ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!

ಕರ್ನಾಟಕದ ಹಾವೇರಿಯಲ್ಲಿ ಸರಕಾರಿ ಬಸ್ಸಿನ ಚಾಲಕ ಮಾಡಿದ ಕೃತ್ಯದಿಂದ ಆ ಬಸ್ಸಿನಲ್ಲಿದ್ದ ಜನ ಅವಕ್ಕಾಗಿದ್ದಾರೆ. ಏನು ಮಾಡಬೇಕೆಂದು ತೋಚದೇ ಅದನ್ನು ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಅಷ್ಟಕ್ಕೂ ಆದದ್ದೇನು?
ಅದು ಹಾನಗಲ್ ನಿಂದ ವಿಶಾಲಗಡ್ ಈ ಊರುಗಳ ನಡುವೆ ಚಲಿಸುವ ಸರಕಾರಿ ಬಸ್. ಕೆಲವು ಬಸ್ ಗಳಲ್ಲಿ ಇರುವ ಹಾಗೆ ಆ ಬಸ್ಸಿನಲ್ಲಿ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರ ಕೆಲಸವನ್ನು ಒಬ್ಬನೇ ನಿರ್ವಹಿಸಲಾಗುತ್ತಿತ್ತು. ಆ ಬಸ್ಸಿನ ಚಾಲಕ ಕಂ ನಿರ್ವಾಹಕ ಮಂಗಳವಾರ ಸಂಜೆ ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗದ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾರೆ. ನಮಾಜ್ ಸಮಯಕ್ಕೆ ಸರಿಯಾಗಿ ಕರ್ತವ್ಯದಲ್ಲಿದ್ದಾಗಲೇ ತಕ್ಷಣ ಗಾಡಿಯನ್ನು ರಸ್ತೆ ಪಕ್ಕಕ್ಕೆ ಹಾಕಿದವರೇ ಅಲ್ಲಿಯೇ ನಮಾಜ್ ಮಾಡಿದ್ದಾರೆ.
ಕರ್ತವ್ಯದ ಅವಧಿಯಲ್ಲಿ ವಾಹನವನ್ನು ನಿಲ್ಲಿಸಿ ಹೀಗೆ ಮಾಡಿದ್ದು ಸರಿಯಾ, ಸರಕಾರಿ ಉದ್ಯೋಗಿಯಾದವರು ಹೀಗೆ ಜನರಿಗೆ ತೊಂದರೆ ನೀಡಬಹುದಾ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.
ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಕ್ರಮ ತೆಗೆದುಕೊಳ್ಳುತ್ತಾ ಎನ್ನುವುದು ಪ್ರಶ್ನೆ. ಯಾಕೆಂದರೆ ಕ್ರಮ ತೆಗೆದುಕೊಂಡು ಅಮಾನತು ಸಹಿತ ಏನಾದರೂ ಮಾಡಿದರೆ ಮುಸ್ಲಿಮರು ಬೇಸರಗೊಳ್ಳುತ್ತಾರೆ ಎನ್ನುವುದು ಗೊತ್ತಿರುವುದರಿಂದ ಮುಂದೇನು ಎನ್ನುವುದು ಆ ಬಸ್ಸಿನಲ್ಲಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಪ್ರಶ್ನೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಮುಸ್ಲಿಂ ಚಾಲಕರು ಇರುವ ಬಸ್ಸುಗಳಲ್ಲಿ ಅವರೆಲ್ಲರೂ ಇದನ್ನೇ ಅನುಸರಿಸಿದರೆ ಏನು ಎನ್ನುವ ಅನುಮಾನವೂ ಇದೆ.
Leave A Reply