುಬಂದಿದೆ. 40 ವರ್ಷದ ದೆಹಲಿಯ ಕಲ್ಯಾಣ್ ವಿಹಾರದ ನಿವಾಸಿ ಪುನೀತ್ ಖುರಾನಾ ಆತ್ಮಹತ್ಯೆಗೆ ಶರಣಾಗಿರುವ ರೀತಿ ಮಾತ್ರ ನಿಜಕ್ಕೂ ವಿಚ್ಚೇದನ ಮತ್ತು ಜೀವನಾಂಶದ ವಿಷಯದಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಸೃಷ್ಟಿಸಿದೆ. ಇವರ ಕೌಟುಂಬಿಕ ಮಿತ್ರ ಜತಿನ್ ಖನ್ನಾ ಅವರು ಈ ಬಗ್ಗೆ ಮಾಹಿತಿ ನೀಡಿ ಯಾವ ರೀತಿಯಲ್ಲಿ ಪುನೀತ್ ಖುರಾನಾ ಅಂತ್ಯಕ್ಕೆ ಕಾರಣಗಳ ಬಗ್ಗೆ ಹೇಳಿದ್ದಾರೆ. ಆ ಏಳು ಅಂಶಗಳು ನಿಜಕ್ಕೂ ಚಿಂತನೆಗೆ ಒಳಗಾಗುವಂತಹ ವಿಷಯಗಳು.

1. ಅಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆಯ ಮುನ್ನ ಒಂದೂವರೆ ಗಂಟೆಯ ವಿಡಿಯೋ ಮಾಡಿದಂತೆ ಇಲ್ಲಿ ಪುನೀತ್ ಖುರಾನಾ ಕೂಡ 55 ನಿಮಿಷದ ವಿಡಿಯೋ ಮಾಡಿದ್ದಾರೆ. ಆದರೆ ಇಲ್ಲಿ ಈ ವಿಡಿಯೋ ಪಬ್ಲಿಕ್ ಆಗುವ ಮೊದಲೇ ಪೊಲೀಸರ ವಶದಲ್ಲಿದ್ದು, ಅವರು ಅದನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

2. ವೈವಾಹಿಕ ಜೀವನ ಸರಿ ಹೋಗದ ಹಿನ್ನಲೆಯಲ್ಲಿ ಖುರಾನಾ ಮತ್ತು ಅವರ ಪತ್ನಿ ವಿಚ್ಚೇದನದ ಮೊರೆ ಹೋಗಿದ್ದು, ಅದರ ಕಾನೂನಾತ್ಮಕ ಪ್ರಕ್ರಿಯೆಗಳು ಕಳೆದ ಸೆಪ್ಟೆಂಬರ್ ನಿಂದ ಆರಂಭವಾಗಿದ್ದವು. ಈ ಅವಧಿಯಲ್ಲಿ ಇವರ ಪತ್ನಿಯ ಜೀವನಾಂಶದ ಬೇಡಿಕೆಗಳು ದಿನ ಹೋದಂತೆಲ್ಲಾ ಹೆಚ್ಚಾಗುತ್ತಾ ಇದ್ದವು. ಇದರಿಂದ ಪುನೀತ್ ಇನ್ನಷ್ಟು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು.

3. ಪುನೀತ್, ಆಹಾರ ಪೂರೈಕೆ ಮಾಡುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, 2016 ರಲ್ಲಿ ಇವರದ್ದು ವಿವಾಹ ನಡೆದಿತ್ತು. ಪ್ರೀತಿಸಿ ಮದುವೆಯಾದ ಯುವತಿಯನ್ನು ವ್ಯವಹಾರಿಕ ಪಾಲುದಾರರಾಗಿ ಕೂಡ ಮಾಡಿದ್ದರು. ಆಕೆ ವಿಚ್ಚೇದನದ ಪ್ರಕ್ರಿಯೆ ನಡೆಯುವಾಗ ಹೆಚ್ಚೆಚ್ಚು ಪಾಲು ವ್ಯವಹಾರದ ಲಾಭದಲ್ಲಿಯೂ ಬೇಡಿಕೆ ಇಡುತ್ತಿದ್ದಳು. ಅದು ಇನ್ನಷ್ಟು ಚಿಂತೆಗೆ ಪುನೀತ್ ಅವರನ್ನು ಒಳಪಡಿಸಿತ್ತು.

4. ಇತ್ತ ಪುನೀತ್ ಖುರಾನಾ ಮತ್ತು ಅವರ ಪತ್ನಿಯ ವಿಚ್ಚೇದನದ ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅತ್ತ ಆಕೆಯ ಸಹೋದರಿ ಕೂಡ ತನ್ನ ಗಂಡನಿಗೆ ವಿಚ್ಚೇದನ ಕೊಡಲು ತಯಾರಾಗಿದ್ದು, ಅದು ಕೂಡ ಚಾಲ್ತಿಯಲ್ಲಿತ್ತು. ಆಕೆಯ ಸಹೋದರಿಗೆ ವಿಚ್ಚೇದನದಿಂದ ಗಂಡನ ಆಸ್ತಿಯ ಪಾಲೊಂದು ಅನಾಯಾಸವಾಗಿ ಸಿಗಲಿದ್ದು, ತನಗೂ ಆಕೆ ದೊಡ್ಡ ಆಸ್ತಿಯೊಂದು ದೊರಕಬೇಕೆಂದು ಖುರಾನಾ ಪತ್ನಿಯ ಮನದಿಚ್ಚೆಯಾಗಿತ್ತು.

5. ಸದ್ಯ ಪೊಲೀಸರು ಪುನೀತ್ ಹೆತ್ತವರಿಂದ ಮತ್ತು ಪತ್ನಿಯಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಯಾರ ವಿರುದ್ಧವೂ ಇಲ್ಲಿಯ ತನಕ ಪ್ರಕರಣ ದಾಖಲಿಸಿಲ್ಲ.

6. ಕುತ್ತಿಗೆಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸಾಯುವ ಮೊದಲು ಯಾವುದೇ ಸಂಘರ್ಷ ನಡೆದಿರುವ ಕುರುಹುಗಳಿಲ್ಲ. ಆದ್ದರಿಂದ ಇದು ಅವರ ಸ್ವನಿರ್ಧಾರದಂತೆ ಕಂಡುಬಂದಿದೆ.

7. ಸಾಯುವ ಮುನ್ನ ಕೊನೆಯ ಬಾರಿ ಪತ್ನಿಯೊಂದಿಗೆ ಮಾತನಾಡಿದ ಆಡಿಯೋ ಒಂದು ಈಗ ಹೊರಪ್ರಪಂಚಕ್ಕೆ ಈ ಘಟನೆಯ ಅಗಾಧತೆಯನ್ನು ವಿವರಿಸಿದೆ.

ಈ ನಡುವೆ ಖುರಾನಾ ಸಂಬಂಧಿಕರು ಈ ಸಾವಿಗೆ ಆತನ ಪತ್ನಿ ಮತ್ತು ಆಕೆಯ ಪೋಷಕರನ್ನು ಹೊಣೆಗಾರರನ್ನಾಗಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಬಿಷಮ್ ಸಿಂಗ್ ” ಮೃತರ ತಂದೆ ತ್ರಿಲೋಕ್ ನಾಥ್ ಅವರು ಮಗನ ಮೊಬೈಲ್ ಫೋನ್ ಮತ್ತು ಸಂಬಂಧಿತ ವಸ್ತುಗಳನ್ನು ಪೊಲೀಸರಿಗೆ ನೀಡಿದ್ದಾರೆ. ಅದೀಗ ಪೊಲೀಸ್ ವಶದಲ್ಲಿದೆ. ಪೋಸ್ಟ್ ಮಾರ್ಟ್ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಡಿಸೆಂಬರ್ 31 ರಂದು 4.18 ರ ಸುಮಾರಿಗೆ ಸಾವು ಸಂಭವಿಸಿರಬಹುದು. ಮಾಹಿತಿ ಬಂದ ತಕ್ಷಣ  ಪೊಲೀಸ್ ತಂಡ ಅಲ್ಲಿ ಧಾವಿಸಿದೆ, ಆದರೆ ಅಷ್ಟೋತ್ತಿಗಾಗಲೇ ಮೃತದೇಹವನ್ನು ಬೆಡ್ ಮೇಲೆ ಮಲಗಿಸಲಾಗಿತ್ತು. ಕುತ್ತಿಗೆಯಲ್ಲಿ ನೇಣು ಬಿಗಿದ ಗುರುತು ಇತ್ತು”
ಈ ಬಗ್ಗೆ ಖುರಾನಾ ತಂದೆ ಮಾತನಾಡಿ ” ಸೊಸೆ ನಿತ್ಯ ಎನ್ನುವಂತೆ ಮಗನಿಗೆ ಮಾನಸಿಕವಾಗಿ ಒತ್ತಡ ಹಾಕುತ್ತಿದ್ದಳು. ಆರ್ಥಿಕವಾಗಿ ಮತ್ತು ಆಸ್ತಿಯ ವಿಷಯದಲ್ಲಿ ಅವಳ ಒತ್ತಡದ ಕಾರಣದಿಂದ ಮಗ ಸಾವಿಗೆ ಶರಣಾಗಿದ್ದಾನೆ.” ಖುರಾನಾ ಸಹೋದರಿ ಕೂಡ ಅತ್ತಿಗೆಯ ಮನೆಯವರ ಕಿರುಕುಳ ಮತ್ತು ಅತ್ತಿಗೆಯ ಕಿರಿಕಿರಿಯಿಂದ ಅಣ್ಣ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search