• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗೋಡೆಯಲ್ಲಿ ಬರೆದಾಗಲೇ ಕೈಕಾಲು ಮುರಿಯಬೇಕಿತ್ತು!!

Hanumantha Kamath Posted On September 22, 2022
0


0
Shares
  • Share On Facebook
  • Tweet It

ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ಒಬ್ಬ ಮಂಗಳೂರಿನಲ್ಲಿ ಗೋಡೆಯ ಮೇಲೆ ದೇಶದ್ರೋಹದ ಬರಹಗಳನ್ನು ಬರೆದಿದ್ದ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದ ಎನ್ನುವುದು ಪತ್ತೆಯಾಗಿದೆ. ಎರಡು ವರ್ಷಗಳ ಹಿಂದೆ ಮಂಗಳೂರಿನ ಕೋರ್ಟಿನ ಆವರಣದಲ್ಲಿದ್ದ ಹಳೆ ಕಟ್ಟಡದ ಮೇಲೆ ದೇಶವಿರೋಧಿ ಬರಹ ಬರೆದು ಅದರಿಂದ ಮೈಲೇಜ್ ಸಿಗಲಿಲ್ಲ ಎಂದು ಇನ್ನೊಂದು ಜನನಿಬಿಡ ಪ್ರದೇಶದ ಗೋಡೆಯ ಮೇಲೆ ಮಂಗಳೂರಿನ ನಾಗರಿಕರಿಗೆ ಎಚ್ಚರಿಕೆ ಸಂದೇಶಗಳನ್ನು ಬರೆಯಲಾಗಿತ್ತು. ಅದರಲ್ಲಿ ಬಂಧಿತರಾದ ಆರೋಪಿಗಳಿಗೆ ಮರುವರ್ಷ ಜಾಮೀನು ಸಿಕ್ಕಿತ್ತು. ಒಬ್ಬ ವ್ಯಕ್ತಿ ಒಂದು ನಗರದ ಒಳಗೆ ಬಂದು ನಗರದ ನಟ್ಟನಡುವಿನ ಗೋಡೆಯಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಬಗ್ಗೆ ಬಹಿರಂಗ ಎಚ್ಚರಿಕೆಯನ್ನು ಕೊಡುತ್ತಾನೆ ಮತ್ತು ನಮ್ಮ ದೇಶದ ಕಾನೂನಿನಲ್ಲಿ ಅವನಿಗೆ ಜಾಮೀನು ಸಿಗುತ್ತದೆ ಎಂದರೆ ಅದಕ್ಕಿಂತ ದುರಂತ ಬೇರೆ ಏನೂ ಇಲ್ಲ. ಹಾಗೆ ಮಾಡಿದ ವ್ಯಕ್ತಿಯನ್ನು ಶಾಶ್ವತವಾಗಿ ಜೈಲಿನಲ್ಲಿಯೇ ಕೂರಿಸಬೇಕಿತ್ತು. ಯಾಕೆಂದರೆ ಅಂತವರು ನಗರದ ಗೋಡೆಯ ಮೇಲೆ ಬರೆದು ನಮ್ಮ ದೇಶ ಭದ್ರತೆಗೆ ಚಾಲೆಂಜ್ ಮಾಡಿದ್ದು ಚಿಕ್ಕವಿಷಯ ಅಲ್ಲ. ಭಯೋತ್ಪಾದಕ ಸಂಘಟನೆಗಳು ಈ ದೇಶದ ಸಂಘಿಗಳನ್ನು ಹಾಗೂ ಮನುವಾದಿಗಳನ್ನು ಏನು ಮಾಡುತ್ತವೆ, ನೋಡುತ್ತೀರಿ ಎನ್ನುವ ಅರ್ಥದ ಬರಹಗಳು ಅವು. ಅವುಗಳನ್ನು ಬರೆದ ವ್ಯಕ್ತಿ ಮುಂದೆ ಅದನ್ನು ಅನುಷ್ಟಾನಕ್ಕೆ ತರುವುದಿಲ್ಲ ಎನ್ನುವ ಗ್ಯಾರಂಟಿ ಇತ್ತಾ? ಹಾಗಾದರೆ ಅವನನ್ನು ಬಿಟ್ಟಿದ್ದು ಯಾಕೆ? ಹಾಗೆ ಬರೆದಿದ್ದ ಶಾರೀಖ್ ಹಾಗೂ ಮುನೀರ್ ಈಗ ಭಯೋತ್ಪಾದಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಉಗ್ರರ ಜಾಡು ಇರುವುದು ಗೊತ್ತಾಗಿ ಹಲವು ಕಾಲಗಳೇ ಕಳೆದಿವೆ. ಯಾಕೆಂದರೆ ಈ ಎರಡು ಪ್ರದೇಶಗಳು ಸಂಘ ಪರಿವಾರದ ಸ್ಟ್ರಾಂಗ್ ಬೆಲ್ಟ್. ಈ ಭಯೋತ್ಪಾದಕರಿಗೆ ಯಾವಾಗಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಬಲ ವೈರಿ. ಆದ್ದರಿಂದ ಇಲ್ಲಿ ಅಂತಹ ಯಾವುದೇ ವಿಧ್ವಂಸಕ ಕೃತ್ಯ ಮಾಡುವ ಮೂಲಕ ಸಂಘ ಪರಿವಾರದ ಕಾರ್ಯಕರ್ತರಲ್ಲಿ ಹೆದರಿಕೆ ಹುಟ್ಟಿಸುವ ಕೆಲಸ ಮಾಡಬೇಕೆನ್ನುವುದು ಅವರ ಹಳೆ ಗುರಿ. ಅದಕ್ಕಾಗಿ ಅವರು ಅವಕಾಶ ಸಿಕ್ಕಾಗ ಅದಕ್ಕೆ ಪ್ರಯತ್ನಿಸುತ್ತಲೇ ಇರುತ್ತಾರೆ. ಅವರು ಯಾವುದೇ ವೇಷದಲ್ಲಿ ಇರಬಹುದು. ನಮ್ಮ ನಿಮ್ಮ ನಡುವೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರಬಹುದು. ನಗರದಲ್ಲಿ ಸುಮ್ಮನೆ ಸುತ್ತಾಡುತ್ತಿರುತ್ತಾರೆ. ಫುಡ್ ಆರ್ಡರ್ ವಿಷಯದಲ್ಲಿ ವಿವಿಧ ಏರಿಯಾಗಳಲ್ಲಿ ಹೋಗಿ ಬರುತ್ತಾರೆ. ಯಾರಿಗೂ ಡೌಟು ಬರುವುದಿಲ್ಲ. ಯಾವುದೇ ಮೂಲೆಯ ಮನೆಗೆ ಹೋಗಲು ಈ ಆನ್ ಲೈನ್ ಫುಡ್ ಡೆಲಿವರಿ ಎನ್ನುವುದು ಲೈಸೆನ್ಸ್ ತರಹ ಸಿಕ್ಕಿರುತ್ತದೆ. ಅದರಿಂದ ಬರುವ ಆದಾಯದಲ್ಲಿ ಅವರಿಗೆ ಏನು ಆಗಬೇಕಾಗಿಲ್ಲ. ಅವರಿಗ ಹೊರಗಿನಿಂದ ಎಲ್ಲಾ ಖರ್ಚುಗಳಿಗೆ ಫಂಡ್ ಬರುತ್ತಾ ಇರುತ್ತದೆ. ನಗರದಲ್ಲಿ ಏನಾದರೂ ಕೋಮು ಸೂಕ್ಷ್ಮ ವಿಷಯ ಆದಾಗ ಗುಂಪಿನಲ್ಲಿ ಹೋಗಿ ಹಿಂದೂವಿಗೆ ಚಾಕು ಹಾಕಲು ಕೂಡ ಇವರು ಹೇಸುವುದಿಲ್ಲ. ಇನ್ನು ಆರೋಪಿಗಳಾದ ಮಾಜ್ ಮುನೀರ್, ಸಯ್ಯದ್ ಯಾಸೀನ್ ಹಾಗೂ ಶಾರೀಖ್ ತೀರ್ಥಹಳ್ಳಿಯಲ್ಲಿ ಬಾಂಬ್ ಬ್ಲಾಸ್ಟ್ ಟ್ರಯಲ್ ಕೂಡ ನಡೆಸಿದ್ದರು ಎನ್ನುವ ವಿಷಯವನ್ನು ಪೊಲೀಸರು ತನಿಖೆಯ ಮೂಲಕ ಬಹಿರಂಗಪಡಿಸಿದ್ದಾರೆ. ಒಂದು ಕಡೆ ಗೋಡೆಯ ಮೇಲಿನ ಬರಹ, ಮತ್ತೊಂದೆಡೆ ಬಾಂಬ್ ಬ್ಲಾಸ್ಟ್ ಟ್ರಯಲ್ ಮಾಡುವ ಮೂಲಕ ಈ ಉಗ್ರರು ಕರ್ನಾಟಕದಲ್ಲಿ ಶಾಂತಿ, ಸುವ್ಯವಸ್ಥೆ ಕದಡಲು ತಯಾರಾಗಿದ್ದರು. ಮುನೀರ್ ಮಂಗಳೂರಿನ ಫ್ಲಾಟ್ ಒಂದರಲ್ಲಿ ಬಾಡಿಗೆಗೆ ಕೂಡ ಇದ್ದ. ಈಗಿನ ಕಾಲದಲ್ಲಿ ಮನೆಯ ಮಾಲೀಕರು ಸರಿಯಾಗಿ ವಿಚಾರಿಸದೇ ಯಾರಿಗೂ ಬಾಡಿಗೆಗೆ ಮನೆ ಕೊಡಬಾರದು ಎನ್ನುವ ಬಗ್ಗೆ ಪೊಲೀಸ್ ಇಲಾಖೆಯಿಂದ ಆಗಾಗ ಜಾಗೃತಿ ಸಂದೇಶಗಳನ್ನು ನೀಡಲಾಗುತ್ತೆ. ಆದರೂ ಇಂತಹ ಖತರನಾಕ್ ಉಗ್ರರು ಹೀಗೆ ನಗರದ ನಡುವೆ ಮನೆಯನ್ನು ಬಾಡಿಗೆಗೆ ಹಿಡಿದಿರುತ್ತಾರೆ. ಇವರು ಎಷ್ಟು ಬಾಡಿಗೆ ಬೇಕಾದರೂ ಕೊಡಲು ತಯಾರು ಇರುವುದು ಮತ್ತು ಧರ್ಮದ ಆಧಾರದ ಮೇಲೆ ಇವರಿಗೆ ಇವರ ಸಮುದಾಯದವರು ಮನೆಯನ್ನು ಆರಾಮವಾಗಿ ನೀಡಿರುತ್ತಾರೆ. ಒಂದು ವೇಳೆ ಇವರ ಚಟುವಟಿಕೆಗಳ ಮೇಲೆ ಸಣ್ಣ ಡೌಟು ಇದ್ದರೂ ಏನು ಮಾತನಾಡದೇ ಸುಮ್ಮನೆ ಇದ್ದುಬಿಡುತ್ತಾರೆ. ಅದೇ ಹಿಂದೂಗಳಿಗೆ ತಮ್ಮ ಆಸುಪಾಸಿನಲ್ಲಿ ಇಂತವರ ಬಗ್ಗೆ ಗುಮಾನಿ ಬಂದರೆ ಹೆದರಿಕೆಯಿಂದ ಪೊಲೀಸರಿಗೆ ಏನೂ ಹೇಳಲು ಹೋಗುವುದಿಲ್ಲ. ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಎನ್ನುವ ಹೆದರಿಕೆ ಇದ್ದೇ ಇರುತ್ತದೆ. ಆದ್ದರಿಂದ ಇಂತವರು ಆರಾಮವಾಗಿ ಇರುತ್ತಾರೆ. ಇದೊಂದು ರೀತಿಯಲ್ಲಿ ನಮ್ಮ ಗುಪ್ತಚರ ದಳದ ವೈಫಲ್ಯ ಎಂದು ಕೂಡ ಹೇಳುವವರು ಇದ್ದಾರೆ. ಆದರೆ ಇಲ್ಲಿ ಎರಡು ರೀತಿಯ ಆಯಾಮಗಳಿವೆ. ಒಂದನೇಯದಾಗಿ ಇವರು ವಿಧ್ವಂಸಕ ಕೃತ್ಯ ಮಾಡುವ ಮೊದಲೇ ಸಿಕ್ಕಿಬಿದ್ದಿರುವುದರಿಂದ ಅವರ ಚಲನವಲನ ಪತ್ತೆಹಚ್ಚುವಲ್ಲಿ ಗುಪ್ತಚರ ದಳದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಈ ಉಗ್ರರು ಏನಾದರೂ ಬಾಂಬ್ ಬ್ಲಾಸ್ಟ್ ಮಾಡಿ ಜನರ ಸಾವು- ನೋವಿಗೆ ಕಾರಣರಾಗಿದ್ದರೆ ಆಗ ಖಂಡಿತ ರಾಜ್ಯದ ಗುಪ್ತಚರ ದಳ ವೈಫಲ್ಯ ಎಂದು ಹೇಳಬಹುದಿತ್ತು. ಹಾಗಾದರೆ ಹೀಗೆ ದೇಶದ್ರೋಹಿಯಾಗುತ್ತಿರುವ ಇಂತಹ ಯುವಕರನ್ನು ಸರಿದಾರಿಗೆ ತರುವುದು ಹೇಗೆ? ಇವರು ಪ್ರತಿ ಶುಕ್ರವಾರ ಪ್ರಾರ್ಥನೆಗೆ ಹೋಗುವ ಮಸೀದಿಗಳ ಧರ್ಮಗುರುಗಳಿಗೆ ಆ ಜವಾಬ್ದಾರಿ ಇದೆ. ಅವರು ತಮ್ಮ ಸಮಾಜದ ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಸರಿದಾರಿಗೆ ತರಬೇಕು. ಇನ್ನು ಹೀಗೆ ಬಂಧಿತರಾಗುವ ಬಹುತೇಕ ಮಂದಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರು!

0
Shares
  • Share On Facebook
  • Tweet It


mangalorenational investigation agency mangaloreniania raid mangalorepfipfi mangalore


Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
You may also like
ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
December 7, 2018
ಕಲಿಯುಗದ ಶ್ರವಣಕುಮಾರ..!
December 3, 2018
ಚೀನಾ ಗೂಡು ದೀಪಕ್ಕೆ‌ ಹೇಳಿ ಗುಡ್ ಬೈ…!! ನಮ್ಮಲ್ಲಿ ಇದೆ ಸ್ವದೇಶಿ ಗೂಡು ದೀಪ..!!
November 5, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search