ಮಧುಮೇಹಿಗಳಿಗೆ ಸಿಹಿ ಸುದ್ದಿ! ಇನ್ನು ಮಾತ್ರೆಗೆ ಅಷ್ಟು ಹಣ ಕೊಡಬೇಕಿಲ್ಲ!

ಭಾರತವನ್ನು ಮಧುಮೇಹಿಗಳ ತವರೂರು ಎನ್ನುವ ನೋವಿನ ಹಣೆಪಟ್ಟಿ ಭಾರತೀಯರಿಗೆ ಸಿಕ್ಕಿದೆ. ಡಯಾಬೀಟಿಸ್ ಕಾಯಿಲೆ ಬರದಿರಲಿ ಎಂದು ಬೇಡುವವರಿಗೇನೂ ತೊಂದರೆ ಇಲ್ಲ. ಬಹುತೇಕರು ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಮಾತ್ರೆಗಳನ್ನು ತಿನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಫ್ಲೋಜಿನ್ ಮಾತ್ರೆಗೆ ಈ ಮೊದಲು 60 ರೂಪಾಯಿ ಇತ್ತು. ಆದರೆ ಎಂಪಾಗ್ಲಿಪ್ಲೋಜಿನ್ ಔಷಧದ ತಯಾರಿಕಾ ಕಂಪೆನಿಯಾದ ಬೋರಿಂಜರ್ ಇಂಗ್ಲ್ ಹೈಂ (ಬಿಐ) ಹೊಂದಿದ ಪೇಟೆಂಟ್ ಅವಧಿ ಮಾರ್ಚ್ ಗೆ ಮುಕ್ತಾಯವಾಗಿದೆ.
ಹೀಗಾಗಿ ಹಲವು ಕಂಪೆನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿವೆ. ಇದರ ಪರಿಣಾಮ ಔಷಧಗಳ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಟ್ಟು ದರ ಪಾತಾಳ ತಲುಪಿದೆ. ಪ್ರಸ್ತುತ ಒಂದು ಮಾತ್ರೆಗೆ ಐದು ರೂಪಾಯಿಯಿಂದ ದರ ಆರಂಭವಾಗಿದೆ. ಇದರಿಂದ ಭಾರತದ ಕೋಟ್ಯಾಂತರ ನಾಗರಿಕರಿಗೆ ಉಪಯೋಗವಾಗಲಿದೆ. ಇಲ್ಲಿಯ ತನಕ ಪಾಪದವರ ದುಡಿಯುವ ಗಮನಾರ್ಹ ಮೊತ್ತ ಈ ಮಾತ್ರೆಗಳಿಗೆ ತಗಲುತ್ತಿತ್ತು. ಇನ್ನು ಅದು ಉಳಿತಾಯವಾಗಲಿದೆ. ದೆಹಲಿ ಮೂಲದ ಕಂಪೆನಿ ಮ್ಯಾನ್ ಕ್ಲೈಂಡ್ ಇದರ ಬೆಲೆಯನ್ನು ಐದೂವರೆ ರೂಪಾಯಿಯಿಂದ ಆರಂಭಿಸಿದ್ದರೆ ಮುಂಬೈ ಮೂಲದ ಗ್ಲೆನ್ ಮಾರ್ಕ್ 11 ರೂಪಾಯಿಯಿಂದ ಆರಂಭಿಸಿದೆ. ಇನ್ನು ಆಲ್ಕೆಂ ಕಂಪೆನನಿಯು ಮೂಲ ದರಕ್ಕಿಂತ 80 ಶೇಕಡಾ ಕಡಿಮೆ ದರವನ್ನು ನಿಗದಿಪಡಿಸಿದೆ.
ಒಟ್ಟಿನಲ್ಲಿ ವಿಷಯ ಚಿಕ್ಕದಿದ್ದರೂ ಇದರ ಪ್ರಯೋಜನ ಮಾತ್ರ ದೊಡ್ಡದು. ಒಂದು ಸಂಸ್ಥೆಗೆ ಪೇಟೆಂಟ್ ಇದ್ದರೆ ಅದರ ದರ ಹೇಗಿರುತ್ತದೆ ಮತ್ತು ಪೇಟೆಂಟ್ ಇಲ್ಲದಿದ್ದರೆ ಬಡವರಿಗೆ ಎಷ್ಟು ಲಾಭವಾಗುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
Leave A Reply