ಕದ್ರಿಯ ಜೋಗಿ ಮಠದಲ್ಲಿ ಸಿಎಂ ಯೋಗಿ ಆದಿತ್ಯನಾಥ ವಾಸ್ತವ್ಯ!
Posted On October 4, 2017
ಕೇರಳ ಜನರಕ್ಷಾ ಯಾತ್ರೆಗೆ ಆಗಮಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದರು. ಮಂಗಳೂರಿನ ಕದ್ರಿಯ ಯೋಗೇಶ್ವರ ಮಠಕ್ಕೆ ರಾತ್ರಿ ೧೦.೩೦ರ ಸುಮಾರಿಗೆ ಆಗಮಿಸಿದ ಯೋಗಿ ಆದಿತ್ಯನಾಥ ಇಲ್ಲಿಯೇ ಭೋಜನ ಸ್ವೀಕರಿಸಿದರು.
-ಯೋಗಿ ಆದಿತ್ಯನಾಥ ಭೇಟಿಯ ಹಿನ್ನೆಲೆಯಲ್ಲಿ ಕದ್ರಿಯ ಜೋಗಿ ಮಠಕ್ಕೆ ಬಿಗು ಪೊಲೀಸ್
ಭದ್ರತೆ ಕೈಗೊಳ್ಳಲಾಗಿದೆ. ಜೋಗಿ ಸಮಾಜದ ಪ್ರಮುಖರು, ಬಿಜೆಪಿ ಮುಖಂಡರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ನಿಗದಿತ ಕಾರ್ಯಕ್ರಮದ ಪ್ರಕಾರ ಯೋಗಿ ಆದಿತ್ಯನಾಥ ಬುಧವಾರ ರಾತ್ರಿಯೇ ಉತ್ತರ ಪ್ರದೇಶಕ್ಕೆ ನಿರ್ಗಮಿಸಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ನಿರ್ಗಮನದ ಬದಲು ಮಂಗಳೂರಿನಲ್ಲಿ ವಾಸ್ತವ್ಯದ ನಿರ್ಧಾರವನ್ನು ಕೈಗೊಂಡಿದ್ದಾರೆ. ಗುರುವಾರ ಇಲ್ಲಿಂದ ನೇರವಾಗಿ ಹರಿಯಾಣಕ್ಕೆ ತೆರಳಲಿದ್ದಾರೆ. ಯೋಗಿ ಆದಿತ್ಯನಾಥ ಸಂಸದರಾಗಿದ್ದಾಗ ೬ ತಿಂಗಳ ಹಿಂದೆ ಕದ್ರಿ ಜೋಗಿ ಮಠದ ಸ್ವಾಮೀಜಿಯ ಪಟ್ಟಾಭಿಷೇಕಕ್ಕೆ ಆಗಮಿಸಿದ್ದರು. ನಾಥ ಪಂಥದ ಪ್ರಮುಖನ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥರು
ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿಸಿದ್ದರು. ಯೋಗಿ ಆದಿತ್ಯನಾಥರನ್ನು ಕದ್ರಿ ಮಠದ ವತಿಯಿಂದ ರಾಜ ನಿರ್ಮಲನಾಥ್ ಸನ್ಮಾನಿಸಿದರು.
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply