• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ರಾಷ್ಟ್ರಪತಿಗಳು ಟಿಪ್ಪುವನ್ನು ಹೊಗಳಿದ್ದು ಯಾಕೆ ಗೊತ್ತಾ?

Tulunadu News Posted On October 26, 2017
0


0
Shares
  • Share On Facebook
  • Tweet It

ವಿಧಾನಸೌಧದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉಭಯ ಸದನಗಳನ್ನು, ಸಂಸದರನ್ನು, ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲಿಯವರೆಗೆ ಕಾಂಗ್ರೆಸ್ಸಿನವರಿಗೆ ಭಾರತೀಯ ಜನತಾ ಪಾರ್ಟಿಯವರ ಟಿಪ್ಪು ಜಯಂತಿ ವಿರೋಧಿ ಹೋರಾಟದ ಬಗ್ಗೆ ಮಾತನಾಡಲು ಅಷ್ಟೇನೂ ವಿಷಯಗಳಿರಲಿಲ್ಲ. ಆದರೆ ಯಾವಾಗ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಟಿಪ್ಪುವಿನ ವಿಷಯ ತೆಗೆದರೋ ಬಿಜೆಪಿಗೆ ಆಶ್ಚರ್ಯವಾಯಿತು. ಅದರ ನಂತರ ರಾಷ್ಟ್ರಪತಿಗಳು ಟಿಪ್ಪುವನ್ನು ಹೊಗಳಲು ಶುರು ಮಾಡಿದರು. ಅದು ಬಿಜೆಪಿಗೆ ಮಟ್ಟಿಗೆ ಶಾಕ್. ಹಾಗಾದರೆ ರಾಷ್ಟ್ರಪತಿಗಳು ಟಿಪ್ಪುವನ್ನು ಹೊಗಳಬಾರದಾ ಎನ್ನುವ ಪ್ರಶ್ನೆ ಬರುತ್ತದೆ.

ಒರ್ವ ಸಾಂವಿಧಾನಿಕ ಪ್ರತಿನಿಧಿಯಾಗಿ ರಾಷ್ಟ್ರಪತಿಗಳು ಯಾರನ್ನು ಕೂಡ ಹೊಗಳಬಹುದು, ಅದರಲ್ಲಿ ತಪ್ಪು ಇಲ್ಲ. ಯಾಕೆಂದರೆ ಅವರ ಮಾತುಗಳನ್ನು ಯಾರೂ ಕೂಡ ಹೀಗೆ ಹೇಳಬೇಕು, ಹಾಗೆ ಹೇಳಬೇಕು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ರಾಷ್ಟ್ರಪತಿಗಳು ಯಾವುದೇ ಪಕ್ಷದ ಪ್ರತಿನಿಧಿಯಲ್ಲ. ಅದು ರಾಜ್ಯಪಾಲರಿಗೂ ಅನ್ವಯಿಸುತ್ತದೆ. ಆದರೂ ಬಿಜೆಪಿಗೆ ರಾಷ್ಟ್ರಪತಿಗಳ ಭಾಷಣದಿಂದ ತಮ್ಮ ಹೋರಾಟಕ್ಕೆ ಹಿನ್ನಡೆ ಎಂದು ಅನಿಸಬಹುದು. ವಿಧಾನ ಮಂಡಲದ ನಿಯಾಮಾವಳಿಗಳನ್ನು ಅರಿತಿರುವವರಿಗೆ ಒಂದು ವಿಷಯ ಸ್ವಷ್ಟ ಗೊತ್ತಿರುತ್ತದೆ. ಉಭಯ ಮಂಡಲಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವಾಗ ಅದನ್ನು ತಯಾರಿಸಿ ಕೊಡುವುದು ರಾಜ್ಯ ಸರಕಾರದ ಅಧೀನದಲ್ಲಿರುವ ಅಧಿಕಾರಿಗಳು. ಆದ್ದರಿಂದ ಯಾವ ಪಕ್ಷದ ಸರಕಾರ ಇರುತ್ತದೆಯೋ ಅದಕ್ಕೆ ಸರಿಯಾಗಿ ಭಾಷಣ ಸಿದ್ಧಪಡಿಸಿ ಅದು ರಾಜ್ಯ ಸರಕಾರವನ್ನು ಹೊಗಳಿಯೇ ಇರುತ್ತದೆ. ಒಂದು ವೇಳೆ ರಾಜ್ಯಪಾಲರು ಬೇರೆ ಪಕ್ಷದ ಹಿನ್ನಲೆಯಿಂದ ಬಂದವರಾಗಿದ್ದರೂ ಅವರು ರಾಜ್ಯ ಸರಕಾರ ಕೊಟ್ಟ ಭಾಷಣವನ್ನೇ ನೋಡಿ ಓದಿ ತಮ್ಮ ಕೆಲಸ ಮುಗಿಸುತ್ತಾರೆ. ಆದ್ದರಿಂದ ಅದರ ಮೇಲೆ ಚರ್ಚೆಯಾದರೂ ಅದು ಈಗಿನ ದಿನಗಳಲ್ಲಿ ಕುತೂಹಲ ಉಳಿಸಿಲ್ಲ.

ಆದರೆ ಬುಧವಾರ ರಾಷ್ಟ್ರಪತಿಗಳು ಮಾಡಿದ ಭಾಷಣ ಉಭಯ ಮಂಡಲವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುತ್ತಾರಲ್ಲ, ಆ ಭಾಷಣವಲ್ಲ. ಆದರೂ ಅವರ ಭಾಷಣವನ್ನು ಸಿದ್ಧಪಡಿಸಿ ಇಟ್ಟಿದ್ದು ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಗಳ ಸಮೂಹ. ಅವರು ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ರಾಷ್ಟ್ರಪತಿಗಳ ಆಪ್ತ ಐಎಎಸ್ ಅಧಿಕಾರಿಗಳ ವಲಯ ಪರಿಶೀಲಿಸಿದೆ. ಅದರಲ್ಲಿ ವಿವಾದಕ್ಕೆ ಒಳಗಾಗುವ ವಿಷಯ ಯಾವುದೂ ಇಲ್ಲ ಎಂದು ಖಚಿತಪಡಿಸಿ ನಂತರ ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿಯ ತನಕ ಎಲ್ಲವೂ ಸರಿಯಿತು. ಆದರೆ ಕೊನೆಯ ಕ್ಷಣದಲ್ಲಿ ರಾಷ್ಟ್ರಪತಿಗಳ ಭಾಷಣದ ಪ್ರತಿಯನ್ನು ಬದಲಾಯಿಸಿ ವಿವಾದಾತ್ಮಕ ವಿಷಯ ಇರುವ ಭಾಷಣದ ಪ್ರತಿ ಇಡಲಾಗಿದೆ. ಹೇಗೂ ತಮ್ಮ ಆಪ್ತ ಕಾರ್ಯದರ್ಶಿ ಸಮೂಹ ಓದಿ ಎಸ್ ಎಂದಿರುವಾಗ ಏನೂ ತಪ್ಪಿರಲಿಕ್ಕಿಲ್ಲ ಎಂದು ಅಂದುಕೊಂಡು ರಾಷ್ಟ್ರಪತಿಗಳು ಓದಿದ್ದಾರೆ. ಹೊಸ ಭಾಷಣದಲ್ಲಿ ಉದ್ದೇಶಪೂರ್ವಕವಾಗಿ ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಕೈಬಿಟ್ಟು ಬಿಜೆಪಿ ಬಗ್ಗೆ ಅಪಸ್ವರ ಎಬ್ಬಿಸೋಣ ಎಂದು ಕಾದ ಕಾಂಗ್ರೆಸ್ಸಿಗೆ ಟಿಪ್ಪುವನ್ನು ಹೊಗಳಿದ ರಾಷ್ಟ್ರಪತಿಗಳಿಂದ ಸಿಕ್ಕಿದ ಮೈಲೇಜ್ ದೇವೆಗೌಡರ ಹೆಸರನ್ನು ಕೈಬಿಟ್ಟ ಕಾರಣ ಹುಣಸೆ ಹಣ್ಣು ನೀರಿನಲ್ಲಿ ತೊಳೆದಂತಾಗಿದೆ .

0
Shares
  • Share On Facebook
  • Tweet It




Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Tulunadu News August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Tulunadu News August 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search