ಗೋ ರಕ್ಷಣೆ ಹೆಸರಲ್ಲಿ ಹತ್ಯೆ ಆರೋಪ: ಆರು ಜನರ ವಿರುದ್ಧದ ಪ್ರಕರಣ ಖುಲಾಸೆ
Posted On September 14, 2017

ಜೈಪುರ: ಹರಿಯಾಣದ ಮುಸ್ಲಿಂ ವ್ಯಕ್ತಿ ಪೆಹ್ಲು ಖಾನ್ ಜೈಪುರದಿಂದ ತನ್ನ ಮನೆಗೆ ಗೋಮಾಂಸ ಸಾಗುತ್ತಿದ್ದ ವೇಳೆ ಹಿಂದೂ ಗೋ ರಕ್ಷಕರು ಹಲ್ಲೆ ಮಾಡಿದ್ದಾಾರೆ ಎಂಬ ಪ್ರಕರಣದಲ್ಲಿ ಆರು ಜನರ ವಿರುದ್ಧದ ವಿಚಾರಣೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಜೈಪುರದಿಂದ ತನ್ನ ಊರಿಗೆ ಗೋಮಾಂಸ ಸಾಗಿಸುತ್ತಿದ್ದ ವೇಳೆ ಅಲ್ವಾರ್ ಬಳಿ ಪೆಹ್ಲು ಖಾನ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ಈಗ ಸಾಕ್ಷ್ಯಗಳ ಕೊರತೆ ಹಿನ್ನೆೆಲೆಯಲ್ಲಿ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಓಂ ಯಾದವ್ (45), ಸುಧಿರ್ ಯಾದವ್ (45), ಹುಕುಂ ಚಾಂದ್ ಯಾದವ್ (44), ಜಗ್ಮಲ್ ಯಾದವ್ (73), ನವೀನ್ ಶರ್ಮಾ (48) ಹಾಗೂ ರಾಹುಲ್ ಸೈನಿ (24) ವಿರುದ್ಧದ ಪ್ರಕರಣ ಕೈಬಿಡಲಾಗಿದೆ ಎಂದು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಆರು ಆರೋಪಿಗಳಲ್ಲಿ ಮೂವರು ಹಿಂದೂ ಸಂಘಟನೆಗಳಿಗೆ ಸೇರಿದವರು ಎಂದು ತಿಳಿದುಬಂದಿದೆ.
- Advertisement -
Leave A Reply