ಯೋಧರಿಗೆ ಸಿಹಿ ಹಂಚಿ ಮೋದಿ ದೀಪಾವಳಿ ಆಚರಣೆ
ಜಮ್ಮು: ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಯೋಧರಿಗೆ ಸಿಹಿ ಹಂಚಿ ಯೋಧರೊಂದಿಗೆ ಸುಮಾರು ಎರಡು ಗಂಟೆ ಸಂಭ್ರಮದಿಂದ ಬೆರೆತರು. ಯೋಧರ ಬಟ್ಟೆ ಧರಿಸಿ ಗಮನ ಸೆಳೆದ ಮೋದಿ, ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
‘ಯೋಧರೊಂದಿಗೆ ಬೆರೆಯುವ ಮೂಲಕ ನಾನು ಪ್ರತಿ ಭಾರಿ ಹೊಸ ಸ್ಫೂರ್ತಿ ಪಡೆಯುತ್ತೇನೆ. ಸೈನಿಕರೊಂದಿಗೆ ಹಬ್ಬ ಆಚರಿಸುವುದೇ ಹೆಮ್ಮೆ. ಸಂದಿಗ್ಧ ಸ್ಥಿತಿಯಲ್ಲೂ ದೇಶಕ್ಕಾಗಿ ಹೋರಾಡುವ ಯೋಧರ ಕೆಚ್ಚು ಮತ್ತು ಸಾಹಸ, ತ್ಯಾಗ ಸ್ಮರಣೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಾಯಿ ಭಾರತ ಮಾತೆಯನ್ನು ರಕ್ಷಿಸುವ ಮಹತ್ತರ ಹೊಣೆಗಾರಿಕೆಯನ್ನು ಯೋಧರು ನಿಭಾಯಿಸುತ್ತಿದ್ದಾರೆ. ಅವರೊಂದಿಗೆ ಹಬ್ಬ ಆಚರಿಸುತ್ತಿರುವುದು ಸಂತಸ ಮೂಡಿಸಿದೆ. ದೇಶಕಾಯುವವರಿಗೆ ಕೇಂದ್ರ ಸರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಲಿದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿ ಮಾಡಲಾಗುವುದು ಎಂದು ಹೇಳಿದರು.
ಮೋದಿಗೆ ಸೇನಾ ಮುಖ್ಯಸ್ಥ ಬಿಫಿನ್ ರಾವತ್, ಸೇರಿ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.
Leave A Reply