ಈ ನಟಿ ರಾಹುಲ್ ಗಾಂಧಿ ಗರ್ಲ್ ಫ್ರೆಂಡಾ?
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ಹೊರಟು ನಿಂತರೆಂದರೆ ಸಾಕು, ಅವರ ಗರ್ಲ್ ಫ್ರೆಂಡ್, ಗೆಳತಿಯರ ಬಗ್ಗೆ ಊಹಾಪೋಹಗಳ ಬಗ್ಗೆ ಗಾಳಿ ಮಾತುಗಳು ಕೇಳಿಬರಲು ಆರಂಭವಾಗುತ್ತವೆ. ಆದರೆ ಕಳೆದ ವಾರ ಅಮೆರಿಕ ವಿವಿಯಲ್ಲಿ ಮಾತನಾಡಿದಾಗ ರಾಹುಲ್ ಗಾಂಧಿ ಸೀರಿಯಸ್ಸಾದರೂ ಎಂಬಂತೆ ಕಂಡು ಬಂದರು.
ಆದರೆ ಅದು ಸುಳ್ಳಾಗಿದೆ…
ಸ್ಪ್ಯಾನಿಶ್ ನಟಿ ನಥಾಲಿಯಾ ರಾಮೋಸ್ ಎಂಬಾಕೆ ರಾಹುಲ್ ಗಾಂಧಿ ಜತೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೋವನ್ನು ಆ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವುದು ಹಲವು ಅನುಮಾನ ಹುಟ್ಟುಹಾಕಿದೆ. ಆದಾಗ್ಯೂ, ರಾಮೋಸ್ ರಾಹುಲ್ ಗಾಂಧಿ ಪ್ರೇಯಸಿಯೇ ಎಂಬ ವದಂತಿ ಹರಡುತ್ತಿರುವುದು ಸಹ ನಿರೀಕ್ಷೆ, ನಾನಾ ಅಂದಾಜಿಗೆ ಕಾರಣವಾಗಿದೆ.
ಅಷ್ಟೇ ಅಲ್ಲ, ರಾಮೋಸ್ ಫೋಟೋ ಜತೆಗೆ, “ರಾಹುಲ್ ಗಾಂಧಿ ಒಬ್ಬ ಅದ್ಭುತ ಚಿಂತಕ. ಜತೆಗೆ ಅವರ ಹೃದಯವೈಶಾಲ್ಯವೂ ಅಪಾರ” ಎಂದು ಫೋಟೋಗೆ ಒಕ್ಕಣೆ ಹಾಕಿರುವುದು ಸಹ, ರಾಮೋಸ್, ರಾಹುಲ್ ಗಾಂಧಿಯ ವಿಶಾಲ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಮಾತಿಗೆ ಪುಷ್ಟಿ ನೀಡುವಂತಿದೆ.
ಅದೇನೇ ಇದ್ದರೂ ರಾಹುಲ್ ಗಾಂಧಿಯಂತೂ ಆಗಾಗ ಅಮೆರಿಕಕ್ಕೆ ಹೋಗಿ ಮಜಾ ಮಾಡಿ ಬರುವುದಂತೂ ಸುಳ್ಳಲ್ಲ. ಅದಕ್ಕೆ ನಟಿಯೊಂದಿಗಿನ ಫೋಟೋವೇ ಸಾಕ್ಷಿ!
Leave A Reply