• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ – ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!

Tulunadu News Posted On May 30, 2025
0


0
Shares
  • Share On Facebook
  • Tweet It

ಆಂಧ್ರಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನೀತಿ ಆಯೋಗದ ಸಭೆಯ ಬಳಿಕ ಮಾತನಾಡಿ ತಾವು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 500 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದ್ದು, ದೇಶದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ದೊಡ್ಡ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವುದೊಂದೇ ಪರಿಹಾರ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

ಕಡಪದಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಇದರ ಮಹಾ ಸಮ್ಮೇಳನದಲ್ಲಿ ಮಾತನಾಡಿದ ನಾಯ್ಡು 2016 ರಲ್ಲಿ ಮೋದಿಯವರು 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ಅಮ್ಯಾನೀಕರಣಗೊಳಿಸಿದ ಸಂದರ್ಭದಲ್ಲಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರುವಂತೆ ತಾವೇ ಸಲಹೆ ನೀಡಿದ್ದಾಗಿ ಹೇಳಿದರು. ಆಗ ಎನ್ ಡಿಎ ಸಂಚಾಲಕರಾಗಿದ್ದ ಚಂದ್ರಬಾಬು ನಾಯ್ಡು ವಿವಿಧ ಎನ್ ಡಿಎ ಮುಖ್ಯಮಂತ್ರಿಗಳ, ತಜ್ಞರ ಹಾಗೂ ಎನ್ ಡಿಎ ರಚಿಸಲು ಕಾರಣೀಕರ್ತರಾಗಿರುವ ಹಲವರ ನಿಯೋಗವನ್ನು ರಚಿಸಿ, ನೀತಿ ನಿಯೋಗದ ಸಹಕಾರದಲ್ಲಿ ಒಂದು ಕಾರ್ಯಯೋಜನೆಯನ್ನು ಸಿದ್ಧಪಡಿಸಿದ್ದರು. ಅದು ಶೀಘ್ರ ಹಣ ವಿಲೇವಾರಿಯನ್ನು ನೋಟಿನ ಹಣದ ಕೈಬದಲಾವಣೆ ಇಲ್ಲದೇ ಮಾಡಬಹುದು ಎನ್ನುವ ಕಾರ್ಯಸೂಚಿ ರಚಿಸಲಾಗಿತ್ತು.

ಅದರ ನಂತರ ತಾವು ಮೋದಿಯವರನ್ನು ಭೇಟಿಯಾಗಿ ಡಿಜಿಟಲ್ ಕರೆನ್ಸಿ ಇರುವಾಗ ಈ 500 ಹಾಗೂ 2000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬ್ಯಾನ್ ಮಾಡಬೇಕು. ರಾಜಕೀಯದಲ್ಲಿಯೂ ಹಣ ಹಂಚುವುದು ನಿಲ್ಲಬೇಕು ಎಂದು ತಿಳಿಸಿದ್ದೆ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ ನಾಯ್ಡು ನನ್ನ ಮಾತಿಗೆ ಒಪ್ಪಿಗೆ ಇದ್ರೆ, ಪ್ರೋತ್ಸಾಹದ ಕರತಾಡನ ಮಾಡಿ ಎಂದು ಕೇಳಿಕೊಂಡರು. ಅದಕ್ಕೆ ಸಮಾವೇಶದಲ್ಲಿ ಚಪ್ಪಾಳೆಗಳು ಕಿಕ್ಕಿರಿದು ಮೊಳಗಿದವು. ಅದರಲ್ಲಿ ಸಂತೃಪ್ತರಾದ ನಾಯ್ಡು ” ಇದು ಒಂದೇ ಭ್ರಷ್ಟ್ರಾಚಾರ ತೊಲಗಿಸಲು ದಾರಿ” ಎಂದರು.

ಇನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಕೂಡ ಡಿಜಿಟಲ್ ಕರೆನ್ಸಿ ಮೂಲಕ ನೀಡಿದರೆ ಆಗ ಪಕ್ಷದಲ್ಲಿಯೂ ಪಾರದರ್ಶಕತೆ ಇರುತ್ತದೆ ಎಂದು ಅವರು ಹೇಳಿದರು.

ನಾವು ಆಡಳಿತದಲ್ಲಿ ಪಾರದರ್ಶತೆಗಾಗಿ ಶ್ರಮಿಸುತ್ತಾ ಬಂದಿದ್ದೇವೆ. ಅದು ಹೊರವರ್ತುಲದ ರಿಂಗ್ ರೋಡ್ ನಿಂದ ಹಿಡಿದು ಓಬಲಾಪುರಂ ಇಲ್ಲಿನ ಗಣಿಗಾರಿಕೆ ಇರಬಹುದು. ನಾವು ದಶಕದ ಹಿಂದೆ ಓಬಲಾಪುರಂ ಗಣಿಗಾರಿಕೆ ವಿರುದ್ಧ ಅಭಿಯಾನ ಆರಂಭಿಸಿದಾಗ ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಆದರೆ ಈಗ ದಶಕದ ಬಳಿಕ ನ್ಯಾಯಾಲಯ ಕೂಡ ಅಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿದೆ. ನಮ್ಮ ಅಂದಿನ ಹೋರಾಟಗಳೇ ಈಗ ದೇಶದ ಜನರ ಕಣ್ಣು ತೆರೆಸಿವೆ” ಎಂದು ಹೇಳಿದ ನಾಯ್ಡು ನಮ್ಮ ಹೋರಾಟದ ಫಲಶ್ರುತಿಯಾಗಿ ಸಿಬಿಐ ನ್ಯಾಯಾಲಯ ನಾಲ್ಕು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ವಿಧಿಸುವಂತಾಯಿತು. ಅದರಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ ಸೇರಿದ್ದಾರೆ ಎಂದರು.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search