ಆಳ್ವಾಸ್ ವಿರುದ್ಧ ನಡೆದ ಪ್ರತಿಭಟನೆ ಯುನಿಟಿ ಆಸ್ಪತ್ರೆ ವಿರುದ್ಧ ಯಾಕಿಲ್ಲ?
ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಾಗ ಆಳ್ವಾಸ್ ಕಾಲೇಜಿನ ವಿರುದ್ಧ ಧ್ವನಿ ಎತ್ತಿದ ಸಂಘಟನೆಗಳು, ವ್ಯಕ್ತಿಗಳೇ ಈಗ ಸ್ಫೂರ್ತೀ ಸತ್ತಾಗ ಯಾಕೆ ಮೌನವಾಗಿದ್ದಿರಿ. ಯಾಕೆ ಸ್ಫೂರ್ತಿ ಹೆಣ್ಣುಮಗಳಲ್ಲವೇ? ಅವಳದ್ದು ಕೂಡ ಬಡಕುಟುಂಬವಲ್ಲವೇ? ಅವಳು ದುಡಿದು ಮನೆಗೆ ಆಧಾರವಾಗಿ ನಿಂತು ತನ್ನ ಬಾಳನ್ನು ಕೂಡ ರೂಪಿಸಬೇಕು ಎಂದು ಹೊರಟಿದ್ದವಳಲ್ಲವೇ? ಅವಳೇನು ಸುಮ್ಮ ಸುಮ್ಮನೆ ಸತ್ತದ್ದಲ್ಲ, ಅವಳದ್ದೇನೂ ಲವ್ ಫೇಲ್ಯೂರ್ ಅಲ್ಲ. ಅವಳೇನು ಅನೈತಿಕ ಕೃತ್ಯ ಮಾಡಿ ಸತ್ತವಳಲ್ಲ. ಅವಳು ಯಾರೊಡನೆ ಕೂಡ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಅವಳು ಸತ್ತದ್ದು ತಾನು ಕೆಲಸ ಮಾಡುತ್ತಿದ್ದ ಕಡೆಯಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು. ಅವಳಿಗೆ ನ್ಯಾಯ ಬೇಡವಾ? ಎಲ್ಲಿ ಹೋಗಿದ್ದಿರಿ ಸಂಘಟನೆಗಳೇ. ಎಲ್ಲಿ ಹೋದ್ರಿ ಕಾವ್ಯಾಳ ಪರ ಮೊಸಳೆ ಕಣ್ಣೀರು ಹಾಕಿದವರೇ. ನೀವು ಕಾವ್ಯಾಳ ಪರ ಧ್ವನಿ ಎತ್ತಿದ್ದು ನಿಜಕ್ಕೂ ಸ್ವಾಗತಾರ್ಹ ವಿಷಯ. ಅವಳ ಸಾವಿನ ಕಾರಣ ಕೂಡ ಗೊತ್ತಾಗಬೇಕು. ಅಲ್ಲಿಯೂ ತಪ್ಪು ಮಾಡಿದ್ದು ಯಾರೇ ಇರಲಿ ಅದು ತಪ್ಪೇ. ಹಾಗಾದರೆ ಯುನಿಟಿ ಆಸ್ಪತ್ರೆಯವರು ಮಾಡಿದ್ದು ತಪ್ಪಲ್ವಾ? ಯುನಿಟಿ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟರೆ ಅದು ದೊಡ್ಡದಲ್ವಾ?
ಸ್ಫೂರ್ತಿಯಂತವರು ಹೊಟ್ಟೆಪಾಡಿಗೆ ಎಲ್ಲಿಯಾದರೂ ಕೆಲಸಕ್ಕೆ ನಿಂತಾಗ ಅಲ್ಲಿನವರು ಕಿರುಕುಳ ಕೊಟ್ಟು ಅವಳು ಸತ್ತರೆ ಒಬ್ಬನೇ ಒಬ್ಬ ವ್ಯಕ್ತಿಗೆ ಕೇಳಲು ಧಮ್ ಇದೆಯಾ? ಅವಳು ಕೂಡ ಅಲ್ಲಿ ಕೆಲಸಕ್ಕೆ ಸೇರುವಾಗ ಅವರು ಕೊಡುವ ಸಂಬಳದಿಂದ ಮನೆಗೆ ಸಹಾಯವಾಗುತ್ತದೆ ಎಂದು ಆಸೆಯಿಂದ ಸೇರಿದ್ದಲ್ವಾ? ಅಲ್ಲಿಯಾದರೆ ಕಾವ್ಯಾ ಯಾವ ಕಾರಣಕ್ಕೆ ಸತ್ತಳು ಎಂದು ಇನ್ನು ತನಿಖೆಯಾಗುತ್ತಿದೆ. ಆದರೆ ಇಲ್ಲಿ ಹಾಗಲ್ಲ, ನನಗೆ ಆಸ್ಪತ್ರೆಯಲ್ಲಿ ಮೇಲಾಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಸ್ಫೂರ್ತಿ ಬಾಯಿ ಬಿಟ್ಟು ತಾಯಿಯ ಹತ್ತಿರ ಹೇಳಿದ್ದಾಳೆ. ಆದರೆ ತಾಯಿ ಬೇರೆ ಉಪಾಯವಿಲ್ಲದೆ ಸ್ಪಲ್ಪ ಅನುಸರಿಸಿಕೊಂಡು ಹೋಗು ಎಂದಿದ್ದಾರೆ. ಅಂದರೆ ಅವಳ ಕೆಲಸ ಆ ಮನೆಯವರಿಗೆ ಎಷ್ಟು ಅಗತ್ಯ ಇತ್ತು ಎಂದು ಗೊತ್ತಾಗುತ್ತದೆಯಲ್ವಾ? ಪಾಪದ, ಬಡ ಮನೆತನದ ಯುವತಿ ಕೆಲಸಕ್ಕೆ ಸೇರಿದರೆ ಅವಳನ್ನು ಹೇಗೆ ಬೇಕಾದರೆ ನಡೆಸಿಕೊಂಡು ಹೋಗಬಹುದು ಎಂದು ಯುನಿಟಿ ಆಸ್ಪತ್ರೆಯವರು ಅಂದುಕೊಂಡಿದ್ದಾರಾ?
ಈ ಎಡಪಕ್ಷಗಳು ಹಿಂದೂ ಶಿಕ್ಷಣ ಸಂಸ್ಥೆಗಳಲ್ಲಿ, ಆಸ್ಪತ್ರೆಯಲ್ಲಿ, ಕಾರ್ಖಾನೆಗಳಲ್ಲಿ ಏನಾದರೂ ನೊಣ ಬಿದ್ದರೂ ದೌರ್ಝನ್ಯ ಎಂದು ಕೆಂಪು ಬಾವುಟ ಹಿಡಿದು ಹೋರಾಡುತ್ತಾರೆ. ಯಾಕೆ ಈಗ ಯುನಿಟಿ ಆಸ್ಪತ್ರೆಯಲ್ಲಿ ಬಡ ಹೆಣ್ಣುಮಗಳು ಅಲ್ಲಿನವರ ಕಿರುಕುಳಕ್ಕೆ ಮಣಿದು ಸತ್ತಿರುವುದು ಕಾಣಿಸಲ್ವಾ? ಹಾಗಾದರೆ ಕಾವ್ಯಾ ಪರವಾಗಿರುವ ಎಲ್ಲರೂ ಮೌನಕ್ಕೆ ಶರಣಾಗಿರುವುದು ಅಲ್ಲಿ ಕಾವ್ಯಾ ಎನ್ನುವುದಕ್ಕಿಂತ ಮೋಹನ ಆಳ್ವಾ ಎಂದು ಅಂದುಕೊಳ್ಳಬೇಕಾ? ಹೋಗಲಿ ಬಂಟ, ಬಿಲ್ಲವರ ನಡುವಿನ ಘರ್ಷಣೆ ಎಂದುಕೊಳ್ಳಬೇಕಾ? ಅಥವಾ ಎಲ್ಲರೂ ಸ್ಫೂರ್ತಿಯ ಜಾತಿ ಹುಡುಕುತ್ತಿದ್ದಿರಾ? ಅಥವಾ ನಮ್ಮಲ್ಲಿ ಅಲ್ಪಸಂಖ್ಯಾತರ ಮಾಲೀಕತ್ವದ ಆಸ್ಪತ್ರೆ ಅದಕ್ಕೆ ಕನಿಕರ ಜಾಸ್ತಿ ಎಂದು ಅಂದುಕೊಳ್ಳಬೇಕಾ? ಎಲ್ಲಿ ಹೋದವು ತಮಗೆ ಬೇಕಾದ ಪ್ರಕರಣವನ್ನು ಎತ್ತಿ ಪಾದಯಾತ್ರೆ ಮಾಡುವವರು, ದೊಂದಿ ಹಿಡಿದು ಪ್ರತಿಭಟನೆ, ಡಿಸಿ ಕಚೇರಿ ಹೊರಗೆ ಪ್ರತಿಭಟನೆ ಎಲ್ಲವೂ ಎಲ್ಲಿ ಹೋಯಿತು? ಉಳ್ಳಾಲದ ಉಚ್ಚಿಲದಲ್ಲಿ ತಾಯಿ ಮತ್ತು ತಂಗಿಯೊಂದಿಗೆ ಜೀವನ ನಡೆಸುತ್ತಿರುವ ಸ್ಫೂರ್ತಿಯ ಕುಟುಂಬಕ್ಕೆ ನ್ಯಾಯ ಬೇಡವೇ?
ಆಕೆಗೆ ಕಿರುಕುಳ ಕೊಟ್ಟವರು ಯಾರೆಂದು ಎಲ್ಲರಿಗೂ ಗೊತ್ತಾಗುವುದು ಬೇಡವೇ? ಇದನ್ನು ಜಾತಿ, ಧರ್ಮದ ಆಧಾರದಲ್ಲಿ ನೋಡುವುದು ಬೇಡಾ. ಆದರೆ ಅವಳ ಡೆತ್ ನೋಟ್ ನಲ್ಲಿ ಕಿರುಕುಳ ಎಂದು ಬರೆದಿರುವಾಗ ಅದು ಯಾರೆಂದು ನೋಡುವುದು ಬೇಡ್ವೆ? ಯುನಿಟಿ ಆಸ್ಪತ್ರೆಯ ಇನ್ಯೂರೆನ್ಸ್ ವಿಭಾಗದಲ್ಲಿ ಯಾರು ಕಿರುಕುಳ ಕೊಟ್ಟರು, ಹೇಳಿ ಯುನಿಟಿ ಆಸ್ಪತ್ರೆಯವರೇ? ಯಾಕೆ ಈ ವಿಷಯ ಇಟ್ಟುಕೊಂಡು ಟಿವಿಗಳಲ್ಲಿ ಪಾನಲ್ ಡಿಸ್ಕಷನ್ ಆಗಲ್ಲ? ಆಸ್ಪತ್ರೆಗಳಲ್ಲಿ ಬಿಳಿ ಕೋಟಿನ ಒಳಗಿರುವ ಕೆಲವು ಕರಿ ಹೆಗ್ಗಣಗಳು ಆಸ್ಪತ್ರೆಗಳನ್ನು ಅಪ್ಪಟ ವ್ಯವಹಾರಿಕ ತಾಣಗಳನ್ನಾಗಿ ಮಾಡಿರುವಾಗ ಯಾರು ತಾನೆ ಏನು ಮಾಡಲು ಸಾಧ್ಯ? ಡಾ| ಮೋಹನ್ ಆಳ್ವರನ್ನು ಇಡಿ ದಿನ ಕ್ಯಾಮೆರಾ ಎದುರು ಕುಳ್ಳಿರಿಸಿ ತನಿಖೆ ಮಾಡಿದ ಟಿವಿ ಮಾಧ್ಯಮಗಳೇ ನಿಮಗೆ ಯುನಿಟಿ ಮೇಲೆ ಯಾಕೆ ಪ್ರೇಮ? ಕೆಲವು ಸೀಸನ್ ಗೆ ತಕ್ಕಂತೆ ಹುಟ್ಟುವ ಸಂಘಟನೆಗಳ ದಿವ್ಯ ಮೌನ ಯಾರಿಗಾದರೂ ಅರ್ಥವಾಯಿತಾ?
Leave A Reply