ಉಗ್ರರ ನಂಟು ಇರುವ ಪಿಎಫ್‍ಐ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ
Posted On September 25, 2017
ನವದೆಹಲಿ : 10 ವರ್ಷ ಉಪರಾಷ್ಟ್ರಪತಿಗಳಾಗಿ ಸಕಲ ಸೌಲಭ್ಯಗಳನ್ನು ಅನುಭವಿಸಿ ಬೀಳ್ಕೊಡುಗೆಗೂ ಮುನ್ನ ಅಲ್ಪಸಂಖ್ಯಾತರಲ್ಲಿ ಆತಂಕ ಮನೆಮಾಡಿದೆ ಎಂದು ವಿವಾದ ಹುಟ್ಟುಹಾಕಿದ್ದ ಹಮೀದ್ ಅನ್ಸಾರಿ ಮತ್ತೆ ಸುದ್ದಿಯಲ್ಲಿದ್ದಾರೆ.
ಕೇರಳದ ಕೋಯಿಕ್ಕೋಡ್‍ನಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಮಹಿಳಾ ಘಟಕ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನ್ಸಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಇದಕ್ಕೆ ವಿಶ್ವ ಹಿಂದೂ ಪರಿಷದ್ ಕಿಡಿಕಾರಿದ್ದು, ಸಿಮಿ ಉಗ್ರ ಸಂಘಟನೆಯ ಮುಂದುವರಿದ ಭಾಗವೇ ಪಿಎಫ್‍ಐ ಯಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಯಲ್ಲಿಯೂ ಪಿಎಫ್‍ಐಗೆ ಉಗ್ರರೊಂದಿಗೆ ನಂಟಿದೆ ಎಂದು ಹೇಳಿದೆ. ಅದನ್ನು ನಿಷೇಧಿಸಲು ಎನ್‍ಐಎ ಶಿಫಾರಸು ಕೂಡ ಮಾಡಿದೆ. ಹೀಗಿದ್ದು ಅನ್ಸಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬೇಜವಾಬ್ದಾರಿ ತೋರಿಸುತ್ತದೆ. ಜೊತೆಗೆ ಧರ್ಮಾಂಧತೆಗೆ ಸಾಕ್ಷಿಯಾಗಿದೆ ಎಂದು ವಿಎಚ್‍ಪಿ ಹರಿಹಾಯ್ದಿದೆ.
- Advertisement -
Trending Now
ರಾಹುಲ್ ಪ್ರಚಾರ ಮಾಡಿದ ಏಳು ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಗೆಲುವು!
November 25, 2024
ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು - ಸಚಿನ್ ಪೈಲೆಟ್
November 22, 2024
Leave A Reply