ಧರ್ಮಗಳ ನಡುವೆ ಗೆರೆ ಎಳೆಯದಿರಿ: ಮಮತಾ ಬ್ಯಾನರ್ಜಿಗೆ ಹೈಕೋರ್ಟ್ ಚಾಟಿ
Posted On September 21, 2017
ಕೋಲ್ಕತಾ: ವಿಜಯ ದಶಮಿ (ಸೆ.30) ದಿನದಂದು ಆಯುಧ ಮೆರವಣಿಗೆ ಮಾಡಬಾರದು ಎಂದು ಆದೇಶ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದ್ದು, ಧರ್ಮಗಳ ನಡುವೆ ಗೆರೆ ಎಳೆಯದಿರಿ ಎಂದು ಕೋಲ್ಕತಾ ಹೈಕೋರ್ಟ್ ಆದೇಶಿಸಿದೆ.
ಸರಕಾರದ ಆದೇಶ ಖಂಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಕೇಶ್ ತಿವಾರಿ, “ಹಿಂದೂ ಇರಲಿ, ಮುಸ್ಲಿಂ ಇರಲಿ. ಅವರ ಸಂಪ್ರದಾಯಗಳ ಅನ್ವಯ ಆಚರಣೆ ಮಾಡಲು ಬಿಡಿ. ಧರ್ಮಗಳ ನಡುವೆ ಮೂಗು ತೂರಿಸಬೇಡಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲ ಧರ್ಮೀಯರು ಅವರ ಆಚರಣೆ ಅನುಸರಿಸುತ್ತ ಸಾಮರಸ್ಯದಿಂದ ಬಾಳಲು ಬಿಡಬೇಕು. ಸರಕಾರ ತನ್ನ ಅಸಮರ್ಥತೆ ಮುಚ್ಚಿಡಲು ಇಂಥ ನಿಬಂಧನೆ ಹೇರುತ್ತಿದೆ ಎಂದು ಸಹ ಚಾಟಿ ಬೀಸಿದ್ದಾರೆ.
ವಿಜಯ ದಶಮಿ ದಿನ ಬೆಳಗ್ಗೆ 10 ಗಂಟೆಯಿಂದ ಹಾಗೂ ಮೊಹರಂ ಹಿನ್ನೆಲೆ ಅಕ್ಟೋಬರ್ 1ರಂದು ಆಯುಧಗಳ ಮೆರವಣಿಗೆ ಮಾಡುವಂತಿಲ್ಲ ಎಂದು ಮಮತಾ ಬ್ಯಾನರ್ಜಿ ಆದೇಶಿಸಿದ್ದರು.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply